fbpx
ಮನೋರಂಜನೆ

ಕನ್ನಡ ರ‍್ಯಾಪ್‌ ಕಿಂಗ್ ಚಂದನ್ ಶೆಟ್ಟಿ ಮೇಲೆಯೇ ರ‍್ಯಾಪ್‌ ಸಾಂಗ್ ಹಾಡಿದ ಪುಟ್ಟ ಬಾಲಕಿ.

ಕನ್ನಡ ರ‍್ಯಾಪ್‌ ಕಿಂಗ್ ಚಂದನ್ ಶೆಟ್ಟಿ ಮೇಲೆ ರ‍್ಯಾಪ್‌ ಸಾಂಗ್ ಬರೆದು ಹಾಡಿದ ಪುಟ್ಟ ಬಾಲಕಿ.

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ಪ್ರಚಾರಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ಹೊರಬಂದ ಚಂದನ್ ಶೆಟ್ಟಿ ಮೇಲೆ ಅಭಿಮಾನದ ಹೊಳೆಯೇ ಹರಿದು ಬರುತ್ತಿದೆ.

 

 

ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಚಂದನ್ ಹಾಡುಗಳಿಗೆ ತಲೆ ತೂಗುವವರೇ ಇಲ್ಲ, ಈಗ ಎರಡನೇ ತರಗತಿಯಲ್ಲಿ ಓದುತ್ತಿರುವ ಮಾನ್ಯ ಹರ್ಷ ಎಂಬ ಪುಟ್ಟ ಬಾಲಕಿಯೊಬ್ಬಳು ಚಂದನ್ ಕುರಿತು ಹಾಡು ರಚಿಸಿ ರ್ಯಾಪ್ ಶೈಲ್ ಹಾಡಿದ್ದಾಳೆ.ಚಂದನ್ ಚಂದನ್ ಚಂದನ್ ಶೆಟ್ಟಿ,,, ಹಾಡ್ತಾನೆ ಡಬ್ಬ ಡಬ್ಬ ಡಬ್ಬವನ್ನ ಕುಟ್ಟಿ ಎಂದು ಸಕ್ಕಾಟಾಗಿ ಹಾಡಿದ್ದಾಳೆ ಈ ಹಾಡನ್ನು ಚಂದನ್ ಶೆಟ್ಟಿಗೆ ಡೆಡಿಕೇಟ್ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದ್ದು ಪುಟ್ಟ ಪೋರಿಯ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಂದನ್ ಮೇಲೆ ಪುಟಾಣಿ ಹಾಡಿರುವ ಹಾಡನ್ನು ಇಲ್ಲಿ ನೋಡಿ👇👇👇👇👇👇

 

 

 

ಜೂನಿಯರ್ ನಿವೇದಿತಾ ಗೌಡ ಅಂತಲೇ ಫೇಮಸ್ ಆಗಿರುವ ಮಾನ್ಯ ಹರ್ಷ ಥೇಟ್ ನಿವೇದಿತಾ ಸ್ಟೈಲಲ್ಲೇ ನುಲಿಯುತ್ತ ಇಂಗ್ಲಿಷ್ ನಲ್ಲಿ ಕನ್ನಡ ಮಾತನಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಸೀನಿಯರ್ ನಿವೇದಿತಾ ಹೇರ್ ಸ್ಟೈಲ್ ರೀತಿ ಮಾಡ್ಕೊಂಡು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿತ್ತಿರುವ ಈಕೆಗೆ ವಿಶ್ವ ಸುಂದರಿ ಆಗ್ಬೇಕು, ವಿಜ್ಞಾನಿ ಆಗಬೇಕು ಆಸೆಯಿದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top