fbpx
ಮನೋರಂಜನೆ

ಮಾದಕ ನಟಿ ಶುಭ ಪೂಂಜಾ ಈಗ ಒಂದು ಮಗುವಿನ ತಾಯಿ!

ಮಾದಕ ನಟಿ ಶುಭ ಪೂಂಜಾ ಈಗ ಒಂದು ಮಗುವಿನ ತಾಯಿ!

 

 

 

ಸ್ಯಾಂಡಲ್‌ವುಡ್‌ನ ಕ್ಯೂಟ್ ಅಂಡ್ ಬಬ್ಲಿ ಹುಡುಗಿ ಶುಭಾ ಪುಂಜಾ.. ಶುಭ ಈಗ ಒಂದು ಮಗುವಿನ ತಾಯಿಯಾಗಿದ್ದಾಳೆ. ಅಯ್ಯೋ ಇದೇನಪ್ಪ ಮೊನ್ನೆ ಮೊನ್ನೆ ತಾನೇ ಈಗಲೇ ಮಾಡುವೆ ಆಗಲ್ಲ ಅಂತ ಹೇಳ್ಕೊಂಡಿರೋರು ಹೀಗ್ ಮಾಡುದ್ರಾ ಅಂತ ಕನ್ಫ್ಯೂಸ್ ಆಗ್ಬೇಡಿ. ನಾವ್ ಹೇಳ್ತಿರೋದು ನಿಜ ಜೀವನದ ಶುಭ ಪೂಂಜಾ ಕಥೆಯಲ್ಲ ಬದಲಾಗಿ ಸಿನಿಮಾ ಕುರಿತಾದ ಸುದ್ದಿ. ಹೌದು ಶುಭ ಪೂಂಜಾ ನಟನೆಯ ಮುಂದಿನ ಚಿತ್ರವಾದ ಗೂಗಲ್ ನಲ್ಲಿ ಒಂದು ಮಗುವಿನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

 

 

ದಶಕಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಶುಭಾ ಪೂಂಜ ಹತ್ತು ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ವಿವಾಹಿತ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ ಈಗ ಗೂಗಲ್ ಚಿತ್ರದ ಮೂಲಕ ಈ ರೀತಿಯ ಪಾತ್ರವನ್ನು ಮಾಡಿದ್ದಾರೆ. ಗೂಗಲ್ ಚಿತ್ರದಲ್ಲಿ ಶುಭ ಮಾಡಿರುವ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದ್ದು ಅದನ್ನು ಬಹಳ ಇಷ್ಟಪಟ್ಟು ಅಚ್ಚುಕಟ್ಟಾಗಿ ಶುಭ ಪೂಂಜಾ ಮಾಡಿ ಮುಗಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಶುಭ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಕಾರಣ ಮದುವೆ ಆಗಿರುವ ಮಹಿಳೆಯ ಪಾತ್ರವನ್ನು ಮಾಡಲು ಶುಭಾ ಒಪ್ಪಿಗೆ ನೀಡಿದ್ದರಂತೆ. ಈ ಹಿಂದೆ ಚಿತ್ರದ ಶೂಟಿಂಗ್ ಸಮಯದಲ್ಲಿನ ಸ್ಟಿಲ್ ಅನ್ನು ಇಟ್ಕೊಂಡು ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆಯಾಗಿದ್ದಾರಂತೆ ಎಂಬಂಥಾ ರೂಮರಿನ ಮೂಲಕವೇ ಚಿತ್ರ ಸುದ್ದಿಗೆ ಗ್ರಾಸವಾಗಿತ್ತು.

 


ಸಂಗೀತ ಹಾಗೂ ಸಂಭಾಷಣೆ ಬರೆಯುವಲ್ಲಿ ಬ್ಯುಸಿಯಾಗಿದ್ದ ಸಾಹಿತಿ ವಿ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಗೂಗಲ್ ಚಿತ್ರ ಹಲವಾರು ಕಾರಣಗಳಿಂದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರ ಇದೆ ತಿಂಗಳು 16ನೇ ತಾರೀಕಿನಂದು ತೆರೆಗೆ ಬರುತ್ತಿದೆ. ನಾಗೇಂದ್ರ ಪ್ರಸಾದ್ ಬಹುಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಚಿತ್ರದಲ್ಲಿ ಅರ್ಧಕ್ಕೂ ಹೆಚ್ಚಿನ ಜವಾಬ್ದಾರಿಗಳನ್ನ ಅವರೇ ನಿರ್ವಹಿಸಿರೋದು ವಿಶೇಷ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿ ಸ್ವತಃ ನಟಿಸಿರೋ ಅವರು ಸಂಗೀತದ ಜವಾಬ್ದಾರಿಯ ಜೊತೆಗೆ ನಿರ್ಮಾಣದ ಭಾರವನ್ನೂ ಹೊತ್ತುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top