fbpx
ಭವಿಷ್ಯ

ಕುಂಭ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗದ ಜೊತೆಗೆ ಸೂರ್ಯ ಗ್ರಹಣ ಸಂಭವಿಸಲಿದ್ದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ

ಕುಂಭ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗದ ಜೊತೆಗೆ ಸೂರ್ಯ ಗ್ರಹಣ ಸಂಭವಿಸಲಿದ್ದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ

ಕುಂಭ ರಾಶಿಗೆ ಸೂರ್ಯನು ಹನ್ನೆರಡನೇ ತಾರೀಖು ಪ್ರವೇಶ ಮಾಡಲಿದ್ದು, ಇದರ ಜೊತೆಗೆ ಈಗಾಗಲೇ ಫೆಬ್ರವರಿ ಆರನೇ ತಾರೀಖು ಶುಕ್ರ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡಿದ್ದು, ಫೆಬ್ರವರಿ ಹದಿನೈದನೇ ತಾರೀಖು ಬುಧ ಗ್ರಹವು ಪ್ರವೇಶ ಮಾಡಲಿದೆ. ಇದರಿಂದ ಬುಧ ಮತ್ತು ಸೂರ್ಯ ಜೊತೆಯಾಗುವುದರಿಂದ ಬುಧಾದಿತ್ಯ ಯೋಗ ಉಂಟಾಗಲಿದೆ. ಇದರ ಜೊತೆಗೆ ಶನಿ ಗುರು ಮತ್ತು ಮಂಗಳ ಗ್ರಹದ ದೃಷ್ಟಿ ಕೂಡ ಕುಂಭ ರಾಶಿಯ ಮೇಲೆ ಬೀಳಲಿದೆ. ಈ ಪ್ರಕಾರವಾಗಿ ಕುಂಭ ರಾಶಿಯ ಮೇಲೆ ಆರು ಗ್ರಹಗಳ ಪರಿಣಾಮ ಬೀರಲಿದೆ ಜೊತೆಗೆ ಗ್ರಹಣವು ಕೂಡ ಕುಂಭ ರಾಶಿಯಲ್ಲೇ ಸಂಭವಿಸಿದೆ ಸೂರ್ಯನು ಕೂಡ ಅಲ್ಲೇ ಸ್ಥಿತನಿದ್ದಾನೆ. ಈ ಕಾರಣದಿಂದ ಎಲ್ಲಾ ರಾಶಿಗಳು ಅವಶ್ಯವಾಗಿ ಪ್ರಭಾವಕ್ಕೆ ಒಳಪಡುತ್ತವೆ. ಆದರೆ ನಾಲ್ಕು ರಾಶಿಯವರಿಗೆ ಮಾತ್ರ ಅಪೇಕ್ಷೆ ಮಾಡಿದ ಹಾಗೆ ಅಧಿಕವಾಗಿ ಶುಭ ಮತ್ತು ಉತ್ತಮ ಫಲಗಳನ್ನು ಕಾಣಲಿದ್ದಾರೆ. ಆ ರಾಶಿಗಳು ಯಾವುವೆಂದರೆ ಮೇಷ ರಾಶಿ,ವೃಷಭ ರಾಶಿ, ಕನ್ಯಾ ರಾಶಿ ಮತ್ತು ಧನಸ್ಸು ರಾಶಿ. ಬೇರೆ ರಾಶಿಗಳ ಮೇಲೆ ಯಾವ ಯಾವ ರೀತಿಯ ವಿಭಿನ್ನ ಪ್ರಭಾವ ಬೀರುವುದೆಂದು, ಯಾವ ರೀತಿಯ ಪ್ರಭಾವಗಳನ್ನು ಆಯಾ ರಾಶಿಗಳ ಮೇಲೆ ಉಂಟು ಮಾಡುತ್ತವೆ ಎನ್ನುವುದನ್ನು ತಿಳಿಯೋಣ ಬನ್ನಿ..

 

ಮೇಷ ರಾಶಿ.


ಮೇಷ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುವುದು, ಶುಭ ಯೋಗ ಉಂಟಾಗುವುದು , ಸಾಮಾಜಿಕ ಪ್ರತಿಷ್ಠೆ ಮತ್ತು ಗೌರವಗಳು ಹೆಚ್ಚಾಗಲಿವೆ, ಮಿತ್ರರು ಮತ್ತು ಪ್ರಿಯ ಜನರ ಸಂಪರ್ಕದಿಂದ ಖುಷಿಯಾಗಿರುವಿರಿ, ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಗಳಿಸುವಿರಿ. ನಿಮ್ಮ ಎಲ್ಲಾ ಆಸೆಗಳು ಪೂರ್ಣಗೊಳ್ಳುತ್ತವೆ. ಧನ ಪ್ರಾಪ್ತಿಯಾಗುವುದರ ಜೊತೆಗೆ ಐಶ್ವರ್ಯ ಪ್ರಾಪ್ತಿ ಯಾಗುವುದರ ಜೊತೆಗೆ ಮನಸ್ಸಿನ ಆಸೆಗಳು ಈಡೇರುವವು. ನೌಕರಿಯಲ್ಲಿ ಬಡ್ತಿ, ವಿಭಿನ್ನ ಪ್ರಕಾರದ ಸುಖ ಪ್ರಾಪ್ತಿಯಾಗುವುದು, ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುತ್ತಿರುವವರಿಗೆ ಪರೀಕ್ಷೆಯ ತಯಾರಿ ನಡೆಸುತ್ತಿರುವವರಿಗೆ ಓದುವುದರಲ್ಲಿ ಆಸಕ್ತಿ ಹೆಚ್ಚಾಗುವುದು, ಬುದ್ಧಿಯೂ ಉತ್ತಮ ವಿಕಾಸವಾಗುವುದು, ಪ್ರೇಮ ಸಂಬಂಧದಲ್ಲಿ ಮತ್ತು ವಿವಾಹಕ್ಕೆ ಇದು ಅನುಕೂಲಕರ ಸಮಯವಾಗಿದೆ.

ವೃಷಭ ರಾಶಿ.

 

 

ವೃಷಭ ರಾಶಿಯವರಿಗೆ ಕೆಲಸ ವೃತ್ತಿಯಲ್ಲಿ ಉನ್ನತಿಯಾಗಲಿದೆ, ಪ್ರಮೋಷನ್ ದೊರೆಯುವ ಸಂಭವವಿದೆ, ನೀವು ಯಾವುದೇ ಮಹತ್ವ ಪೂರ್ಣವಾದ ಕಾರ್ಯವನ್ನು ಕೂಡ ಪೂರ್ಣಗೊಳಿಸಿ ಯಶಸ್ಸನ್ನು ಗಳಿಸಲಿದ್ದೀರಿ, ಅಥವಾ ಯಾವುದೋ ಒಂದು ದೊಡ್ಡ ಯೋಜನೆಗೆ ಕೈ ಹಾಕಿ ಯಶಸ್ಸನ್ನು ಗಳಿಸುವಿರಿ, ದೊಡ್ಡ ಹುದ್ದೆಯಲ್ಲಿ ಇರುವವರಿಂದ ನಿಮಗೆ ಲಾಭವಾಗುವ ಸಂಭವವಿದೆ, ಹೊಸ ಅಧಿಕಾರ , ಸಮ್ಮಾನ ಗೌರವಗಳು ಹೆಚ್ಚಾಲಿವೆ, ಒಟ್ಟಾರೆ ಎಲ್ಲ ರೀತಿಯಲ್ಲೂ ಪ್ರಸನ್ನತೆ ಮತ್ತು ಸಂತುಷ್ಟತೆಯ ಭಾವನೆ ನಿಮಗೆ ದೊರೆಯಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆದ್ದರಿಂದ ವಿಶೇಷವಾಗಿ ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆಯನ್ನು ವಹಿಸುವ ಅಗತ್ಯವಿದೆ.

ಮಿಥುನ ರಾಶಿ.

 

ಮಕ್ಕಳ ಜೊತೆಯಲ್ಲಿ ಮತ ಬೇದ ಏರ್ಪಡಲಿದೆ ,ಮಿಥುನ ರಾಶಿಯವರ ಮಕ್ಕಳ ಆರೋಗ್ಯ ಹದಗೆಡಲಿದೆ, ಓದುವುದರಲ್ಲಿ ಬರೆಯುವುದರಲ್ಲಿ ಆಸಕ್ತಿ ಕಡಿಮೆಯಾಗುವುದು, ಪ್ರೇಮ ಸಂಬಂಧಗಳಲ್ಲಿ ತಪ್ಪಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಜಗಳ ಉಂಟಾಗುವುದು. ಲಾಭ ಕಡಿಮೆಯಾಗುವುದು , ಪ್ರೇಮ ಸಂಬಂಧಗಳಲ್ಲಿ ತಪ್ಪಾಗಿ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಜಗಳ ಉಂಟಾಗುವುದು, ಈ ಸಮಯದಲ್ಲಿ ಸುದೀರ್ಘವಾದ ಪ್ರಯಾಣವನ್ನು ಮಾಡುವ ಸಂಭವವಿದೆ, ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಆಧ್ಯಾತ್ಮಿಕವಾಗಿ ಮನಸ್ಸು ಅತ್ತ ಕಡೆಗೆ ವಾಲುವುದು.

ಕಟಕ ರಾಶಿ.

 

ನಿಮಗೆ ಸ್ವಲ್ಪ ಸಮಸ್ಯೆಯನ್ನು ತಂದೊಡ್ಡಲಿದೆ, ಇದೇ ರಾಶಿಯಲ್ಲಿ ಚಂದ್ರ ಗ್ರಹಣ, ಇದೇ ಮಾಸದಲ್ಲಿ ಸಂಭವಿಸಿರುವುದರಿಂದ ಮಾನಸಿಕವಾಗಿ ನಿಮ್ಮ ಜೀವನದಲ್ಲಿ ಶಾಂತಿಯ ಭಂಗವಾಗುವುದು. ಆರೋಗ್ಯ ಸಮಸ್ಯೆಗಳು ಎದುರಾಗಲಿವೆ, ಅಪಘಾತ, ರಕ್ತ ದೊತ್ತಡದ ಸಮಸ್ಯೆ ಎದುರಾಗಲಿದೆ. ಹಣಕಾಸಿನ ವಿಷಯಗಳಲ್ಲಿ ನಷ್ಟ ಉಂಟಾಗಲಿದೆ, ಧನ ಹಾನಿಯಾಗುವ ಮತ್ತು ಗೌರವಕ್ಕೆ ದಕ್ಕೆ ಉಂಟಾಗುವುದು, ಜೀವನ ಸ್ವಲ್ಪ ಕಷ್ಟಕರವಾಗಿರುತ್ತದೆ, ಕ್ಷಣಾರ್ಧದಲ್ಲಿ ಬೇಗನೆ ಧನಹಾನಿ ಮತ್ತು ಮಾನ ಹಾನಿಯಾಗುವ ಸಂಭವವಿದೆ , ಕೆಲಸ ಕಾರ್ಯಗಳು ಕುಂಠಿತಗೊಳ್ಳಲಿವೆ ,ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ. ಅನಾವಶ್ಯಕವಾಗಿ ಯಾತ್ರೆಯನ್ನು ಮಾಡಲಿದ್ದೀರಿ, ಆಧ್ಯಾತ್ಮಿಕತೆಯ ಕಡೆಗೆ ಮನಸ್ಸು ವಾಲುವುದು.

ಸಿಂಹ ರಾಶಿ.

 

ಕೋಪವೂ ಅಧಿಕಗೊಳ್ಳುವುದು ,ಜೀವನ ಸಂಗಾತಿ ಮತ್ತು ಪಾಲುದಾರಿಕೆಯ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಅನುಮಾನಗಳು ಹೆಚ್ಚಾಗಲಿವೆ, ದಾಂಪತ್ಯ ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ, ಕೆಲವರು ಬೇರೆಯಾಗುವುದಕ್ಕೆ ವಿಚ್ಛೇದನದವರೆಗೂ ಸಹ ಯೋಚಿಸುತ್ತಾರೆ , ಕೆಲಸ ಕಾರ್ಯಗಳಲ್ಲಿ ಸಾಮಾನ್ಯ ಸ್ಥಿತಿ ಇರುತ್ತದೆ, ಜೀವನ ಸಂಗಾತಿಗೆ ಕಷ್ಟಗಳು ಎದುರಾಗಲಿವೆ, ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ವಿವಾದಗಳು ಏರ್ಪಡುತ್ತವೆ.

ಕನ್ಯಾ ರಾಶಿ.

 

ಶತ್ರು ಮತ್ತು ವಿರೋಧಿಗಳು ನಾಶವಾಗುವರು, ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ಶುಭ ಫಲಗಳನ್ನು ಕಾಣಲಿದ್ದೀರಿ, ಲಾಭಗಳು ದೊರೆಯುತ್ತವೆ, ಒಳ್ಳೆಯ ಯಶಸ್ಸನ್ನು ಗಳಿಸಲಿದ್ದೀರಿ, ಧನ ಲಾಭವಾಗುವುದು ಮತ್ತು ಯಶಸ್ಸನ್ನು ಗಳಿಸುವಿರಿ, ಆದ್ದರಿಂದ ನಿಮ್ಮ ಮನಸ್ಸು ಖುಷಿಯಿಂದ ಸಂತೋಷದಿಂದ ಇರುವುದು. ಮನಸ್ಸಿನಲ್ಲಿ ಸಂತುಷ್ಟತೆಯ ಭಾವನೆ ಮೂಡುವುದು.

ತುಲಾ ರಾಶಿ.

 

ಒತ್ತಡಗಳು ಹೆಚ್ಚಾಗುವುದರಿಂದ ತೊಂದರೆಯಾಗುವುದು, ಸುದೀರ್ಘವಾದ ಯಾತ್ರೆಗಳನ್ನು ಮಾಡುವುದರಿಂದ ಕಷ್ಟ ಕರವಾಗುವುದು , ಹೆಸರು, ಗೌರವ ಪ್ರಖ್ಯಾತಿಯನ್ನು ಗಳಿಸಲು ಸಂಘರ್ಷವನ್ನು ಮಾಡಬೇಕಾಗುವುದು, ತಂದೆಯ ಜೊತೆಗೆ ಯಾವುದೋ ಒಂದು ವಿಷಯಕ್ಕೆ ವೈಮನಸ್ಯ ಉಂಟಾಗಬಹುದು.

ವೃಶ್ಚಿಕ ರಾಶಿ.

 

ಎಲ್ಲ ಕ್ಷೇತ್ರದಲ್ಲೂ ಲಾಭ ಮತ್ತು ವೃದ್ಧಿಯಾಗುವ ಸಂಭವವಿದೆ, ಧನಾಗಮನದ ಜೊತೆಗೆ ಧನಾಗಮನಕ್ಕೆ ಹೊಸ ದಾರಿಗಳು ದೊರೆಯಲಿವೆ, ವೃತ್ತಿಯಲ್ಲಿ ಏಳಿಗೆಯನ್ನು ಕಾಣಲಿದ್ದೀರಿ, ಮನಸ್ಸು ಪ್ರಸನ್ನತೆಯ ಭಾವನೆಯಲ್ಲಿ ಇರುವುದು.

ಧನಸ್ಸು ರಾಶಿ

 

ಇವರಿಗೆ ಹೊಸ ಚೈತನ್ಯ, ಹುಮ್ಮಸ್ಸು, ಶಕ್ತಿ ,ಮನಸ್ಸಿನಲ್ಲಿ ಮೂಡುವುದು ಮತ್ತು ಇವರ ಇಚ್ಛಾಶಕ್ತಿಯೂ ವೃದ್ಧಿಯಾಗುವುದು. ಎಲ್ಲ ಕೆಲಸದಲ್ಲೂ ನಿಮಗೆ ಒಳ್ಳೆಯ ಯಶಸ್ಸು ಲಭಿಸಲಿದೆ. ನಿಮ್ಮ ಸಹೋದರ, ಸಹೋದರಿಯರು ನಿಮಗೆ ಸಹಾಯವನ್ನು ಮಾಡಲು ತಯಾರಾಗಿರುತ್ತಾರೆ. ಸ್ವಲ್ಪ ದೂರ ಪ್ರಯಾಣ ಮಾಡುವ ಸಂಭವವಿದೆ, ಯಾತ್ರೆಯಿಂದ ನಿಮಗೆ ಲಾಭವಾಗುವುದು. ಪ್ರಯಾಣದಿಂದ ನಿಮಗೆ ಶುಭ ಸಂದೇಶ ಕೇಳಿ ಬರುವುದು, ಮನಸ್ಸಿನಲ್ಲಿ ಶಾಂತಿ ಮತ್ತು ಪ್ರಸನ್ನತೆಯ ಭಾವನೆ ಇರುವುದು, ಯಶಸ್ಸನ್ನು ಗಳಿಸಿದ ಮನೋಭಾವದಿಂದ ಮನಸ್ಸು ತೃಪ್ತಿಯಾಗುವುದು .

ಮಕರ ರಾಶಿ.

 

ಕುಟುಂಬವನ್ನು ಬಿಟ್ಟು ದೂರ ಹೋಗಬೇಕಾದ ಸಂದರ್ಭ ಎದುರಾಗಲಿದೆ, ಮಾನಸಿಕ ಒತ್ತಡ ಹೆಚ್ಚಾಗುವುದರಿಂದ ತೊಂದರೆಗಳು ಹೆಚ್ಚಾಗುವವು, ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಎದುರಾಗಲಿವೆ .

ಕುಂಭ ರಾಶಿ .

 

ಮಾನಸಿಕ ಒತ್ತಡ ನಿಮಗೆ ಹೆಚ್ಚಾಗಲಿದೆ, ಶಾರೀರಿಕವಾಗಿ ಕಷ್ಟ ಮತ್ತು ದುರ್ಘಟನೆಯಾಗುವ ಸಂಭವವಿದೆ, ನೀವು ವಾಹನವನ್ನು ಚಲಾಯಿಸುವವರಾಗಿದ್ದರೆ ವಾಹನಗಳನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರದಿಂದ, ತುಂಬಾ ಸಮಾಧಾನದಿಂದ ಚಲಾಯಿಸಿ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದರೆ, ಈಗಲೇ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ ಇಲ್ಲವೆಂದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲಿವೆ.

ಮೀನ ರಾಶಿ.

ಆರ್ಥಿಕವಾಗಿ ಜೀವನ ಸಾಮಾನ್ಯವಾಗಿರುವುದು, ಆರೋಗ್ಯ ಹದಗೆಡಬಹುದು, ಕುಟುಂಬದಲ್ಲಿ ಚಿಕ್ಕಪುಟ್ಟ ವಿಷಯಗಳ ಬಗ್ಗೆ ವಾದ ವಿವಾದಗಳು ಉಂಟಾಗಿ ,ಜಗಳ ಉಂಟಾಗಬಹುದು. ಯೋಚನೆ ಮಾಡಿ ಮಾತನಾಡಿ, ಆದರೆ ಕೆಟ್ಟ ಶಬ್ದಗಳನ್ನು ಉಪಯೋಗಿಸಬೇಡಿ .ಯಾರ ಜತೆಗೂ ಜಗಳ ಮಾಡಿಕೊಳ್ಳಬೇಡಿ, ಎಲ್ಲದಕ್ಕಿಂತ ಹೆಚ್ಚಾಗಿ ಸಮಾಧಾನದಿಂದ ಶಾಂತ ರೀತಿಯಿಂದ ವರ್ತಿಸಿ. ಆಗ ಈ ಸಮಯ ನಿಮಗೆ ಉತ್ತಮ ಸಮಯವಾಗಿ ಕಂಡು ಬರಲಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top