fbpx
ಹೆಚ್ಚಿನ

 ಆತ್ಮದ ತೂಕ ಎಷ್ಟು ಇರುತ್ತದೆ ಎಂದು ನಿಮಗೆ ಗೊತ್ತಾ ? ನಿಜಕ್ಕೂ ಆತ್ಮಕ್ಕೆ ತೂಕ ಇದೆಯಾ ? ಇದರ ಬಗ್ಗೆ ವಿಜ್ಞಾನಿಗಳು ಏನಂತಾರೆ ಕೇಳಿ

 ಆತ್ಮದ ತೂಕ ಎಷ್ಟು ಇರುತ್ತದೆ ಎಂದು ನಿಮಗೆ ಗೊತ್ತಾ ? ನಿಜಕ್ಕೂ ಆತ್ಮಕ್ಕೆ ತೂಕ ಇದೆಯಾ ? ಇದರ ಬಗ್ಗೆ ವಿಜ್ಞಾನಿಗಳು ಏನಂತಾರೆ ಕೇಳಿ

 

1907 ನೇ ಇಸವಿಯಲ್ಲಿ ವಿಜ್ಞಾನಿಗಳು ಹೇಳಿದ್ದು ಹೀಗೆ. ಆತ್ಮದ ತೂಕ ಕೇವಲ 21 ಗ್ರಾoಗಳು ಇರುತ್ತದೆ ಎಂದು. ಹೌದು, ನಿಜ ಪ್ರತಿಯೊಬ್ಬ ಮನುಷ್ಯನ ಜೀವಿಯ ಒಳಗೂ ಆತ್ಮ ಇದ್ದೇ ಇರುತ್ತದೆ. ಮನುಷ್ಯನ ಮರಣದ ನಂತರ ಆತ್ಮವು ಆತನ ಶರೀರದಿಂದ ಬೇರ್ಪಟ್ಟು ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

 

 

ಇದು ನಿಜ ಕೂಡ .ನಿಜವಾಗಿಯೂ ಆತ್ಮ ವೆಂಬುದು ಇದೆಯೇ ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿರಬೇಕಾದರೆ ,ಅಮೆರಿಕ ದೇಶದ ಒಬ್ಬ ವಿಜ್ಞಾನಿ, ಮನುಷ್ಯನ ದೇಹಕ್ಕೆ ಆತ್ಮವಿರುತ್ತದೆ. ಅದರ ತೂಕ 21 ಗ್ರಾಂ ಎಂದು ಪ್ರಯೋಗಗಳ ಮೂಲಕ ನಿರೂಪಿಸಿದ್ದಾರೆ. ಆದರೆ ಬಹಳಷ್ಟು ಮಂದಿ ಡಾಕ್ಟರ್ ಗಳು ಈ ವಿಷಯವನ್ನು ಸುಳ್ಳೆಂದು ನಿರಾಕರಿಸಿದ್ದಾರೆ.

 

ಆದರೆ ವೈಜ್ಞಾನಿಕವಾಗಿ ಇದನ್ನು ಸುಳ್ಳೆಂದು ನಿರೂಪಿಸಲು ವಿಫಲರಾಗಿದ್ದಾರೆ. ಇನ್ನೂ 1907 ರಲ್ಲಿ ಮೇಕ್ ಡೇಗಿಲ್ ಎಂಬ ಡಾಕ್ಟರ್ ಹಾಗೂ ವಿಜ್ಞಾನಿ ಮರಣ ಸ್ಥಿತಿಯಲ್ಲಿರುವ ವ್ಯಕ್ತಿಯ ಹಾಸಿಗೆಯನ್ನು ತೂಕ ಮಾಡುವ ಸಾಧನವನ್ನು ಅಳವಡಿಸಿದ್ದರು. ರೋಗಿ ಸಾಯುವುದಕ್ಕೂ ಕೆಲವು ಹೊತ್ತಿನ ಮುಂಚೆ ಆತನ ತೂಕವನ್ನು , ಅದೇ ರೀತಿ ಮತ್ತು ಸತ್ತ ನಂತರದ ತೂಕವನ್ನು ನೋಡಿದಾಗ ,ಆ ಎರಡೂ ತೂಕವನ್ನು ನೋಡಿದಾಗ ಇಪ್ಪತ್ತೈದು ಗ್ರಾಂನಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

 

 

ಕಡಿಮೆಯಾಗಿರುವ 21 ಗ್ರಾಂ ರೂಪವನ್ನೇ ಮನುಷ್ಯನ ಆತ್ಮದ ತೂಕವೆಂದು ಪ್ರಕಟಿಸಿದರು .ಆದರೆ ಡೇಗಿಲ್ ಪ್ರತಿಪಾದಿಸಿದ್ದನ್ನು ಅನೇಕರು ಡಾಕ್ಟರ್ ಗಳು ಒಪ್ಪಿಕೊಳ್ಳಲಿಲ್ಲ. ಮನುಷ್ಯ ಸತ್ತ ನಂತರ ಆತನ ಶ್ವಾಸ ಕ್ರಿಯೆ ನಿಂತು ಹೋಗುತ್ತದೆ. ಹೃದಯ, ಶ್ವಾಸಕೋಶಗಳು ನಿಷ್ಕ್ರಿಯಗೊಳ್ಳುತ್ತದೆ.ಇನ್ನು ಶರೀರದ ಒಳಗೆ ಜರಗುವ ಅನೇಕ ಪ್ರಕ್ರಿಯೆಗಳು ನಿಂತು ಹೋಗುತ್ತವೆ. ಹೀಗಾಗಿ ಸತ್ತ ಮನುಷ್ಯನ ದೇಹದಲ್ಲಿ 21 ಗ್ರಾಂ ಕಡಿಮೆಯಾಗಿ ವ್ಯತ್ಯಾಸ ಕಂಡು ಬರುತ್ತದೆ ಎಂದು ಡಾಕ್ಟರ್ ಗಳ ವಾದವಾಗಿದೆ.

 

 

ನಂತರ ಮತ್ತೊಂದು ಬಾರಿ ಡೇಗಿಲ್ ನಾಯಿಗಳ ಮೇಲೆ ತನ್ನ ಪ್ರಯೋಗವನ್ನು ನಡೆಸಿದ್ದ. ಸಾಯುವುದಕ್ಕೆ ಮುಂಚೆ ಹಾಗೂ ಸತ್ತ ನಂತರ ತೂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ನಿರೂಪಿಸಿದರು. ಅಂದರೆ ಆತ್ಮ ವೆಂಬುದು ಕೇವಲ ಮನುಷ್ಯರಲ್ಲಿ ಮಾತ್ರ ಇರುತ್ತದೆ. ಹಾಗಾಗಿ ಮನುಷ್ಯ ಸತ್ತ ನಂತರ 21 ಗ್ರಾಂಗಳ ತೂಕ ಕಡಿಮೆ ಇರುತ್ತದೆ ಎಂದು ತಿಳಿಸಿದ.
ಅಂದರೆ ಶ್ವಾಸ ಕ್ರಿಯೆ ನಿಂತ ಮೇಲೆ ಒಂದು ನಿಮಿಷಕ್ಕೆ ಮನುಷ್ಯನ ತೂಕ 0.5 ಗ್ರಾ0ಗಳು ಮಾತ್ರ ಕಡಿಮೆಯಾಗುತ್ತದೆ. ಎಂದು ಕಂಡು ಹಿಡಿದು ನಿರೂಪಿಸಿದರು. ಇಪ್ಪತ್ತೊಂದು ಗ್ರಾಂಗಳ ತೂಕ ಆತ್ಮದ್ದೇ ಎಂದು ಆತನ ವಾದವಾಗಿದೆ. ವಿಜ್ಞಾನ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವವರೆಗೂ ಆತ್ಮದ ತೂಕ 21 ಗ್ರಾಂ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top