fbpx
ದೇವರು

ಪಂಚಮುಖಿ ಆಂಜನೇಯ ಸ್ವಾಮಿಯು ಅವತರಿಸಿದ್ದು ಹೇಗೆ  ?  ಇದರ ಹಿಂದಿರುವ ರೋಚಕ ಕಥೆ ಏನು ಗೊತ್ತಾ?

ಪಂಚಮುಖಿ ಆಂಜನೇಯ ಸ್ವಾಮಿಯು ಅವತರಿಸಿದ್ದು ಹೇಗೆ  ?  ಇದರ ಹಿಂದಿರುವ ಕಥೆ ಏನು ?

 

ಅಂಜನಿ ಪುತ್ರ ಆಂಜನೇಯ ದೇವನು ರಾಮನ ಪರಮ  ಭಕ್ತ. ಬುದ್ಧಿಗೆ , ಧೈರ್ಯಕ್ಕೆ, ಯಶಸ್ಸಿಗೆ, ವಾಕ್ ಚಾತುರ್ಯಕ್ಕೆ , ಅಡಳಿತ ಮತ್ತು ಪರಾಕ್ರಮಕ್ಕೆ ಪ್ರತೀಕ ಹನುಮಂತ ದೇವನು.

 

 

ಇನ್ನೂ ಪಂಚಮುಖಿ ಆಂಜನೇಯ ಸ್ವಾಮಿಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ . ರಾಮಾಯಣದಲ್ಲಿ ಬರುವ ವಿವರಣೆಯ ಪ್ರಕಾರ ರಾಮ ಮತ್ತು ರಾವಣನ ಯುದ್ಧದ ಸಮಯದಲ್ಲಿ ರಾವಣನು ಮಹೀ ರಾವಣನ ಸಹಾಯ ಹಸ್ತವನ್ನು ಕೋರುತ್ತಾನಂತೆ. ಪಾತಾಳ ಲೋಕಕ್ಕೆ ಅಧಿಪತಿಯಾಗಿರುವ ಮಹೀ ರಾವಣನು  ಹನುಮಂತನು ರೂಪಿಸಿರುವಂತಹ ವಾನ ಶಯನ ಮಂದಿರ   ಅಂದರೆ ಹನುಮಂತನ ಬಾಲದಿಂದ ರೂಪಿತವಾಗಿರುವ ಶ್ರೀ ರಾಮ ಲಕ್ಷ್ಮಣನ ಶಯನ ಮಂದಿರದಿಂದ ಮಹೀ ರಾವಣನು ವಿಭೀಷಣನ ರೂಪದಲ್ಲಿ ಬಂದು ರಾಮ ಲಕ್ಷ್ಮಣರಿಬ್ಬರನ್ನೂ  ಅಪಹರಿಸುತ್ತಾನಂತೆ.

 

 

ಹೀಗೆ ಅಪಹರಿಸಿಕೊಂಡು ಮಹೀ ರಾವಣನು ಶ್ರೀ ರಾಮ ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗುತ್ತಾನಂತೆ. ಈ ವಿಷಯವನ್ನು ಅರಿತ ಹನುಮಂತನು ಪಾತಾಳಕ್ಕೆ ಜಿಗಿದು  ಶ್ರೀ ರಾಮ ಲಕ್ಷ್ಮಣರನ್ನು ಹುಡುಕಲು ಆರಂಭಿಸುತ್ತಾನಂತೆ ಪಾತಾಳದಲ್ಲಿ ಐದು ದಿಕ್ಕಿನಲ್ಲಿ ದೀಪಗಳನ್ನು ಒಂದೇ ಬಾರಿಗೆ ಛೇದಿಸಿದರೆ ಮಾತ್ರವೇ ಮಹೀ ರಾವಣನು ಅವಸಾನ ಪ್ರಾಪ್ತನಾಗುತ್ತಾನೆ ಎಂದು ತಿಳಿದ ಪವನ ಸುತ ಹನುಮಂತನು ಪಂಚಮುಖ ಆಂಜನೇಯ ಸ್ವಾಮಿಯಾಗಿ ಅವತರಿಸುತ್ತಾನೆ.

ಪಂಚಮುಖ ಆಂಜನೇಯನ (  ಐದು ಮುಖಗಳು) ಅವತಾರದಲ್ಲಿ ಒಂದು ಮುಖ ಆಂಜನೇಯ ಸ್ವಾಮಿಯದ್ದಾದರೆ ಇನ್ನುಳಿದ ನಾಲ್ಕು ಮುಖಗಳು ವರಾಹ, ನಾರಸಿಂಹ, ಗರುಡ ಮತ್ತು ಹಯಗ್ರೀವನ  ಮುಖಗಳಾಗಿರುತ್ತವೆ. ಹೀಗೆ ಈ ಐದು ಮುಖಗಳಿಂದ ಪಂಚಮುಖ ಹನುಮಂತನಾಗಿ ಐದು ದೀಪಗಳನ್ನು ಒಂದೇ ಏಟಿಗೆ ಅಂದರೆ ಒಂದೇ ಬಾರಿಗೆ ಶಾಂತಗೊಳಿಸಿ ಮಹೀ ರಾವಣನ ವಧೆ ಮಾಡುತ್ತಾನಂತೆ.

 

 

ಹಾಗೆ ಮಹೀ ರಾವಣನ  ವಧೆಯ ನಂತರ ಹನುಮಂತನು ರಾಮ ಲಕ್ಷ್ಮಣರನ್ನು ತನ್ನ ಎರಡು ತೋಳಿನ ಭುಜಗಳ ಮೇಲೆ ಕೂರಿಸಿಕೊಂಡು  ಹೊತ್ತುಕೊಂಡು ಭೂಮಿಗೆ ತರುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಹೀಗೆ ಪವನ ಸುತನು  ಪಂಚಮುಖಿ ಆಂಜನೇಯನಾಗಿ ಶ್ರೀರಾಮ ಲಕ್ಷ್ಮಣರನ್ನು ರಕ್ಷಿಸಿದನೆಂದು ಹಿಂದೂ ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ.

ಇನ್ನು ಆಂಜನೇಯ ಸ್ವಾಮಿಯ  ಕೇವಲ ನಾಮ ಸ್ಮರಣೆಯಿಂದಲೇ ಮಾತ್ರವೇ ಬುದ್ಧಿಬಲ, ಯಶಸ್ಸು , ಧೈರ್ಯ, ಸಂಕಲ್ಪ ಶಕ್ತಿ, ವಾಕ್ ಚಾತುರ್ಯ ,ಮನೋಬಲ ,ಜ್ಞಾನ ಮತ್ತು ಅಷ್ಟ ಸಿದ್ಧಿಯ ಗುಣ ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

 

 

ಹನುಮನ ನಾಮ ಸ್ಮರಣೆಯಿಂದ ಮಾತ್ರವೇ ಭೂತ ,ಪ್ರೇತ, ಪಿಶಾಚಿಗಳು , ನಕಾರಾತ್ಮಕ ಶಕ್ತಿಗಳು ದೂರ ಓಡಿಹೋಗುತ್ತವೆ.

ಭಜರಂಗಿಯೂ, ಪವನ ಸುತ ಹನುಮಂತನು ಆದ ಮಾರುತಿಯು  ಶನೈಶ್ಚರ ದೇವನ ಬಾಧೆಗಳನ್ನು ತೊಲಗಿಸುತ್ತಾನೆ. ಸಕಲ ಗ್ರಹದ ದೋಷಗಳು ಪಂಚಮುಖಿ ಆಂಜನೇಯನ ಪೂಜೆ ಮತ್ತು ಆರಾಧನೆಯಿಂದ ನಶಿಸಿ ಹೋಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top