ತಿಂಡಿ ತೀರ್ಥ

ರುಚಿಗೂ ಸೈ , ಆರೋಗ್ಯಕ್ಕೂ ಸೈ ಮನೆಯಲ್ಲಿ ಮಾಡ್ಕೊಂಡು ಜಮಾಯಿಸಿ ಕಲ್ಲಂಗಡಿ ಬೀಜದ ಪಾಯಸ

ರುಚಿಗೂ ಸೈ , ಆರೋಗ್ಯಕ್ಕೂ ಸೈ ಮನೆಯಲ್ಲಿ ಮಾಡ್ಕೊಂಡು ಜಮಾಯಿಸಿ ಕಲ್ಲಂಗಡಿ ಬೀಜದ ಪಾಯಸ

 

ಕಲ್ಲಂಗಡಿ ಹಣ್ಣಿನ ಅತ್ಯಂತ ಉತ್ತಮವಾದ ಹಣ್ಣಾಗಿದೆ, ಇದರ ಎಲ್ಲಾ ಭಾಗಗಳೂ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿವೆ. ಕಲ್ಲಂಗಡಿ ಹಣ್ಣು ಸವಿಯಲು ತುಂಬಾ ಚೆನ್ನಾಗಿರುತ್ತದೆ. ಹಣ್ಣಿನ ಬಿಳಿ ಭಾಗದಿಂದ ರುಚಿ ರುಚಿಯಾದ ಸವಿಯಾದವನ್ನು ಪಲ್ಯ ಮಾಡಬಹುದು. ನಾವು ಕಸದ ಬುಟ್ಟಿಗೆ ಬಿಸಾಕುವ ಬೀಜಗಳು ಕೂಡ ಅಪಾರ ಪ್ರಯೋಜನೆ ಹೊಂದಿವೆ. ಅದರಿಂದ ಪಾಯಸ ತಯಾರು ಮಾಡಬಹುದು. ಇದರಲ್ಲಿ ಅನೇಕ ಆರೋಗ್ಯ ಭಾಗ್ಯಗಳಿವೆ. ಇದು ಸಕ್ಕರೆ ಕಾಯಿಲೆಯನ್ನು ಇದು ನಿಯಂತ್ರಣ ಮಾಡುತ್ತದೆ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಇದು ಅತಿ ಉತ್ತಮವಾದ ಪದಾರ್ಥವಾಗಿದೆ. ಕಲ್ಲಂಗಡಿ ಬೀಜದಿಂದ ಪಾಯಸ ಹೇಗೆ ಮಾಡುವುದು ಎಂದು ನೋಡೋಣ.

ಪಾಯಸ ಮಾಡುವ ವಿಧಾನ:

 

 

1 ಬಟ್ಟಲು ಕಲ್ಲಂಗಡಿ ಬೀಜವನ್ನು ಸ್ವಲ್ಪ ನೀರು ಹಾಕಿ, ಮಿಕ್ಸರ್ ನಲ್ಲಿ ಸಣ್ಣಗೆ ರುಬ್ಬಿಕೊಳ್ಳಿ.

1/2 ಬಟ್ಟಲು ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ , 1/2 ಬಟ್ಟಲು ಹಾಲನ್ನು ಬೆರೆಸಿ, ಒಂದು ಬಾಣೆಲೆಯಲ್ಲಿ ಹಾಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ. ಬೆಲ್ಲ ಹಾಕಿರುವುದರಿಂದ ಪಾಯಸವು ಒಡೆದಂತೆ ಆಗಬಹುದು. ಸಣ್ಣ ಉರಿಯಲ್ಲಿ ಕುದಿಸಿದರೆ ಚೆನ್ನಾಗಿರುತ್ತದೆ.

ಕುದಿಸಿ ಕೊನೆಯಲ್ಲಿ ಆ ಮಿಶ್ರಣಕ್ಕೆ ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಬೆರೆಸಿ.

 

 

ಕಲ್ಲಂಗಡಿ ಬೀಜದ ಪಾಯಸವು ಗಸಗಸೆ ಪಾಯಸದಂತೆ ಇರುತ್ತದೆ. ಸವಿಯಲು ಸಖತ ಟೇಸ್ಟಿ ಆಗಿರುತ್ತದೆ.

ಕಲ್ಲಂಗಡಿ ಬೀಜಗಳು ಅಂಗಡಿಯಲ್ಲಿ ದೊರಕುತ್ತವೆ. ಇಲ್ಲದಿದ್ದರೆ ಹಣ್ಣಿನ ಬೀಜಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಉದುರಿಸಿ ಒರಟಾದ ಕಲ್ಲಿನ ಮೇಲೆ ಉಜ್ಜಿದರೆ
ಸಿಪ್ಪೆ ಹೊರಗಡೆ ಹೋಗುತ್ತದೆ, ನಂತರ ಸ್ವಲ್ಪ ನೀರು ಹಾಕಿ ತೊಳೆದು ಬಳಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top