fbpx
ಸಿನಿಮಾ

ಬಿಕಿನಿ ಫೊಟೋಗಳ ಬಗ್ಗೆ ಟ್ರೋಲ್ ಮಾಡಿದವರಿಗೆ ಖಡಕ್ ಆಗಿ ಉತ್ತರ ನೀಡಿ ಬಾಯಿ ಮುಚ್ಚಿಸಿದ ಸಮಂತಾ

ಬಿಕಿನಿ ಫೊಟೋಗಳ ಬಗ್ಗೆ ಟ್ರೋಲ್ ಮಾಡಿದವರಿಗೆ
ಖಡಕ್ ಆಗಿ ಉತ್ತರ ನೀಡಿ ಬಾಯಿ ಮುಚ್ಚಿಸಿದ ಸಮಂತಾ

ದಕ್ಷಿಣ ಭಾರತದ ಖ್ಯಾತ ನಟಿ ಆಗಿರುವ ಸಮಂತಾ ಕೆಲವು ದಿನದಿಂದ ಒಂದಿಲ್ಲೊಂದು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಅದರಲ್ಲೂ ತೆಲುಗು ಚಿತ್ರರಂಗದ ನಟ ನಾಗಚೈತನ್ಯ ಜೊತೆಗೆ ಸಪ್ತಪದಿ ತುಳಿದ ಮೇಲೆ ಸಮಂತಾ ಕುರಿತು ಜನರಲ್ಲಿ ಸಿಕ್ಕಾಪಟ್ಟೆ ಕುತೂಹಲವನ್ನು ಮೂಡಿಸಿದೆ.

 

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಸಮಂತಾ ಹಾಟ್‌ ಬಿಕಿನಿ ಚಿತ್ರವೊಂದನ್ನು ಅಪ್ಲೋಡ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿದ್ದಾರೆ. ಸಮುದ್ರದ ತೀರದಲ್ಲಿ ಬಿಕಿನಿ ತೊಟ್ಟು ಮಲಗಿದ ಸಮಂತಾ ಅವರನ್ನು ಕೆಲವರು ಕೊಂಡಾಡಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಮಂತಾ ರವರ ಬಿಕಿನಿ ಫೋಟೋಗೆ ಸಾಕಷ್ಟು ನೆಗೆಟಿವ್‌ ಕಮೆಂಟ್‌ಗಳೂ ಬಂದಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಫೇಸ್ಬುಕ್ ಪುಟದಲ್ಲಿ ಅವರು ಟ್ರೋಲ್‌ಗಳಿಗೂ ಒಳಗಾಗಿದ್ದಾರೆ.

 

ವಿರೋಧಿಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ಉತ್ತರ ನೀಡಿರುವ ಸಮಂತಾ ‘ನಾನು ನನ್ನ ರೂಲ್ಸ್‌‌ಗಳನ್ನು ಬರೆಯುತ್ತೇನೆ..ನೀವು ನಿಮ್ಮ ರೂಲ್ಸ್‌‌ಗಳನ್ನು ಬರೆಯಬೇಕು’ ಎಂದು ಬರೆದು ಸಮಂತಾ ಶೇರ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top