ವಿಶೇಷ

ಸೌಂದರ್ಯದ ಗಣಿ ಅಪರೂಪದ ಸುಂದರಿ , ಕಾಮ ಪಿಚಾಚಿ, ತಂತ್ರ – ಕುತಂತ್ರಗಳ ರಾಣಿ ಕ್ಲಿಯೋಪಾತ್ರ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಕಾರಿ ವಿಷಯಗಳು ಓದಿ

ಸೌಂದರ್ಯದ ಗಣಿ ಅಪರೂಪದ ಸುಂದರಿ ಕ್ಲಿಯೋಪಾತ್ರ ಬಗ್ಗೆ ನಿಮಗೆ ಈ ವಿಷಯಗಳು ಗೊತ್ತಾ ?

 

 

ಸುಂದರಿಯರ ಸುಂದರಿ ಅಪರೂಪದ ಲಾವಣ್ಯವತಿ ಈಜಿಪ್ಟ್ ನ ಮಹಾರಾಣಿ ಕ್ಲಿಯೋಪಾತ್ರ ಬಗ್ಗೆ ಕೆಲವು ವಿಷಯಗಳು ತಿಳಿದುಕೊಂಡರೆ ಆಶ್ಚರ್ಯ ಆಗದೆ ಇರೋಲ್ಲ

 

 

ಕ್ಲಿಯೋಪಾತ್ರ ಬಾಲ್ಯ ಹಾಗು ಮದುವೆ:

 

ಕ್ಲಿಯೋಪಾತ್ರ ತಂದೆ ಹಾಗು ತಾಯಿ ಅಣ್ಣ ತಂಗಿಯರು ಆಸ್ತಿ ಹಾಗು ರಾಜ್ಯ ಮತ್ತೊಬ್ಬರ ಪಾಲಾಗಬಾರದೆಂದು ಹೀಗೆ ಸೋದರ ಸೋದರಿಯರೆ ಮದುವೆಯಾಗುವ ರೂಢಿ ಈಜಿಪ್ಟ್ ನಲ್ಲಿತ್ತು ಕ್ರಿ.ಪೂ 69 ರಲ್ಲಿ ಹುಟ್ಟಿದ್ದಳು ಕ್ಲಿಯೋಪಾತ್ರ ಇವಳು ಕೂಡ ಕ್ಲಿಯೋಪಾತ್ರ ಕೂಡ ತನ್ನ ಇಬ್ಬರು 10 ಹಾಗು 14 ವರ್ಷ ವಯಸ್ಸಿದ್ದ ತಮ್ಮಂದಿರನ್ನು ಮದುವೆಯಾಗಿದ್ದಳು ,ವಯಸ್ಸಿನಲ್ಲಿ ನಾಲ್ಕು ವರ್ಷ ಚಿಕ್ಕವರಾಗಿದ್ದ ತಮ್ಮಂದಿರನ್ನು ಹಿಂದೆ ಹಾಕಿ ತಾನೇ ಪಟ್ಟದ ರಾಣಿಯಾಗಿದ್ದಳು , ತಮ್ಮಂದಿರು ದೊಡ್ಡವರಾದ ಮೇಲೆ ಪಟ್ಟಕ್ಕಾಗಿ ಜಗಳ ಶುರುವಾದಾಗ ಅವರನ್ನೇ ಕೊಂದಿದ್ದಳು .’ಕ್ಲಿಯೋಪಾತ್ರ’ ಎಂಬ ಪದದ ಅರ್ಥ ಈಜಿಪ್ಟ್ ನಲ್ಲಿ ತಂದೆಯ ಗೌರವ ಎಂದು .

 

 

ಕ್ಲಿಯೋಪಾತ್ರ ಸೌಂದರ್ಯ ಪ್ರಜ್ಞೆ :

 

ತನ್ನ ಚೆಲುವಿಂದ ,ತಂತ್ರ – ಕುತಂತ್ರ , ಬುದ್ದಿವಂತಿಕೆಯಿಂದ ಪ್ರಖ್ಯಾತಿ ಹೊಂದಿದ್ದಳು ಕ್ಲಿಯೋ ತನ್ನ ಸೌಂದರ್ಯಕ್ಕೆ ಹೆಚ್ಚಿನ ಒಟ್ಟು ಕೊಡುತ್ತಿದ್ದಳು ತನ್ನ ಚರ್ಮದ ಅಂದ ಕಾಪಾಡಿಕೊಳ್ಳಲು ದಿನ ನಿತ್ಯ ಮೇಕೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು , ಗುಲಾಭಿ ಜಲ ಹಾಗು ಜೇನನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದಳು .ಸುಗಂಧ ದ್ರವ್ಯ ಹಾಗು ಎಣ್ಣೆಗಳನ್ನು ಬಳಸುತ್ತಿದ್ದಳು .

 

 

ಕಣ್ಣುಗಳ ಅಗಲವಾಗಿ ಕಾಣಲು ಕಾಡಿಗೆ ಬಳಸುತಿದ್ದಳು ಕ್ಲಿಯೋ ,ತನ್ನ ಸೌಂದರ್ಯ ವರ್ಧಕಗಳಿಗಾಗಿಯೇ ಒಂದು ಪ್ರಯೋಗ ಶಾಲೆ ತೆರೆದಿದ್ದಾಳಂತೆ ಅಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದರು ,ತಲೆಗೆ ವಿಗ್ ಬಳಸುತ್ತಿದ್ದಳಂತೆ , ತುಟಿಯ ಬಣ್ಣಗಳಿಗೆ ಐರನ್ ಆಕ್ಸೈಡ್ ,ಮಣ್ಣು ಹಾಗು ಸಮುದ್ರದ ಪಾಚಿಯನ್ನು ಬಳಸುತ್ತಿದ್ದಳು .

 

ಕ್ಲಿಯೋಪಾತ್ರ ಕಾಮ ಪಿಚಾಚಿ :

 

 

ಅತಿಯಾದ ಕಾಮಾಸಕ್ತಿಯನ್ನು ಹೊಂದಿದ್ದ ಕ್ಲಿಯೋ ಒಂದು ಕೊನೆಯಲ್ಲಿ ಸಾವಿರಾರು ರೂಪವಂತ ಹುಡುಗರನ್ನು ಬಂಧಿಸಿಟ್ಟಿದ್ದಳು , ಅವರೊಂದಿಗೆ ಬೇಕೆನಿಸಿದಾಗ ಶೃಂಗಾರ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದಳು ಅಷ್ಟೇ ಅಲ್ಲದೆ ಸೈನಿಕರು ಹಾಗು ಸಾಮಾನ್ಯ ಜನರನ್ನು ತನ್ನ ಕಾಮ ತೃಷೆಗೆ ಬಳಸಿಕೊಳ್ಳುತ್ತಿದ್ದಳಂತೆ .

 

ಕ್ಲಿಯೋಪಾತ್ರ ಹಾಗು ರೋಮ್ ದೊರೆ ಜೂಲಿಯಸ್ ಸೀಝರ್ ಸಂಬಂಧ :

 

ತನ್ನ ತಂಗಿಯ ಗಂಡ ಪೋಲ್ ಮಿ ಒಂದು ಬಾರಿ ಕ್ಲಿಯೋಪಾತ್ರ ವಿರುದ್ಧ ತಿರುಗಿ ಬೀಳುತ್ತಾನೆ ಆದರೆ ಕ್ಲಿಯೋಪಾತ್ರ ಸೈನ್ಯ ಬಲ ಹೆಚ್ಚಾಗಿದ್ದು ಆತ ಈಜಿಪ್ಟ್ ನಿಂದ ಓಡಿ ಹೋಗುತ್ತಾನೆ , ಆನಂತರ ಪೋಲ್ ಮಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿಕೊಂಡು ಮತ್ತೆ ದಂಡೆತ್ತಿ ಬಂದಾಗ ಅಲೆಕ್ಸಾಂಡ್ರಿಯಾದ ದಂಡ ನಾಯಕ ಜೂಲಿಯಸ್ ಸೀಝರ್ ಸಹಾಯ ಪಡೆಯಬಯಸುತ್ತಾಳೆ ಕ್ಲಿಯೋಪಾತ್ರ ಆದರೆ ಪೋಲ್ ಮಿ ರೋಮನ್ ರ ಸಹಾಯ ಪಡೆಯದಂತೆ ಎಲ್ಲ ದಾರಿಗಳನ್ನು ಮುಚ್ಚಿಬಿಟ್ಟಿದ್ದ ಆಗ ಒಂದು ಉಪಾಯ ಮಾಡುತ್ತಾಳೆ ಕ್ಲಿಯೋ ಒಬ್ಬ ನಂಬಿಕಸ್ತ ವ್ಯಕ್ತಿಗೆ ತನ್ನನ್ನು ಪೆಟ್ಟಿಗೆ ಒಂದರಲ್ಲಿ ಸ್ವಲ್ಪ ದೂರದ ವರೆಗೆ ಹಾಗೆ ಸ್ವಲ್ಪ ದೂರದ ವರೆಗೆ ಹಾಸಿಗೆಯೊಂದರಲ್ಲಿ ಸುತ್ತಿ ಯಾರಿಗೂ ಗೊತ್ತಾಗದ ಹಾಗೆ ಅಲೆಕ್ಸಾಂಡ್ರಿಯಾಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಮಾಡುತ್ತಾಳೆ ಕ್ಲಿಯೋ .

 

 

ಹೀಗೆ ಅಲೆಕ್ಸಾಂಡ್ರಿಯಾ ತಲುಪಿದ ಮೇಲೆ ಆ ವ್ಯಕ್ತಿ ಜೂಲಿಯಸ್ ಸೀಝರ್ ಬಳಿ ಒಂದು ರಹಸ್ಯ ಸಂದೇಶ ತಂದಿರುವುದಾಗಿ ಹೇಳಿ ಹಾಸಿಗೆಯನ್ನು ಕೆಳಗಿ ಇಳಿಸುತ್ತಾನೆ ಅಲ್ಲಿ 21 ವರ್ಷದ ಕ್ಲಿಯೋಪಾತ್ರ ಇರುತ್ತಾಳೆ ಅವಳ ಸೌಂದರ್ಯಕ್ಕೆ ಮರುಳಾದ ಜೂಲಿಯಸ್ ಆಕೆಗೆ ಸಹಾಯ ಮಾಡುತ್ತಾನೆ , ಆಗಲೇ 40 ದಾಟಿತ್ತು ಜೂಲಿಯಸ್ ಗೆ ಇಬ್ಬರು ಶೃಂಗಾರ ಕ್ರೀಡೆಯಲ್ಲಿ ಭಾಗಿಯಾಗುತ್ತಾರೆ , ಹೀಗೆ ಜೂಲಿಯಸ್ ಮುಂದೆ ಯುದ್ಧದಲ್ಲಿ ಕ್ಲಿಯೋ ತಂಗಿಯ ಗಂಡ ಪೋಲ್ ಮಿಯನ್ನು ಕೊಲ್ಲುತ್ತಾನೆ .

ಅಲೆಕ್ಸಾಂಡ್ರಿಯಾ ಹಾಗು ಈಜಿಪ್ಟ್ ನಲ್ಲಿದ್ದ ಇವರಿಬ್ಬರು ಆಗಾಗ್ಗೆ ಭೇಟಿಯಾಗುತ್ತಿದ್ದರು , ಇತ್ತ ಕ್ಲಿಯೋಪಾತ್ರ ಪ್ರೀತಿಯಲ್ಲಿ ಬಿದ್ದಿದ್ದ ಜೂಲಿಯಸ್ ರಾಜ್ಯವನ್ನು ಸಂಪೂರ್ಣವಾಗಿ ಮರೆತಿದ್ದ ಈ ಸಮಯದ್ಲಲಿ ಅನೇಕ ಒಳ ಹಾಗು ಹೊರ ಜಗಳವಾದವು , ಹೀಗೆ ಶತ್ರುಗಳು ಜೂಲಿಯಸ್ ನನ್ನು ಕೊಂದುಬಿಟ್ಟರು , ಆಗ ರೋಮ್ ನಿಂದ ಈಜಿಪ್ಟ್ ಗೆ ಓಡಿ ಹೋದಳು ಕ್ಲಿಯೋ .

ಕ್ಲಿಯೋಪಾತ್ರ ಹಾಗು ರೋಮ್ ಜನರಲ್ ಆಂಟೋನಿ ಸಂಬಂಧ :

 

ಕ್ಲಿಯೋಪಾತ್ರ ಸೋದರಿ ಅರಸಿನೋ ದಾಳಿ ಮಾಡುತ್ತಾಳೆ , ಆಗ ಅಲೆಕ್ಸಾಂಡ್ರಿಯಾಕೆ ಓಡಿ ಹೋಗುತ್ತಾಳೆ ಆಗ ರೋಮ್ ಜನರಲ್ ಆಂಟೋನಿ ಆಕೆಯ ಅಂದಕ್ಕೆ ಮಾರು ಹೋಗಿ ಕ್ಲಿಯೋಪಾತ್ರ ಸೋದರಿ ಅರಸಿನೋಳನ್ನು ಸಾಯಿಸುತ್ತಾನೆ ಹೀಗೆ ಕೆಲವು ವರ್ಷಗಳು ಕ್ಲಿಯೋ ಜೊತೆಯಿದ್ದ ಆಂಟೋನಿ , ಮುಂದೆ ಇಬ್ಬರಿಗೂ ಹೆಲನ್ ಹಾಗು ಸೇಲನ್ ಎಂಬ ಇಬ್ಬರು ಅವಳಿ ಜವಳಿ ಮಕ್ಕಳು ಹುಟ್ಟುತ್ತಾರೆ.

 

 

ಜನರಲ್ ಆಂಟೋನಿ ರಾಜ್ಯಭಾರ ಮಾಡಲು ದೊಡ್ದು ಕೇಳಿದಾಗ ಒಂದು ಕಾಲದಲ್ಲಿ ಕ್ಲಿಯೋ ಬಳಿಯಿಂದ ಆಕ್ರಮಣ ಮಾಡಿ ತೆಗೆದುಕೊಂಡಿದ್ದ ಲಿಬಿಯಾ ಸಿರಿಯಾ ಲೆಬನನ್ ಪ್ರದೇಶಗಳನ್ನು ಮತ್ತೆ ವಾಪಸ್ಸುಕೊಟ್ಟರೆ ದುಡ್ಡು ಕೊಡುವುದಾಗಿ ಹೇಳುತ್ತಾಳೆ , ಪ್ರದೇಶಗಳುಕೊಟ್ಟ ಮೇಲೆ ದುಡ್ಡು ಕೊಡುತ್ತಾಳೆ ಕ್ಲಿಯೋ , ಬಹಳ ವರ್ಷ ಜೊತೆಯಲ್ಲೇ ಇದ್ದದ್ದಕ್ಕೆ ಕೋಪಗೊಂಡ ಆಂಟೋನಿ ಪತ್ನಿ ಕ್ಲಿಯೋ ಪಾತ್ರಳಿಗೆ ಹಿಗ್ಗಾಮುಗ್ಗಾ ಅವಮಾನ ಮಾಡುತ್ತಾಳೆ ಆಗ ತನ್ನ ಪತ್ನಿ ಕ್ಲಿಯೋ ಪಾತ್ರ ಎಂದು ಹೇಳುತ್ತಾನೆ ಆಂಟೋನಿ ಹಾಗೆಯೇ ಜೂಲಿಯಸ್ ಹಾಗು ಕ್ಲಿಯೋ ಪಾತ್ರ ಗೆ ಹುಟ್ಟಿದ್ದ ಸೆಝರೇನಿಯನ್ ಈಜಿಪ್ಟ್ ನ ಮುಂದಿನ ರಾಜ ಎಂದು ಕೂಡ ಘೋಷಣೆ ಮಾಡುತ್ತಾನೆ .

 

ಆತ್ಮ ಹತ್ಯೆ ಮಾಡಿಕೊಂಡಳು ಕ್ಲಿಯೋಪಾತ್ರ :

 

ಇದರಿಂದ ಮುಂದೆ ರೋಮ್ ಹಾಗು ಈಜಿಪ್ಟ್ ಎರಡು ರಾಜ್ಯಗಳು ಕೈಬಿಟ್ಟು ಹೋಗುತ್ತವೆ ಎಂದು ಭಾವಿಸಿದ ಆಂಟೋನಿ ಮೈದುನ ಅಕ್ಟಾವಿಯಸ್ ಮುಂದೆ ಈಜಿಪ್ಟ್ ಮೇಲೆ ದಾಳಿ ಮಾಡುತ್ತಾನೆ , ಸಮುದ್ರದ ದಂಡೆಯಲ್ಲಿ ನಡೆದ ಯುದ್ಧದಲ್ಲಿ ಕ್ಲಿಯೋ ಪಾತ್ರ ಸೈನ್ಯ ಹಾಗು ಆಂಟೋನಿ ಸೈನ್ಯ ಅಕ್ಟಾವಿಯಸ್ ಸೈನ್ಯದ ಮೇಲೆ ದಾಳಿ ಮಾಡುತ್ತವೆ ಆದರೆ ಅಕ್ಟಾವಿಯಸ್ ಸೈನ್ಯ ಬಲ ಹೆಚ್ಚಿರುತ್ತದೆ ಹೀಗೆ ಯುದ್ಧ ಮಾಡುವ ಸಂದರ್ಭದಲ್ಲಿ ಕ್ಲಿಯೋ ಪಾತ್ರ ಆತ್ಮ ಹತ್ಯೆ ಮಾಡಿಕೊಂಡಳೆಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ ಇದನ್ನು ಕೇಳಿದ ಆಂಟೋನಿ ಬಹಳ ದುರ್ಬಲನಾಗುತ್ತಾನೆ ಆಗ ಅಕ್ಟಾವಿಯಸ್ ಸೈನ್ಯ ಅವನನ್ನು ಮುಗಿಸುತ್ತದೆ.

 

 

ಇತ್ತ ಸೋತ ಸುದ್ದಿ ಕೇಳಿದ ಕ್ಲಿಯೋಪಾತ್ರ ಹಾವಿನ ಕೈಯಲ್ಲಿ ತನ್ನ ಎದೆ ಮೇಲೆ ಕಚ್ಚಿಸಿಕೊಂಡು ಸತ್ತುಹೋಗುತ್ತಾಳೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top