ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಸ್ವಪ್ನ(ಕನಸು)ಗಳು ಯಾವವು ಅವುಗಳನ್ನು ಕಂಡರೆ ಏನು ಫಲ ? ಎಂದು ನಿಮಗೆ ಗೊತ್ತಾ ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ ಸ್ವಪ್ನ(ಕನಸು)ಗಳು ಯಾವುವು ಅವುಗಳನ್ನು ಕಂಡರೆ ಏನು ಫಲ ? ಎಂದು ನಿಮಗೆ ಗೊತ್ತಾ ?

 

ಆಗಾಗ್ಗೆ ಕನಸಿನಲ್ಲಿ ನಾವು ಸ್ವಪ್ನಗಳನ್ನು ಕಾಣುತ್ತಿರುತ್ತೇವೆ. ಇಂತಹ ಸ್ವಪ್ನಗಳು ನಮ್ಮ ನಿದ್ರೆಯ ಕನಸಿನಲ್ಲಿ ಕಾಣಿಸಿಕೊಂಡರೆ ನಾವು ಒಂದು ಕ್ಷಣ ಬೆಚ್ಚಿ ಬೀಳುತ್ತೇವೆ, ಭಯಗೊಳ್ಳುತ್ತೇವೆ, ಆದರೆ ಇಲ್ಲಿ ಕೆಲವು ವಸ್ತುಗಳನ್ನು ಕನಸಿನಲ್ಲಿ ನಾವು ಕಂಡರೆ ತುಂಬಾ ಶುಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹ ಕನಸುಗಳು ಯಾವುವು ? ಶುಭ ವಸ್ತುಗಳು ಯಾವುವು ? ಎಂತಹ ಮನುಷ್ಯರನ್ನು ಕಂಡರೆ ಶುಭ ಎಂದು ತಿಳಿದುಕೊಳ್ಳೋಣ ಬನ್ನಿ.

 

 

ಮನುಷ್ಯರು ಎಂದರೆ ಅತ್ಯಂತ ಶುಭ್ರವಾಗಿರುವಂತಹ ಮತ್ತು ಶುಭ ಲಕ್ಷಣಗಳನ್ನು ಹೊಂದಿರುವಂತಹ ಮನುಷ್ಯರನ್ನು ಅದರಲ್ಲಿಯೂ ಪುರುಷರನ್ನು ಕಾಣುವುದು ಶುಭ ಎಂದು ಪರಿಗಣಿಸಲಾಗಿದೆ.ಹಿರಿಯರು ,ನಾವು ಗೌರವಿಸುವವರು ಅಥವಾ ನಾವು ಪೂಜ್ಯನೀಯ ಭಾವದಲ್ಲಿ ನೋಡುವಂಥವರು, ನಮ್ಮ ಕನಸಿನಲ್ಲಿ ಬಂದರೆ ಅತ್ಯಂತ ಶುಭವಾಗಿದ್ದು, ಈ ರೀತಿಯ ಸ್ವಪ್ನಗಳನ್ನು ಮನುಷ್ಯರಾದ ನಾವು ಕಂಡರೆ ನಾವು ಮಂತ್ರಿಯ ಪದವಿಯನ್ನು ಅಂದರೆ ಮಂತ್ರಿ ಪದವಿಗೆ ಸಮಾನವಾಗಿರುವ ಪದವಿಯನ್ನು ಪಡೆದುಕೊಳ್ಳುತ್ತೇವೆ ಅಥವಾ ಯಾವುದೋ ಒಂದು ಉನ್ನತವಾದ ಕಾರ್ಯ,ಉನ್ನತವಾದ ಸ್ಥಾನ ಅಥವಾ ಉದ್ಯೋಗ ಪ್ರಾಪ್ತಿಯಾಗುವುದು .

ಕೆಲವು ಶುಭ ಸೂಚಕ ಸ್ವಪ್ನಗಳ ಬಗ್ಗೆಯೂ ಸಹ ತಿಳಿದುಕೊಳ್ಳೋಣ .

 

ಸಾಮಾನ್ಯವಾಗಿ ಗೋವು, ಆನೆ, ಅಂಬಾರಿ, ಕುದುರೆಗಳು ಅದರಲ್ಲಿಯೂ ಶ್ವೇತ ಅಂದರೆ ಬಿಳಿ ಬಣ್ಣದ ಕುದುರೆಗಳನ್ನು ಕಂಡರೆ ಅತ್ಯಂತ ಶುಭ ,ಧನ ಪ್ರಾಪ್ತಿಯಾಗುವುದು ಮತ್ತು ಧನಲಾಭವಾಗುವುದು ಎಂದು ಶಾಸ್ತ್ರವು ಹೇಳುತ್ತದೆ .
ಬೆಟ್ಟಗಳು ,ದೇವಸ್ಥಾನ, ಪುಣ್ಯ ಕ್ಷೇತ್ರಗಳು ,ದೇವರು, ಗೋಪುರ, ತಾಂಬೂಲ, ದೇವತೆಗಳು, ಮಂಗಳಕರ ವಸ್ತುಗಳು, ಶುಭ್ರವಾದ ಹೂವುಗಳು, ಪುಣ್ಯ ನದಿಗಳು, ಚಾಮರ, ಬಿಳಿಯ ವಸ್ತ್ರಗಳು ,ಬಿಳಿ ಹಾಸಿಗೆ, ಉರಿಯುತ್ತಿರುವ ದೀಪ ,ವಿಭೂತಿ, ಕುಂಕುಮ, ಹರಿಶಿಣ, ತುಳಸಿ, ಬಿಲ್ವ ಪತ್ರೆ, ಫಲ ಭರಿತವಾದ ವೃಕ್ಷಗಳು, ಸುಗಂಧ ಪುಷ್ಪಗಳು ,ಸುಗಂಧ ದ್ರವ್ಯಗಳು ಮತ್ತು ಮಂಗಳ ದ್ರವ್ಯಗಳು ಇವೆಲ್ಲವನ್ನೂ ಕನಸಿನಲ್ಲಿ ಕಾಣುವುದು ಸಾಮಾನ್ಯವಾಗಿ ಶುಭ ಫಲಗಳನ್ನು ನೀಡುತ್ತವೆ.

 

 

ಇನ್ನೂ ಗುರುಗಳು ತಾಯಿ, ತಂದೆ, ನಮ್ಮ ಹಿರಿಯರು ಇಂತಹವರನ್ನು ನಾವು ಕನಸಿನಲ್ಲಿ ಕಂಡರೂ ಕೂಡ ಶುಭಫಲವನ್ನು ನೀಡುತ್ತದೆ .ಇನ್ನೂ ಪೂಜ್ಯನೀಯರಾದ ಗುರುಗಳ ರೀತಿಯಲ್ಲಿ ಯಾರಾದರೂ ಬಂದು ಏನಾದರೂ ಹೇಳಿದರೆ ಅದು ಅತ್ಯಂತ ಶುಭ, ಅದು ನಡೆಯುತ್ತದೆ ಎಂದು ಹೇಳಿದ್ದಾರೆ.

 

ಈ ರೀತಿಯಾದ ಸ್ವಪ್ನಗಳು ಬಂದರೆ, ಇಂತಹ ಕನಸುಗಳನ್ನು ಕಂಡರೆ ಕನಸಿಗೆ ಯಾರೂ ಕೂಡ ಭಯ ಪಡುವ ಅವಶ್ಯಕತೆಯಿಲ್ಲ . ಇವು ಅತ್ಯಂತ ಶುಭ ,ಒಳ್ಳೆಯದನ್ನೇ ಮಾಡುತ್ತವೆ ಎಂದು ನೀವು ಊಹಿಸಬಹುದಾಗಿದೆ.
ಇನ್ನೂ ಸ್ವಪ್ನದಲ್ಲಿ ಬರೀ ಬ್ರಾಹ್ಮಣರನ್ನು ಕಾಣುವುದು ಅಶುಭ ಎಂದು ಕೂಡ ಪರಿಗಣಿಸಲಾಗಿದೆ. ಆದರೆ ಬ್ರಾಹ್ಮಣರು ಬಂದು ಕನಸಿನಲ್ಲಿ ಏನಾದರೂ ಹೇಳಿದರೆ ಅದು ನೆರವೇರುತ್ತದೆ . ಅದು ಶುಭ ಇಂದು ಸಹ ಪರಿಗಣಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top