fbpx
ಮನೋರಂಜನೆ

ಡಿ ಬಾಸ್ ಚಿತ್ರಕ್ಕೆ ‘ಯಜಮಾನ’ ಟೈಟಲ್ ಫಿಕ್ಸ್: ಅಂದು ವಿಷ್ಣುದಾದಾ ಇಂದು ದರ್ಶನ್.

ಡಿ ಬಾಸ್ ಚಿತ್ರಕ್ಕೆ ಯಜಮಾನ ಟೈಟಲ್ ಫಿಕ್ಸ್: ಅಂದು ವಿಷ್ಣುದಾದಾ ಇಂದು ದರ್ಶನ್.

 

 

ಇತ್ತೀಚಿನ ವರ್ಷಗಳಲ್ಲಿ ಹಳೆ ಹಿಟ್ ಚಿತ್ರಗಳ ಟೈಟಲ್ ಬಳಸಿಕೊಂಡೇ ಹೊಸ ಚಿತ್ರ ಮಾಡುವ ಹವ್ಯಾಸ ಚಿತ್ರರಂಗದಲ್ಲಿ ಹೆಚ್ಚಾಗಿದೆ. ಈಗ ಅಂತಹ ಸಾಲಿಗೆ ಮತ್ತೊಂದು ಕನ್ನಡ ಚಿತ್ರ ಸೇರಿಕೊಳ್ಳುತ್ತಿದೆ..ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಐವತ್ತೊಂದನೇ ಚಿತ್ರಕ್ಕೆ ಯಾವ ಟೈಟಲ್ ಸಿಗಲಿದೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು ಚಿತ್ರಕ್ಕೆ ‘ಯಜಮಾನ’ ಅಂತ ಟೈಟಲ್ ಫಿಕ್ಸ್ ಮಾಡಲಾಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ್ದ ‘ಯಜಮಾನ’ ಸಿನಿಮಾ 2000 ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು.. ಈಗ ಮತ್ತೆ ಅದೇ ಚಿತ್ರದ ಹೆಸರಿನಲ್ಲಿ ಸಿನಿಮಾ ಬರುತ್ತಿರುವುದು ವಿಷ್ಣುದಾದ ಮತ್ತು ದರ್ಶನ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ…ಈ ಹಿಂದೆ ಈ ಬಂಧನ ಚಿತ್ರದಲ್ಲಿ ವಿಷ್ಣು ಜೊತೆ ತೆರೆ ಹಂಚಿಕೊಂಡಿದ್ದ ದರ್ಶನ್ ಗೆ ಈಗ ಅವರ ಸೂಪರ್ ಹಿಟ್ ಚಿತ್ರವೊಂದರ ಹೆಸರಿನಲ್ಲೇ ನಟಿಸುವ ಅವಕ್ಷ ಒದಗಿಬಂದಿದೆ.

 

 

 

 

ತಾರಾಗಣದಿಂದಲೇ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದಲ್ಲಿ ಮೂರು ಜನ ವಿಲನ್ ಇರಲಿದ್ದು ನಟ ರವಿಶಂಕರ್, ಧನಂಜಯ್ ಜೊತೆಗೆ ಸಿಂಗಂ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ದರ್ಶನ್ ಜೊತೆಗೆ ಸೆಣೆಸಾಡಲಿದ್ದಾರೆ. ಉಳಿದಂತೆ ದರ್ಶನ್ ಅವರ 51ನೇ ಚಿತ್ರವನ್ನ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದು, ವಿಷ್ಣುವರ್ಧನ ಖ್ಯಾತಿಯ ಪಿ.ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ದರ್ಶನ್’ಗೆ ನಾಯಕಿಯಾರಾಗಿ ನಟಿಸಲಿದ್ದಾರೆ. ಫೆಬ್ರವರಿ ಕೊನೆಯ ವಾರದಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆಗಳಿವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top