fbpx
ಮನೋರಂಜನೆ

ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನಸೋತ ಪುನೀತ್ ರಾಜಕುಮಾರ್!

ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನಸೋತ ಪುನೀತ್ ರಾಜಕುಮಾರ್!

 

 

ಪ್ರತಿಯೊಬ್ಬ ಕಲಾವಿದರು ತಮ್ಮದೇ ಆದ ವಿಶಿಷ್ಟ ಅಭಿಮಾನಿಗಳ ಬಳಗವನ್ನು ಹೊಂದಿರುತ್ತಾರೆ. ತಾವು ಮಾಡುವ ಚಿತ್ರಗಳನ್ನು ನೋಡುವುದಲ್ಲದೆ ತಮ್ಮ ನೆಚ್ಚಿನ ನಟ ನಟಿಯರನ್ನು ಯಥಾವತ್ತಾಗೇ ಅನುಕರಣೆ ಮಾಡು ಭರದಲ್ಲೇ ಅಭಿಮಾನಿಗಳು ತಲ್ಲೀನರಾಗಿರುತ್ತಾರೆ.  ತಮ್ಮ ನಟನಿಗೆ ಏನಿಷ್ಟ. ಏನಿಷ್ಟವಿಲ್ಲಾ, ಕೆಲವು ವಸ್ತಗಳ ಜೊತೆಯಿರುವ ಭಾವನಾತ್ಮಕ ಸಂಭಂದ ಸೇರಿ ಅನೇಕಾನೇಕ ವಿಷಯವನನ್ನು ರಿಸರ್ಚ್ ಮಾಡಿ ತಿಳ್ಕೊಂಡಿರುತ್ತಾರೆ. ಕೆಲವರು ತಮ್ಮ ನೆಟರಿಗೆ ಇಷ್ಟವಾಗುವ ಅಪರೂಪದ ವಸ್ತುಗಳನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡುತ್ತಾರೆ. ಈಗ ಅಂತದ್ದೇ ಒಬ್ಬ ಪುನೀತ್ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ಅಪರೂಪದ ಗಿಫ್ಟ್ ವೊಂದನ್ನ ನೀಡಿದ್ದಾನೆ!

 

 

ಬೆಟ್ಟದ ಹೂವು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಬದುಕಿಗಾಗಿ ಹಾಗೂ ಪುಸ್ತಕ ಕೊಂಡುಕೊಳ್ಳಲು ಹೋರಾಟ ಮಾಡುತ್ತಲೇ ಇರುತ್ತಾರೆ ಕೊನೆಗೂ ಆ ಚಿತ್ರದಲ್ಲಿ ಆ ಪುಸ್ತಕವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಚಿತ್ರದಲ್ಲಿ ಬರುವ ವಾಲ್ಮೀಕಿ ರಾಮಾಯಣ ಪುಸ್ತಕದ ಜೊತೆ ಪುನೀತ್’ಗೆ ಒಂದು ರೀತಿಯ ಭಾವನಾತ್ಮಕ ಸಂಭಂದವಿದೆ ಏಕೆಂದರೆ ಆ ಚಿತ್ರ ಪುನೀತ್’ಗೆ ದೊಡ್ಡ ಮಟ್ಟದಲ್ಲಿ ಪ್ರಶಂಶೆಯನ್ನು ತಂದುಕೊಟ್ಟಿತ್ತು. ಈಗ ಅವರ ಅಭಿಮಾನಿಯೊಬ್ಬ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಪುನೀತ್ ಗೆ ಉಡುಗೊರೆಯಾಗಿ ನೀಡಿದ್ದು ಈ ಬಗ್ಗೆ ಪುನೀತ್ ಟ್ವಿಟರ್ ನಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪುನೀತ್ “ಬೆಟ್ಟದಹೂವು movieLi ಎಷ್ಟೇ ದುಡ್ಡು save ಮಾಡದ್ರೂ ತೊಗೊಳೋಕ್ಕೆ ಆಗ್ಲಿಲ್ಲ, finally a fan gifted it. “ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಒಟ್ನಲ್ಲಿ ತಮ್ಮ ಅಭಿಮಾನಿಗಳಿಂದ ಇಂತಹ ಅಪರೂಪದ ಉಡುಗೊರೆಗಳನ್ನು ಸ್ವೀಕರಿಸುವ ಪ್ರತಿಯೊಬ್ಬ ಕಲಾವಿದರು ಅವನ್ನು ತಮ್ಮ ನೆನಪಿನ ಬುತ್ತಿಗೆ ಹಾಕಿ ಜೋಪಾನ ಮಾಡುತ್ತಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top