fbpx
ಮನೋರಂಜನೆ

ನಾಗರಹಾವು, ಪಾರಿವಾಳದ ನಂತರ ಯಾವುದು?

`ಸಾಹಸ ಸಿಂಹ ವಿಷ್ಣುವರ್ಧನ್ ಆಯ್ತು, ಡಾಕ್ಟರ್ ರಾಜ್‌ಕುಮಾರ್ ಕೂಡಾ ಆಯ್ತು… ಇನ್ನು ಉಳಿದುಕೊಂಡಿರೋದು ಶಂಕರ್ ನಾಗ್ ಅವರು ಮಾತ್ರ. ಸಂತೋಷ್ ಆನಂದ ರಾಮ್ ಕಥೆ ಮಾಡಬೇಕೆಂದರೆ ಈಗ ಶಂಕರ್ ನಾಗ್ ಆತ್ಮಕ್ಕೆ ಕೈ ಹಾಕದೆ ಬೇರೆ ದಾರಿಯಿಲ್ಲ ಎಂಬರ್ಥದ ವ್ಯಂಗ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

 

 

ಪುನೀತ್ ರಾಜ್‌ಕುಮಾರ್ ಅಭಿನಯದ `ರಾಜಕುಮಾರ ಹೊಸಾ ದಾಖಲೆಯನ್ನೇ ಸೃಷ್ಟಿಸಿದೆ. ಬಹು ಕಾಲದ ನಂತರ ಜನ ಸಕುಟುಂಬ ಸಮೇತರಾಗಿ ಚಿತ್ರಮಂದಿರದತ್ತ ಮುಖ ಮಾಡುವಂತೆ ಮಾಡಿರುವುದೂ ಕೂಡಾ ಈ ಚಿತ್ರದ ಸಾಧನೆಯೇ. ಇನ್ನು ಕಲೆಕ್ಷನ್ ವಿಚಾರದಲ್ಲಿಯೂ ರಾಜಕುಮಾರನ ದಾಖಲೆ ಸಲೀಸಾಗಿ ಸರಿಗಟ್ಟುವಂಥಾದ್ದಲ್ಲ! ಇಂಥಾದ್ದೊಂದು ಕಮಾಲ್ ಸೃಷ್ಟಿ ಮಾಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರ ಮುಂದಿನ ಚಿತ್ರ ಯಾವುದು? ಅಷ್ಟಕ್ಕೂ ಅವರೀಗ ಏನು ಮಾಡುತ್ತಿದ್ದಾರೆ ಮುಂತಾದ ಕುತೂಹಲ ಸಹಜವಾಗಿಯೇ ಪ್ರೇಕ್ಷಕ ವಲಯದಲ್ಲಿದೆ.

ಮಜವಾದ ಸಂಗತಿ ಅಂದರೆ, ಇಂಥಾ ಪ್ರಶ್ನೆಗಳ ಬಗ್ಗೆಯೇ ಸಾಮಾಜಿಕ ಜಾಲ ತಾಣಗಳಲ್ಲಿ ಥರ ಥರದ ಜೋಕುಗಳು ಯಥೇಚ್ಚವಾಗಿ ಹರಿದಾಡುತ್ತಿವೆ. `ಸಾಹಸ ಸಿಂಹ ವಿಷ್ಣುವರ್ಧನ್ ಆಯ್ತು, ಡಾಕ್ಟರ್ ರಾಜ್‌ಕುಮಾರ್ ಕೂಡಾ ಆಯ್ತು… ಇನ್ನು ಉಳಿದುಕೊಂಡಿರೋದು ಶಂಕರ್ ನಾಗ್ ಅವರು ಮಾತ್ರ. ಸಂತೋಷ್ ಆನಂದ ರಾಮ್ ಕಥೆ ಮಾಡಬೇಕೆಂದರೆ ಈಗ ಶಂಕರ್ ನಾಗ್ ಆತ್ಮಕ್ಕೆ ಕೈ ಹಾಕದೆ ಬೇರೆ ದಾರಿಯಿಲ್ಲ ಎಂಬರ್ಥದ ವ್ಯಂಗ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

 

ಇದನ್ನು ಅಲ್ಲಗಳೆಯುವಂತೆಯೂ ಇಲ್ಲ. ಸಂತೋಷ್ ಆನಂದರಾಮ್ ಮೊದಲ ಚಿತ್ರ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಚಿತ್ರದಲ್ಲಿ ವಿಷ್ಣು ಹೆಸರಿಟ್ಟುಕೊಂಡೇ ಆಟವಾಡಿದ್ದರು. ಈ ಸಂದರ್ಭದಲ್ಲಿ ಸಾಹಸ ಸಿಂಹನ ಹೆಸರನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಚೀಪ್ ಗಿಮಿಕ್ಕು ನಡೆಯುತ್ತಿದೆ ಅಂತಲೂ ಅಸಹನೆಗಳೆದ್ದಿದ್ದವು. ಇದೆಲ್ಲದರಾಚೆಗೆ ಆ ಚಿತ್ರ ಉತ್ತಮ ಯಶಸ್ಸು ಕಂಡಿತ್ತು. ಆದರೆ, ಈ ಚಿತ್ರವನ್ನು ಯಶ್ ತಾವೇ ಮುಂದೆ ನಿಂತು ಹೇಗೆ ಬೇಕೋ ಹಾಗೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಸಂತೋಷ್ ಅವರದ್ದೇನಿಲ್ಲ ಅಂತಲೂ ರೂಮರು ಕೇಳಿ ಬಂದಿತ್ತು.

 

 

ಇದಾದ ನಂತರ ಎರಡನೇ ಚಿತ್ರದಲ್ಲಿ ತಮ್ಮ ಸ್ವಂತಿಕೆಯನ್ನು ಪ್ರೂವ್ ಮಾಡಿಕೊಳ್ಳುವ ದರ್ದಿನೊಂದಿಗೆ ಅಖಾಡಕ್ಕಿಳಿದ ಸಂತೋಷ್ ಆರಂಭಿಸಿದ್ದು ರಾಜಕುಮಾರ ಚಿತ್ರವನ್ನು. ಈ ಮೂಲಕ ಎರಡನೇ ಚಿತ್ರದಲ್ಲಿಯೂ ಅವರು ಸ್ಟಾರ್ ಒಬ್ಬರ ಇಮೇಜನ್ನು ಬಳಸಿಕೊಳ್ಳಲು ನಿಂತಿದ್ದಾರೆಂಬ ಆರೋಪವೇ ಕೇಳಿ ಬಂದಿತ್ತು. ಆದರೆ ಈ ಚಿತ್ರದಲ್ಲವರು ತಕ್ಕಮಟ್ಟಿಗೆ ಸ್ವಂತಿಕೆ ಪ್ರೂವ್ ಮಾಡಿದ್ದಾರೆ!
ಆದರೆ, ಸಂತೋಷ್ ಆನಂದರಾಮ್ ಸ್ಟಾರ್ ನಟರ ಇಮೇಜಿನ ನೆರಳಲ್ಲಿ ಕಥೆ ಹೆಣೆಯುತ್ತಾರೆ, ಇದು ಗೆಲುವಿನ ತಂತ್ರ ಎಂಬ ಇಮೇಜಿನಿಂದ ಮುಂದಿನ ಚಿತ್ರಗಳಲ್ಲಿಯಾದರೂ ಅವರು ಹೊರ ಬರುವಂತಾಗಲಿ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top