fbpx
ಸಮಾಚಾರ

ಮೇಟಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್: ಅಷ್ಟಕ್ಕೂ ಆ ಪೋಸ್ಟ್ ನಲ್ಲಿ ಇದ್ದದ್ದೇನು?

ಮೇಟಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್: ಅಷ್ಟಕ್ಕೂ ಆ ಪೋಸ್ಟ್ ನಲ್ಲಿದ್ದದ್ದೇನು?

 

 

ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಲ್ಲಿ ತಮಗಿಷ್ಟವಿಲ್ಲದ ಸಿನಿಮಾ ನಟನಟಿಯರು, ರಾಜಕಾರಣಿಗಳ ವಿರುದ್ಧ ಮನಸೋ ಇಚ್ಛೆ ಅವಹೇಳನಕಾರಿಯಾಗಿ ಕಾಮೆಂಟ್ ಹಾಕುವ ಪುಂಡರ ಗ್ಯಾಂಗೊಂದು ದೊಡ್ಡದಾಗಿ ಬೆಳೆಯುತ್ತಿದೆ..ಇಂತಹ ಪುಂಡರಿಗೆ ಪೊಲೀಸರು ಆಗಾಗ ತಕ್ಕ ಪಾಠ ಕಳಿಸುತ್ತಲೇ ಇದ್ದರು ಕೂಡ ತಮ್ಮ ಚಾಲೆಯನ್ನು ಇಂಥವರು ಬಿಡೋದೇ ಇಲ್ಲ. ಈಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಮಾಜಿ ಸಚಿವ ಹೆಚ್ ವೈ ಮೇಟಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಫೋಟೋ ಸಮೇತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಡ್ಯಾನಿಯಲ್ ನ್ಯೂಟನ್ ಎಂಬ ಯುವಕನೊಬ್ಬನನ್ನ ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.

 

\

ಸ್ನೇಕ್ ಡ್ಯಾನಿಯಲ್ ಎಂದೇ ಖ್ಯಾತಿಗಳಿಸಿರುವ ಡ್ಯಾನಿಯಲ್ ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು ಮೂಲತಃ ಭಾಗಲಕೋಟೆಯವನಾಗಿದ್ದಾನೆ. ಈತ ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಮೇಟಿ ಅವರ ಫೋಟೋವನ್ನ ಹಾಕಿ “ಇಂತವರನ್ನು ದೇವಸ್ಥಾನ, ಮಸೀದಿ,ಚರ್ಚ್‍ಗಳಂತಹ ಧಾರ್ಮಿಕ ಸ್ಥಳಗಳಿಗೆ ಆಹ್ವಾನಿಸೋದು ಸರಿಯಲ್ಲ.. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ” ಎಂದು ಪೋಸ್ಟ್ ಮಾಡಿದ್ದಾನೆ.

 

 

ಅಲ್ಲದೆ ಪೋಸ್ಟ್ ಮೇಲ್ಭಾಗದಲ್ಲಿ “ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಹೋದರರೆ ಎಷ್ಟು ಜನ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಕಾಮೆಂಟ್ ಮಾಡಿ” ಎಂದು ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾನೆ. ಮೇಟಿಯವರನ್ನ ಕಾರ್ಯಕ್ರ್ರಮಕ್ಕಾಗಿ ಚರ್ಚ್’ವೊಂದಕ್ಕೆ ಆಹ್ವಾನಿಸಲಾಗಿದ್ದು ಇದರಿಂದ ಕೆರಳಿದ ಯುವಕ ಈ ರೀತಿ ಪೋಸ್ಟ್ ಮಾಡಿದ್ದಾನೆ ಎಂದು ಹೇಳಾಗಿದೆ. ಈ ಪೋಸ್ಟ್ ಅನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ ಪರಿಣಾಮವಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top