fbpx
ಭವಿಷ್ಯ

ನಿಮ್ಮ ರಾಶಿ ಮೇಷ ರಾಶಿಯಾಗಿದ್ದಾರೆ ಗುಣ ಲಕ್ಷಣಗಳು,ಅದೃಷ್ಟದ ಸಂಖ್ಯೆ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ

ನಿಮ್ಮ ರಾಶಿ ಮೇಷ ರಾಶಿಯಾಗಿದ್ದಾರೆ ಗುಣ ಲಕ್ಷಣಗಳು,ಅದೃಷ್ಟದ ಸಂಖ್ಯೆ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ

 

ಈ ರಾಶಿಯಲ್ಲಿ ಜನಿಸಿದವರು ರೂಪವಂತರಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.ಆತ್ಮವಿಶ್ವಾಸ ಜಾಸ್ತಿ, ಇವರು ಯಾವಾಗಲೂ ಕಲ್ಪನಾ ಲೋಕದಲ್ಲಿಯೇ ಇರುತ್ತಾರೆ. ಇವರು ಹಟ ಮಾರಿಗಳು ಮತ್ತು ಮುಂಗೋಪಿಗಳು,ಜಗಳ ಮಾಡುವ ಪ್ರವೃತ್ತಿ ಇರುವವರು, ವೈಯಾವಾಗಲೂ ನ್ಯಾಯ,ನೀತಿ,ಧರ್ಮಗಳನ್ನು ಪಾಲಿಸುವವರಾಗಿರುತ್ತಾರೆ , ಯಾವುದೇ ಕೆಲಸವಾದರೂ ಸಾಧಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ. ಇವರಿಗೆ ಸ್ನೇಹಿತರು ಜಾಸ್ತಿ .

ಕೆಲಸದಲ್ಲಿ ಅಧಿಕ ಶ್ರದ್ಧೆ ಇರುತ್ತದೆ.ವಿವಾಹ ನಂತರದ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ, ಇವರದ್ದು ಚಂಚಲ ಮನಸ್ಸು, ಕೈಹಿಡಿದ ಕೆಲಸ ಎಷ್ಟೇ ಕಠಿಣವಾದರೂ ಸಾಧಿಸದೇ ಬಿಡುವುದಿಲ್ಲ. ಸ್ವತಂತ್ರವಾಗಿರಲು ಬಯಸುವ ವ್ಯಕ್ತಿಗಳು ಇವರು, ಇವರಿಗೆ ಕೋಪ ಬರುವುದಿಲ್ಲ ,ಬಂದರೆ ಆದನ್ನು ನಿಯಂತ್ರಿಸುವುದು ಕಷ್ಟ ಮತ್ತು ಆಸಾಧ್ಯ. ತಾಳ್ಮೆಯಿಂದಿದ್ದರೆ ಏನನ್ನು ಬೇಕಾದರೂ ಸಾಧಿಸುವ ಗುಣ ಇವರದ್ದು, ಇವರಿಗೆ ಧರ್ಮದಲ್ಲಿ ಶ್ರದ್ಧೆ ಇರುತ್ತದೆ, ಧಾರ್ಮಿಕ ಕಾರ್ಯಗಳಲ್ಲಿಯೂ ಆಸಕ್ತಿ ಇರುತ್ತದೆ,ಇವರಲ್ಲಿ ನಾಯಕರಾಗುವ ಗುಣ ಹೇರಳವಾಗಿರುತ್ತದೆ.ರಕ್ತ ಹೀನತೆ ಮತ್ತು ರಕ್ತಕ್ಕೆ ಸಂಬಂಧಪಟ್ಟ ಖಾಯಿಲೆ ಜಾಸ್ತಿ ಹಾಗೂ ಅಪಘಾತಗಳು ಹೆಚ್ಚು.

 

ಮೇಷ ರಾಶಿಯ ಅಧಿಪತಿ.

 

ಮೇಷ ರಾಶಿಗೆ ಕುಜ,ಮಂಗಳ, ಆಥವಾ ಅಂಗಾರಕ ಗ್ರಹ ಅಧಿಪತಿಯಾಗಿರುತ್ತದೆ. ಚಿಹ್ನೆ ಟಗರು. ಕುಜ ಭೂಮಿ ಮತ್ತು ಜಮೀನು, ಮನೆ ಖರೀದಿ ಮಾಡುವ ಯೋಗ ಈ ರಾಶಿಯವರಿಗೆ ಇದೆ.

 

 

ಅದೃಷ್ಟ ರತ್ನ.

ಇವರ ಅದೃಷ್ಟ ರತ್ನ ಹವಳ, ಕನಕ ಪುಷ್ಯರಾಗ ಮುತ್ತು ಮಾಣಿಕ್ಯ.

 

 

ಆದೃಷ್ಟ ಬಣ್ಣ.

ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು.

 

ಆದೃಷ್ಟ ದಿನ.

ಅದೃಷ್ಟ ದಿನ ರವಿವಾರ ಮತ್ತು ಮಂಗಳವಾರ,ಗುರುವಾರ.

 

 

ಅದೃಷ್ಟ ದೇವತೆ.

ಅದೃಷ್ಟ ದೇವತೆ ಮಹಾಶಿವ ಮತ್ತು ಹನುಮಂತ ದೇವನನ್ನು ಸುಬ್ರಮಣ್ಯ ಸ್ವಾಮಿಯನ್ನು ಆರಾಧಿಸಿ ಪೂಜಿಸಬೇಕು.

 

ಅದೃಷ್ಟ ಮತ್ತು ದುರಾದೃಷ್ಟ ಸಂಖ್ಯೆ.

ಅದೃಷ್ಟ ಸಂಖ್ಯೆ ಒಂದು,ಮೂರು ಮತ್ತು ಒಂಬತ್ತು . ದುರಾದೃಷ್ಟ ಸಂಖ್ಯೆ ಎರಡು ಮತ್ತು ಏಳು.

 

ಆದೃಷ್ಟ ದಿನ.

ಅದೃಷ್ಟ ದಿನ ಒಂಬತ್ತು , ಹದಿನೆಂಟು ಮತ್ತು ಇಪ್ಪತ್ತೇಳು.

 

 

ಮಿತ್ರ ರಾಶಿಗಳು.

ಸಿಂಹ ರಾಶಿ, ಮತ್ತು ಧನಸ್ಸು ರಾಶಿ.

 

ಶತ್ರು ರಾಶಿಗಳು.

ಮಿಥುನ ರಾಶಿ ಮತ್ತು ಕನ್ಯಾ ರಾಶಿ.

 

ಮೇಷ ರಾಶಿಯವರ ವಿಶೇಷ ಗುಣ.

ಮೇಷ ರಾಶಿಯವರ ವಿಶೇಷ ಗುಣ ಏನೆಂದರೆ ಅವರು ಬಹಳ ದೈರ್ಯಶಾಲಿಗಳು ಮತ್ತು ಕೋಪಿಷ್ಟರು ಕೂಡ.

 

 

ವೇಷ ರಾಶಿಯ ಅಧಿಪತಿ ಕುಜ. ಕುಜನ ಮಂತ್ರವನ್ನು ತಪ್ಪದೇ ಪಠಿಸಿ, ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಪಡೆಯಲು ಮೇಷ ರಾಶಿಯವರು ಈ ಮಂತ್ರವನ್ನು ಪಠಿಸಿ…..ಕುಜನ ಮಂತ್ರ ಹೀಗಿದೆ….
“ಓಂ ಅಂಗಾರಕಾಯ ವಿದ್ಮಹೇ ,
ಶಕ್ತಿ ಹಸ್ತಾಯ ಧಿಮಿಹೀ,
ತನ್ನೋ ಭೌಮ ಪ್ರಚೋದಯಾತ್”
ಪರಿಹಾರ.

ಧ್ಯಾನ,ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಆಥವಾ ಕೇಳಿ ,ಹೆಚ್ಚು ನಿದ್ರೆ ಮಾಡಿ ಯಾಕೆಂದರೆ ನೀವು ತುಂಬಾ ಯೋಚನೆ ಮಾಡುತ್ತೀರಾ, ತಾಮ್ರದ ಲೋಟದಲ್ಲಿ ನೀರು ಕುಡಿಯಿರಿ,ತಾಮ್ರದ ಖಡ್ಗವನ್ನು ಕೈಗೆ ಧರಿಸಿ,ಕೆಂಪು ಬಣ್ಣದ 300 ಗ್ರಾ0 ಮಸೂರು ಬೆಳೆಯನ್ನು ಶಿವ ಆಥವಾ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೊಡಿ, ತೋರು ಬೆರಳ ಕೆಳಗೆ 3 ಎನ್ನುವ ಸಂಖ್ಯೆಯನ್ನು ಬರೆದುಕೊಳ್ಳಿ.ಈ ಪರಿಹಾರವನ್ನು ಮೇಷ ರಾಶಿಯವರು ಮತ್ತು 9 ,18,27 ನೇ ಸಂಖ್ಯೆಯಲ್ಲಿ ಹುಟ್ಟಿದವರು ಪಾಲಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top