fbpx
ದೇವರು

ಈ ಕಾರಣಕ್ಕೋಸ್ಕರ ದುಡ್ಡು ಕೊಟ್ರೆ ಮಾತ್ರ ಕಾರ್ಯಕ್ರಮಗಳಿಗೆ ಬರುತ್ತಾರಂತೆ ಪ್ರಥಮ್!

ಈ ಕಾರಣಕ್ಕೋಸ್ಕರ ದುಡ್ಡು ಕೊಟ್ರೆ ಮಾತ್ರ ಕಾರ್ಯಕ್ರಮಗಳಿಗೆ ಬರುತ್ತಾರಂತೆ ಪ್ರಥಮ್!

 

 

ಪ್ರಚಾರಕ್ಕಾಗಿಯೇ ಪ್ರಥಮ್ ಇದ್ದಾರೋ ಅಥವಾ ಪ್ರಚಾರವೇ ಪ್ರಥಮ್’ನನ್ನು ಬಿಡುತ್ತಿಲ್ಲ ಗೊತ್ತಾಗುತ್ತಿಲ್ಲ,. ಸದಾ ಒಂದಿಲ್ಲೊಂದು ಹುಚ್ಚಾಟ, ಗಿಮ್ಮಿಕ್ ಗಳಿಂದಲೇ ಸುದ್ದಿಯಾಗುವ ಪ್ರಥಮ್ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಆದರೆ ಈ ಭಾರಿ ಒಳ್ಳೆಯ ಕೆಲಸಕ್ಕಾಗಿ ಸುದಿಯಾಗುತ್ತಿದ್ದಾರೆ. ಹೌದು, ಪ್ರಥಮ್ ಇತ್ತೀಚಿನ ಕೆಲವು ದಿನಗಳಿಂದ ತಾನು ಬಿಗ್ ಬಾಸ್ ನಿಂದ ಬಂದ ನಂತರ ಬದಲಾದಂತೆ ವರ್ತಿಸುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ನಟ ಸತ್ಯಜಿತ್, ಶಂಕರ್ ಅಶ್ವಥ್ ಅವರಿಗೆ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ತನ್ನ ಮೊದಲ ಚಿತ್ರ ಚಿತ್ರ ದೇವರಂತ ಮನುಷ್ಯ ಚಿತ್ರ ತೆರೆ ಕಂಡ ಮೇಲೆ ಇದೇ ಮೊದಲ ಬಾರಿಗೆ ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.

 

 

ಪ್ರಥಮ್ ಇನ್ಮುಂದೆ ಹಣ ಪಡೆಯದೇ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲವಂತೆ. ಯಾಕೆಂದ್ರೆ ಮಂಗಳೂರಿನ ಬಳಿ ಇರುವ ಆಶ್ರಮಕ್ಕೆ ತಮಗೆ ಬರುವ ಹಣದಲ್ಲಿ ಅರ್ಧ ನೀಡಲು ಪ್ರಥಮ್ ನಿರ್ಧರಿಸಿದ್ದು, ಆ ಕಾರಣಕ್ಕಾಗಿ ಹಣ ಪಡೆಯದೇ ಸಮಾರಂಭಗಳಿಗೆ ಹೋಗುವುದಿಲ್ಲ ಎಂದು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಹಾಕಿದ್ದಾರೆ.

 

ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ.

“ದಯಮಾಡಿ ಓದಿ.ಸರಿ ಅನಿಸಿದರೆ share ಮಾಡಿ.ಮಂಗಳೂರಿನ #ತಬಸ್ಸುಮ್ ಎಂಬ ಮುಸಲ್ಮಾನ ಮಹಿಳೆ ಬಹಳ ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ.ಸಾಮಾನ್ಯವಾಗಿ ಅನಾಥ ಮಕ್ಕಳಿಗೆ ಆಶ್ರಯ,ವಿಧ್ಯೆ ನೀಡೋದು ಕೆಲವರು ನಿಮಗೆ ಗೊತ್ತಿದೆ.ಆದರೆ #HIV ಸೋಂಕಿನ ಮಕ್ಕಳಿಗೆ ವಿಧ್ಯಾಭ್ಯಾಸ,ಆಶ್ರಯ ಇವರು ನೀಡ್ತಾ ಇದ್ದಾರೆ.ಎಲ್ಲಾ ಜಾತಿಯ (H.I.V) ಸೋಂಕಿರುವ ಮಕ್ಕಳು ಇಲ್ಲಿ ಇದಾರೆ.ಇವರ ಸಂಪೂರ್ಣ ಜವಾಬ್ದಾರಿ ಹಿರಿಯರು,ಸೋದರರಾದ Rasheed Vitla ರವರು ಈ trust ಗೆ ಸಹಕಾರ ನೀಡ್ತಾ ಇದಾರೆ.ಮೊನ್ನೆ ಫೋನ್ ಮಾಡಿ ಮಂಗಳೂರಿಗೆ ಹೋದಾಗ ಕರ್ಕೊಂಡು ಹೋದ್ರು….ಬಹಳ ಖುಷಿ ಆಯ್ತು ಇವರ ಬಗ್ಗೆ.ಎಂತ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ #ತಬಸ್ಸಮ್ ರವರು ಅಲ್ವಾ?ಹೆಚ್ಚು ಕಟ್ಟುಪಾಡುಗಳಿರುವ ಮುಸ್ಲಿಂ ರಲ್ಲಿ ಇಂತ ದಿಟ್ಟತನ ನೋಡಿ ಹೆಮ್ಮೆ ಅನಿಸಿತು.ನನ್ನ ಕೈಲಾದ ಧನಸಹಾಯ ನೀಡಿ #cheque ನೀಡಿ ಮುಂದೆಯೂ ನೀಡುವ ಮಾತನ್ನ ಕೊಟ್ಟು ಬಹಳ ಹೆಮ್ಮೆಯಿಂದ ಬಂದೆ.H.I.V (AIDS) ಸೋಂಕಿರುವ ಕಾರಣ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರ ಫೋಟೋ blur ಮಾಡಲಾಗಿದೆ.ರಷೀದ್‌ ರವರ ಮೇಲೆ ಅಭಿಮಾನ double ಆಯಿತು….ಇನ್ನು ಮುಂದೆ ನನ್ನ ಯಾರೇ ಕಾರ್ಯಕ್ರಮಕ್ಕೆ ಕರೆದರೂ ಈ ಅಶ್ರಮಕ್ಕೆ ಅರ್ಧ ದುಡ್ಡು ಕೊಡುವ ಮನಸ್ಸು ಮಾಡಿದ್ದೇನೆ.ಇಂತಹ ಹೆಮ್ಮೆಯ ಮುಸ್ಲಿಂರು (ತಬಸ್ಸುಮ್, ರಶೀದ್) ನನಗೆ ಆದರ್ಶ….ಯಾರ್ ಮಾಡ್ತಾರೆ ಗುರು ಈಗಿನಕಾಲದಲ್ಲಿ ಇಷ್ಟು ಒಳ್ಳೇ ಕೆಲಸ?#Hatssoff…
ಇನ್ಮೇಲೆ ನನ್ನ ಕಾರ್ಯಕ್ರಮಕ್ಕೆ ಕರೆಯೋದಾದ್ರೆ ಈ ಅಶ್ರಮಕ್ಕೆ ದುಡ್ಡು ಕೊಡಲೇಬೇಕು….ಇಲ್ದಿದ್ರೆ ನಾನ್ ಬರಲ್ಲ….ನಿಮ್ಮೆಲ್ಲರಲ್ಲೂ ಒಂದು ಮನವಿ…ಆ ಮುಸ್ಲಿಂ ಸೋದರಿ ತಬಸ್ಸುಮ್ ರಿಗೆ ಅಭಿನಂದಿಸುತ್ತಾ ದಯವಿಟ್ಟು ಈ ಖಾತೆಗೆ ನಿಮ್ಮ ಕೈಲಾದ ಸಹಾಯ ಮಾಡಿ.ನಿಮ್ಮ ಸಂಪೂರ್ಣ ದುಡ್ಡು ಆ ಮಕ್ಕಳ ನೆಮ್ಮದಿಯ ನಾಳಿನ ಬದುಕಿಗೆ ಆಗುತ್ತದೆ….
ಆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಫೋಟೋ ಮರೆಮಾಚಲಾಗಿದೆ.ಇನ್ಮೇಲೆ ನನ್ನ ಕಾರ್ಯಕ್ರಮಕ್ಕೆ ಕರೆದರೆ ಇಲ್ಲಿಗೂ ಸ್ವಲ್ಪ ದುಡ್ಡು ಕೊಡಲೇಬೇಕು…
Bank Details;

SNEHADEEP
CORORATION BANK
Branch: Poonja Arcade Hampankatta Mangaluru
Ac No: 520101008384599
IFSC: CORP0000129

ನಿಮ್ಗೆ ಎಷ್ಟು ಜನಕ್ಕೆ ನನ್ನಮೇಲೆ ಪ್ರೀತಿ,ದ್ವೇಷ ಇದ್ಯೋ ನನಗೆ ಗೊತ್ತಿಲ್ಲ….ಒಂದು ಒಳ್ಳೆಯ ಕೆಲಸ…#ಅಹಂ ಪಕ್ಕಕ್ಕಿಟ್ಟು ಇದನ್ನ share ಮಾಡಿ….ನನಗೆ ಬೈಯ್ಯಬೇಕು ಅನ್ಸಿದ್ರೆ ಬೇರೆ post ಹಾಕಿದಾಗ negative comments ಹಾಕಿ..ನನಗೂ ಅಭ್ಯಾಸ ಆಗೋಗಿದೆ‌…but ಇದಂತೂ ಆತ್ಮತೃಪ್ತಿಯ ಕೆಲಸ…ಕೈಮುಗಿತಿನಿ…share ಮಾಡಿ.ಧನ ಸಹಾಯ ಮಾಡಿ.ಈ ಮಕ್ಕಳ ಬಾಳಿಗೆ ಬೆಳಕಾಗಿ…
ದಯವಿಟ್ಟು share ಮಾಡಿ….”

ಎಂದು ಡೀಟೈಲಾಗಿ ಪ್ರಥಮ್ ತಮ್ಮ ನಿಲುವನ್ನು ಫೇಸ್ಬುಕ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top