fbpx
ಸಮಾಚಾರ

ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇದೆಯಾ ? ವಿಚಿತ್ರ ಪ್ರಶ್ನೆ ಅಂತೀರಾ ಇದೆ ನಿಮ್ಮ ಹೃದಯದ ಆರೋಗ್ಯ ಹೇಳುತ್ತೆ ಅಂದ್ರೆ ನಂಬಲೇ ಬೇಕು

ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇದೆಯಾ ? ಒಮ್ಮೆ ಪರೀಕ್ಷೆ ಮಾಡಿ ನೋಡಿ ಇದೆಂತ ವಿಚಿತ್ರ ಪ್ರಶ್ನೆ ಅಂತೀರಾ !

 

ಈ ಕಾಲಿನ ಮೇಲಿನ ಕೂದಲಿನ ಆರೋಗ್ಯ ಚೆನ್ನಾಗಿದ್ದರೆ ನಿಮ್ಮ ಆರೋಗ್ಯ ಚೆನ್ನಾಗಿದೆ ಅಂತ ಅರ್ಥ , ಒಂದು ವೇಳೆ ಈ ಕೂದಲಿನ ಆರೋಗ್ಯದಲ್ಲಿ ಏನಾದರೂ ಏರು ಪೆರು ಉಂಟಾದ್ರೆ ನಿಮಗೆ ಅರೋಗ್ಯ ಸಮಸ್ಯೆ ಇರಬಹುದು , ಈ ಕಾಲಿನ ಕೂದಲಿಗೂ ಮತ್ತು ನಿಮ್ಮ ಆರೋಗ್ಯಕ್ಕೂ ನಂಟಿದೆ .

 

 

ದೇಹದಲ್ಲಿ ಎರಡು ತುದಿಗಳೆಂದರೆ ತಲೆ ಮತ್ತು ಕಾಲು ಈ ಭಾಗಗಳಿಗೂ ರಕ್ತ ಸರಿಯಾಗಿ ಪರಿಚಲನೆಯಾಗಬೇಕು ಒಂದು ವೇಳೆ ಈ ಕ್ರಿಯೆ ಸರಿಯಾಗಿ ಆಗದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ , ರಕ್ತವು ದೇಹದಲ್ಲಿ ಜೀವ ಕೋಶಗಳಿಗೆ ಪೋಷಕಾಂಶಗಳನು ರವಾನೆ ಮಾಡುವ ಕಾರ್ಯವನ್ನು ಮಾಡುತ್ತದೆ ಒಂದು ವೇಳೆ ರಕ್ತವನ್ನು ಸರಬರಾಜು ಮಾಡುವ ನಾಳಗಳಾದ ಮಹಾಪಧಮನಿಯಲ್ಲಿ ಏನಾದರೂ ದೋಷ ಕಾಣಿಸಿಕೊಂಡರೆ , ನಾಳಗಳಲ್ಲಿ ಅಧಿಕ ಕೊಬ್ಬು ಸಂಗ್ರಹವಾದರೆ ಅಥವಾ ಏನಾದ್ರೂ ತಡೆ ಇದ್ದರೆ ಕಾಲಿನ ಮೇಲೆ ಕೂದಲು ಬೆಳೆಯುವುದಿಲ್ಲ .

 

 

ಅಥವಾ ಯಾವುದಾದರೂ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ಕಾಲಿನಲ್ಲಿ ಉಂಟಾದರೂ ಸಹ ಕಾಲಿನ ಮೇಲೆ ಕೂದಲು ಬೆಳೆಯುವುದಿಲ್ಲ .

 

 

ದೇಹದ ತುತ್ತ ತುದಿಯಾಗಿರುವ ಕಾಲಿಗೆ ಸರಿಯಾಗಿ ರಕ್ತ ಪ್ರಸಾರಣವಾಗುವುದು ಕಷ್ಟದ ಕೆಲಸವೇ ಸರಿ , ಹೀಗೆ ರಕ್ತ ಸರಿಯಾಗಿ ಪ್ರಸಾರವಾದರೆ ಮಾತ್ರವೇ ಆರೋಗ್ಯ ಸರಿಯಾಗಿ ಇರುತ್ತದೆ ಆದ್ದರಿಂದಲೇ ಕಾಲಿನ ಮೇಲಿನ ಕೂದಲುಗಳು ರಕ್ತ ಪ್ರಸರಣ ಸರಿಯಾಗಿ ಕೂದಲು ಬೆಳೆದಿದೆ ಎಂದು ಸೂಚಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top