fbpx
ಮನೋರಂಜನೆ

ವಿರಾಟ್ ಕೊಹ್ಲಿ ಹನಿಮೂನ್ ಮೇಲೆ ಬಿತ್ತು ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್ ಕಣ್ಣು!

ವಿರಾಟ್ ಕೊಹ್ಲಿ ಹನಿಮೂನ್ ಮೇಲೆ ಬಿತ್ತು ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್ ಕಣ್ಣು!

 

 

ಬಾಲಿವುಡ್‌ನಲ್ಲಿ ಬಿಚ್ಚಿ ತೋರಿಸೋ ಪರಾಕ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ನಟೀಮಣಿಯರದ್ದೊಂದು ದಂಡೇ ಇದೆ. ಅಂಥವರ ಸಾಲಿನಲ್ಲಿ ರಾಖಿ ಸಾವಂತ್‌ಳದ್ದು ಅಗ್ರಸ್ಥಾನ. ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ನಟಿ ಅನ್ನಿಸಿಕೊಳ್ಳೋದು ಹೇಗೆ? ಸದಾ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಖಿ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

 

 

ಈತ್ತೀಚಿಗೆ ತನಗೆ ಸಂಬಂಧವೇ ಇಲ್ಲದ ಇಶ್ಯೂಗಳಲ್ಲೆಲ್ಲ ಮೂಗು ತೂರಿಸಿ ಮಾತಾಡಿ ನಗೆಪಾಟಲಿಗೆ ತುತ್ತಾಗಿರುವ ಈ ನಟಿಗೆ ಸದ್ಯ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಅನಿಮೂನ್ ನದ್ದೇ ಚಿಂತೆ. ಎರಡು ವರ್ಷಗಳ ಹಿಂದೆ ತಾನು ವಿರಾಟ್’ರನ್ನು ಪ್ರೀತಿಸುತ್ತಿದ್ದಾಗಿ ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದ ರಾಖಿ ಸಾವಂತ್, ವಿರಾಟ್ ಅವರು ಅನುಷ್ಕಾ ಜೊತೆ ಮದುವೆಯಾಗಿರುವುದಕ್ಕೆ ನಿರಾಸೆಗೊಂಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮಾಡಿ ಬೇಸರವನ್ನು ವ್ಯಕ್ತಪಡಿಸಿದ್ದರು.

 

 

ಇದೀಗ ವಿರಾಟ್ ಕೊಹ್ಲಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ತನ್ನ ಫೋಟೋಗೆ ಕಮೆಂಟ್​ ಮಾಡಿರುವ ರಾಖಿ “ಹಾಯ್​ ಬೇಬಿ, ಸ್ವೀಟ್​ಹಾರ್ಟ್​ ಫ್ರೆಂಡ್​, ಹನಿಮೂನ್​ ಆಗೋಯ್ತಾ’ ಎಂದು ಬೇಸರದಿಂದ ಇರುವ ಇಮೋಜಿಯೊಂದಿಗೆ ಪೋಸ್ಟ್​ ಮಾಡಿದ್ದಾರೆ. ರಾಖಿ ಹಾಕಿರುವ ಕಮೆಂಟ್​ಗೆ ಅನುಷ್ಕಾ ಹಾಗೂ ವಿರಾಟ್​ ಅಬಿಮಾನಿಗಳು ರಾಖಿ ಮೇಲೆ ಸಾಕಷ್ಟು ಟ್ರೋಲ್​ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top