fbpx
ದೇವರು

ರಾಮಾಯಣದ ಕಥೆಯಲ್ಲಿ ಶ್ರೀರಾಮ, ಸೀತೆ,ಲಕ್ಷ್ಮಣ ಮತ್ತು ರಾಕ್ಷಸನಾದ ರಾವಣನ ಬಗ್ಗೆ ನಿಮಗೆ ತಿಳಿಯದೇ ಇರೋ 25 ಆಶ್ಚರ್ಯಕಾರಿ ವಿಷಯಗಳು

ರಾಮಾಯಣದ ಕಥೆಯಲ್ಲಿ ಶ್ರೀರಾಮ, ಸೀತೆ,ಲಕ್ಷ್ಮಣ ಮತ್ತು ರಾಕ್ಷಸನಾದ ರಾವಣನ ಬಗ್ಗೆ ನಿಮಗೆ ತಿಳಿಯದೇ ಇರೋ 25 ಆಶ್ಚರ್ಯಕಾರಿ ವಿಷಯಗಳು

ನಮ್ಮ ಹಿಂದೂ ಧರ್ಮದಲ್ಲಿ ರಾಮಾಯಣವನ್ನು ಅತಿ ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಆದ್ದರಿಂದ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಎಲ್ಲ ವಿಷಯಗಳು ಸಹ ಸತ್ಯವೆಂದು ನಂಬಲಾಗಿದೆ. ಭಗವಂತನಾದ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ರಾಕ್ಷಸನಾದ ರಾವಣನ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಮತ್ತು ಇನ್ನೂ ಅನೇಕ ಪುಸ್ತಕಗಳಲ್ಲಿ ಬರೆಯಲಾಗಿದೆ ಇವೆಲ್ಲವೂ ಸತ್ಯ ಎಂದು ಸಹ ಭಾವಿಸಲಾಗಿದೆ.ಇದರ ಜೊತೆಗೆ ಇನ್ನೂ ಕೆಲವು ಕುತೂಹಲಕಾರಿ ಘಟನೆಗಳು ಇವೆ. ಅವು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾಗಿವೆ.ಅವುಗಳ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ತಿಳಿದಿಲ್ಲ. ಅವು ಸ್ವಲ್ಪ ಆಶ್ಚರ್ಯ ಹುಟ್ಟಿಸುವಂತಹ ಸಂಗತಿಗಳು ಸಹ ಆಗಿವೆ.

 

 

1.ರಾಮಾಯಣವು ಮಹರ್ಷಿ ವಾಲ್ಮೀಕಿಯಿಂದ ರಚಿತವಾಗಿದ್ದು. ಈ ಪೌರಾಣಿಕ ಕಥೆಯಲ್ಲಿ ಇಪ್ಪತ್ತ್ನಾಲ್ಕು ಸಾವಿರ ಶ್ಲೋಕಗಳು, ಐನೂರು ಉಪ ಕಾಂಡಗಳು ಮತ್ತು ಉತ್ತರಗಳ ಜೊತೆಗೆ ಏಳು ಕಾಂಡಗಳು ಇವೆ. ದಶರಥ ಮಹಾರಾಜನಿಗೆ ಅರವತ್ತು ವರ್ಷ ವಯಸ್ಸಾದರೂ ಸಹ ಮಕ್ಕಳಾಗದಿದ್ದಾಗ, ಮಕ್ಕಳನ್ನು ಪಡೆಯಲು ಸಂತಾನ ಭಾಗ್ಯಕ್ಕಾಗಿ ಯಜ್ಞವನ್ನು ಮಾಡಲು ನಿಶ್ಚಯಿಸಿದನು.

2.ವಾಲ್ಮೀಕಿ ರಾಮಾಯಣದ ಪ್ರಕಾರ ದಶರಥ ಮಹಾರಾಜನು ಯಜ್ಞಕ್ಕೆ ಸಿದ್ಧತೆಗಳನ್ನು ಮಾಡಿಕೊಂಡು ತಯಾರಾಗಿದ್ದು ಋುಷಿಶೃಂಗನ ಸಹಾಯದಿಂದ ಇವೆಲ್ಲವನ್ನೂ ಆಯೋಜಿಸಿದ್ದರು. ಋುಷಿಶೃಂಗನ ತಂದೆಯವರು ನಿಬಂಧಕ. ನಿಬಂಧಕರು ಒಂದು ದಿನ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಒಂದು ಸುಂದರವಾದ ಸ್ತ್ರೀಯನ್ನು ಕಂಡರು. ಸ್ತ್ರೀಯನ್ನು ಕಂಡೊಡನೆ ಇವರಿಗೆ ಅರಿಯದಂತೆ ನದಿಯಲ್ಲಿ ವೀರ್ಯವನ್ನು ಹೊರಹಾಕುತ್ತಾರೆ. ಆ ವೀರ್ಯವಿರುವ ನೀರು ಹರಿದುಕೊಂಡು ಆ ಮಹಿಳೆಯ ಕಡೆಗೆ ಹರಿದು ಹೋಯಿತು. ಆ ಮಹಿಳೆಯೂ ಕೂಡ ಈ ಸಂಗತಿಯನ್ನು ಅರಿಯದೆ ಆ ನೀರನ್ನು ಕುಡಿದು ಬಿಟ್ಟಳು. ಆದ್ದರಿಂದಲೇ ಋುಷಿಶೃಂಗನು ಜನಿಸಿದರು.

 

 

3.ತುಳಸಿದಾಸರ ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಕಾರ ಸೀತಾ ಸ್ವಯಂವರದಲ್ಲಿ ಶ್ರೀರಾಮನು ಬಿಲ್ಲನ್ನು ಎತ್ತಿದ್ದನು ಮತ್ತು ಅದನ್ನು ಮುರಿದನು. ಆದರೆ ಈ ಸಂದರ್ಭದ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಸಹ ಉಲ್ಲೇಖಿತವಾಗಿಲ್ಲ.

4. ಶ್ರೀರಾಮಚರಿತ ಮಾನಸದ ಪ್ರಕಾರ ಸೀತಾ ಸ್ವಯಂವರದಲ್ಲಿ ಪರಶುರಾಮರು ಬಂದಿದ್ದರು. ಆದರೆ ರಾಮಾಯಣದ ಪ್ರಕಾರ ರಾಮನು ಸೀತೆಯನ್ನು ವಿವಾಹವಾಗಿ ಅಯೋಧ್ಯೆಗೆ ಮರಳುವಾಗ ಪರಶುರಾಮರು ಬಂದಿದ್ದರು ಎಂದು ಉಲ್ಲೇಖಿತವಾಗಿದೆ.

 

 

5. ಶ್ರೀರಾಮನು ವನವಾಸಕ್ಕೆ ಹೋಗುವ ಸಮಯದಲ್ಲಿ ಶ್ರೀರಾಮನಿಗೆ ಕೇವಲ 27 ವರ್ಷ ವಯಸ್ಸಾಗಿತ್ತು.

6.ಲಕ್ಷ್ಮಣನಿಗೆ ಶ್ರೀರಾಮನು ವನವಾಸಕ್ಕಾಗಿ ಕಾಡಿಗೆ ತೆರಳುವನು ಎಂದು ತಿಳಿದಾಗ ಲಕ್ಷ್ಮಣನು ಕೋಪೋದ್ರಿಕ್ತನಾಗಿ ಅವನು ತಂದೆಯ ಜೊತೆಯೇ ಯುದ್ಧ ಮಾಡುವಂತೆ ಮತ್ತು ಯುದ್ಧ ಮಾಡಿ ಜಯಿಸುವಂತೆ ಶ್ರೀರಾಮನಿಗೆ ಹೇಳಿದನು.ಆದರೆ ಶ್ರೀರಾಮನು ಈ ವಿಷಯದ ಬಗ್ಗೆ ಕೂಲಂಕುಷವಾಗಿ ಲಕ್ಷ್ಮಣನ ಜೊತೆಗೆ ಪ್ರಸ್ತಾಪಿಸಿದಾಗ ಲಕ್ಷ್ಮಣನು ಶಾಂತನಾದನು.

7. ದಶರಥ ಮಹಾರಾಜನು ಹಿರಿಯ ಮಗನಾದ ಶ್ರೀರಾಮನಿಗೆ ಕಾಡಿಗೆ ಹೋಗಲು ಹೇಳಿದಾಗ ಶ್ರೀರಾಮನಿಗೆ ಅಪಾರ ಪ್ರಮಾಣದ ಸಂಪತ್ತನ್ನು ಕೊಡಲು ಬಯಸಿದ್ದನು. ಆದ್ದರಿಂದ ರಾಮನಿಗೆ ಖುಷಿಯಾಗುವುದೆಂದು ಸಹ ಯೋಚಿಸಿದ್ದನು. ಆದರೆ ದಶರಥ ಮಹಾರಾಜನ ಮೂರನೇ ಹೆಂಡತಿಯಾದ ಕೈಕೇಯಿಯು ಇದಕ್ಕೆಲ್ಲ ಒಪ್ಪಲಿಲ್ಲ.

 

 

8. ದಶರಥ ಮಹಾರಾಜನ ಮೂರನೇ ಪುತ್ರನಾದ ಭರತನಿಗೆ ಅವರ ತಂದೆಯ ಸಾವಿನ ಬಗ್ಗೆ ಅವನ ಕನಸಿನಲ್ಲಿ ಮುನ್ಸೂಚನೆಯನ್ನು ದೊರೆತಿತ್ತು . ಕನಸಿನಲ್ಲಿ ಒಂದು ರಾತ್ರಿ ಅವರ ತಂದೆ ಕಪ್ಪು ಬಟ್ಟೆಯನ್ನು ಧರಿಸಿರುವುದನ್ನು ಭರತನು ಕಂಡಿದ್ದನು.

9. ಹಿಂದೂ ಧರ್ಮದ ಪ್ರಕಾರ ಮೂವತ್ತಮೂರು ಕೋಟಿ ದೇವಾನುದೇವತೆಗಳು ಇದ್ದಾರೆ. ಆದರೆ ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡದ ಪ್ರಕಾರ ಮೂವತ್ತ ಮೂರು ದೇವಿ ಮತ್ತು ದೇವತೆಗಳು ಇದ್ದಾರೆ ಎಂದು ಉಲ್ಲೇಖಿತವಾಗಿದೆ.

10.ಸೀತೆಯನ್ನು ರಾವಣನು ಅಪಹರಿಸಿದಾಗ ಪಕ್ಷಿಗಳ ರಾಜ ಜಟಾಯು ಅವಳನ್ನು ರಕ್ಷಿಸಲು ಮುಂದಾಯಿತು. ಆದರೆ ಜಟಾಯುವು ತನ್ನ ಪ್ರಾಣವನ್ನೇ ಕಳೆದುಕೊಂಡಿತು.ಆದರೆ ವಾಲ್ಮೀಕಿ ರಾಮಾಯಣದ ಪ್ರಕಾರ ಅದು ಜಟಾಯು ಅಲ್ಲ,ಬದಲಾಗಿ ಸೀತೆಯನ್ನು ರಕ್ಷಿಸಲು ಬಂದಿದ್ದು ಜಟಾಯುವಿನ ತಂದೆ ಅರುಣ ಎಂದು ಹೇಳಲಾಗಿದೆ.

 

 

11. ವಿದ್ಯುತ್ ತಿಜ್ನ ಶೂರ್ಪನಖಿಯ ಗಂಡನಾಗಿದ್ದು, ಶೂರ್ಪನಖೀ ರಾವಣನ ತಂಗಿ ಯಾಗಿದ್ದಳು. ಅವನು ಕಲ್ಕಾಯ ರಾಜನ ಸೇನೆಯಲ್ಲಿ ಸೇನಾಪತಿಯಾಗಿದ್ದನು.ರಾವಣನು ಇಡೀ ಜಗತ್ತನ್ನೇ ಗೆಲ್ಲಲು ಮುಂದಾದಾಗ ಅವನು ಶೂರ್ಪನಕಿಯ ಪತಿಯಾದ ಕಲ್ಕಾಯುವಿನ ಜೊತೆಗೂ ಯುದ್ಧ ಮಾಡಿದನು. ಆದ್ದರಿಂದ ಕಲ್ಕಾಯು ಮರಣ ಹೊಂದಿದನು. ಇದರಿಂದ ಶೂರ್ಪನಖಿಯು ಕೋಪಗೊಂಡು ರಾವಣನಿಗೆ ಶಾಪ ಕೊಟ್ಟಳು. ಅದೇನೆಂದರೆ ತನ್ನ ಸ್ವಂತ ಅಣ್ಣನ ಸಾವಿಗೆ ನಾನೇ ಕಾರಣಗಳಾಗಿವೆ ಎಂದು ಹೇಳಿದಳು.

12. ರಾವಣನು ಸೀತೆಯನ್ನು ಅಪಹರಿಸಿ ಅಶೋಕ ವನಕ್ಕೆ ಕರೆದುಕೊಂಡು ಬಂದ ದಿನವೇ ಅದೇ ದಿನ ರಾತ್ರಿ ಜಗತ್ತಿನ ಸೃಷ್ಟಿಕರ್ತನಾದ ಬ್ರಹ್ಮ ದೇವನು ಇಂದ್ರ ದೇವನನ್ನು ಸೀತೆಯ ಬಳಿ ಹೋಗಿ ಸಿಹಿಯಾದ ಖಾದ್ಯ ಕೀರನ್ನು (ಅಕ್ಕಿ ಮತ್ತು ಹಾಲಿನಿಂದ ಮಾಡಿದ ಸಿಹಿಯಾದ ಖಾದ್ಯ ) ಕೊಟ್ಟು ಬರಲು ಕಳಿಸಿದ್ದನು. ಇಂದ್ರ ದೇವನು ಅವನಿಗಿರುವ ಅತೀಂದ್ರೀಯ ಶಕ್ತಿಯಿಂದ ಅಲ್ಲಿ ಕಾವಲಿಗಿದ್ದ ಎಲ್ಲ ರಾಕ್ಷಸರನ್ನು ಮಲಗುವಂತೆ ಮಾಡಿ ನಂತರ ಸೀತೆಗೆ ಕೀರನ್ನು ಕೊಟ್ಟನು.

13. ಶ್ರೀರಾಮ ಮತ್ತು ಲಕ್ಷ್ಮಣನು ಕಾಡಿನಲ್ಲಿ ಸೀತೆಗೆ ಹುಡುಕಾಡುತ್ತಿರುವ ಅವರು ರಾಕ್ಷಸನಾದ ಕಂಬದನನ್ನು ಕೊಂದರು.ಕಂಬದ ಶಾಪದಿಂದ ರಾಕ್ಷಸನಾಗಿದ್ದನು. ಶ್ರೀರಾಮನು ಅವನ ದೇಹವನ್ನು ಸುಟ್ಟು ಹಾಕಲು ಮುಂದಾದಾಗ ಅವನ ಆತ್ಮವು ಶಾಪದಿಂದ ಮುಕ್ತಿಯನ್ನು ಪಡೆಯಿತು. ಆಗ ಶ್ರೀರಾಮನು ಅವನಿಗೆ ಸುಗ್ರೀವನ ಜೊತೆ ಸ್ನೇಹ ಬೆಳೆಸಲು ಹೇಳಿದನು.

 

 

14.ವಾಲ್ಮೀಕಿ ರಾಮಾಯಣದ ಪ್ರಕಾರ ರಾಮ ಸೇತುವೆಯನ್ನು ಕಟ್ಟಲು ಸಮುದ್ರದ ಮೇಲೆ ಕೇವಲ ಐದು ದಿನಗಳು ಮಾತ್ರ ಸಾಕಾಗಿತ್ತು.

15.ಒಂದು ಬಾರಿ ರಾವಣನು ಕೈಲಾಸ ಪರ್ವತಕ್ಕೆ ಶಿವನನ್ನು ಭೇಟಿಯಾಗಲು ಹೋದಾಗ ಕೈಲಾಸದಲ್ಲಿ ನಂದಿಯನ್ನು ನೋಡಿ ಹೀಯಾಳಿಸಿ ಗಹಗಹಿಸಿ ಆಡಿಸಿಕೊಂಡು ನಕ್ಕಿದ್ದನು.ಇದರಿಂದ ನಂದಿಯು ತೀವ್ರವಾಗಿ ಕೋಪಗೊಂಡು ರಾವಣನಿಗೆ ನಿನ್ನ ವಿನಾಶ ಮತ್ತು ಸಾವು ಒಂದು ಕೋತಿಯಿಂದಲೇ ಆಗುವುದು ಎಂದು ಶಾಪ ಕೊಟ್ಟನು.

 

16.ವಾಲ್ಮೀಕಿ ರಾಮಾಯಣದ ಪ್ರಕಾರ ರಾಕ್ಷಸನಾದ ರಾವಣನು ಕೈಲಾಸ ಪರ್ವತವನ್ನು ಶಿವನನ್ನು ಪ್ರಸನ್ನಗೊಳಿಸಲು ಎತ್ತಿದ್ದನು. ಆದರೆ ಪಾರ್ವತಿ ದೇವಿಯು ಇದರಿಂದ ಭಯಗೊಂಡು ರಾವಣನಿಗೆ ನಿನ್ನ ಸಾವು ಒಂದು ಸ್ತ್ರೀಯಿಂದಲೇ ಆಗುವುದು ಎಂದು ಶಾಪ ನೀಡಿದಳು.

17.ರಾಮ ಮತ್ತು ರಾವಣನ ನಡುವೆ ಯುದ್ಧವಾದಾಗ ಇಂದ್ರ ದೇವನು ಶ್ರೀರಾಮನಿಗೆ ಒಂದು ಮಾಯಾ ರಥವನ್ನು ವನ್ನು ಕಳಿಸಿದ್ದನು. ಶ್ರೀರಾಮನು ಆ ರಥದಲ್ಲಿ ಕುಳಿತುಕೊಂಡಿರುವಾಗಲೆ ರಾವಣನನ್ನು ಸಂಹರಿಸಿದನು.

18. ರಾವಣನ ಲಂಕೆಯ ಸಾಮ್ರಾಜ್ಯದಲ್ಲಿ ಉಳಿಯಲು ಇಷ್ಟಪಡುತ್ತಿದ್ದನು. ಯಾಕೆಂದರೆ ಅದು ಚಿನ್ನದಿಂದ ನಿರ್ಮಾಣವಾದ ಅರಮನೆಯಾಗಿತ್ತು. ಲಂಕೆಯನ್ನು ರಾವಣನಿಗಿಂತ ಮೊದಲು ಆಳಿದ್ದು ರಾಮನ ಸಹೋದರನಾದ ಅಂದರೆ ಅಣ್ಣನಾದ ಕುಬೇರನಾಗಿದ್ದ. ರಾವಣನು ಕುಬೇರನನ್ನು ಯುದ್ಧಕ್ಕೆ ಆಹ್ವಾನಿಸಿ ಎದುರಿಸಿ ಲಂಕೆಯನ್ನು ವಶಪಡಿಸಿಕೊಂಡನು.

19.ಒಂದು ಬಾರಿ ರಾವಣನು ಎಲ್ಲಿಗೂ ಪುಷ್ಪಕ ವಿಮಾನದಲ್ಲಿ ಹೋಗುವಾಗ ದಾರಿ ಮಾರ್ಗದಲ್ಲಿ ಒಬ್ಬಳು ಸುಂದರವಾದ ಯುವತಿಯನ್ನು ನೋಡಿದನು. ಅವಳು ವಿಷ್ಣು ದೇವನ ಪರಮ ಭಕ್ತೆಯಾಗಿದ್ದಳು. ದೇವನಾದ ವಿಷ್ಣುವನ್ನು ಪೂಜಿಸುವುದರಲ್ಲಿ ತಲ್ಲೀನಳಾಗಿದ್ದಳು. ರಾವಣನು ಅವಳ ಸೌಂದರ್ಯಕ್ಕೆ ಮೋಹಿತನಾಗಿ ಅವಳನ್ನು ಮದುವೆಯಾಗು ಎಂದು ಪೀಡಿಸಿದನು. ಅವಳಿಗೆ ಹಿಂಸೆ ಕೊಟ್ಟು ಕೂದಲು ಹಿಡಿದು ಎಳೆದನು. ಆಗ ಅವಳು ಸ್ವತಃ ತಾನೇ ಅಗ್ನಿಗೆ ಹಾರಿ ಅಗ್ನಿಗಾಹುತಿಯಾಗಿ ಪ್ರಾಣ ಬಿಟ್ಟಳು. ರಾವಣನಿಗೆ ಶಾಪ ನೀಡಿದಳು. ಮುಂದೆ ಅವನ ಸಾವಿಗೆ ಅವಳೇ ಕಾರಣಳಾಗುವಳೆಂದು ಹೇಳಿ ಅಸು ನೀಗಿದಳು. ಅವಳೇ ವೇದವತಿ. ಅವಳೇ ಮುಂದೆ ಸೀತೆಯಾಗಿ ಜನ್ಮ ತಾಳಿದಳು.

20.ರಾವಣನೇ ರಾಕ್ಷಸರ ರಾಜನಾಗಿದ್ದ . ಅವನಿಗೆ ಬಾಲ್ಯದಲ್ಲಿ ಹತ್ತು ತಲೆಗಳಿರುವ ಕಾರಣ ಅವನನ್ನು ಎಲ್ಲರೂ ನೋಡಿ ಭಯಪಡುತ್ತಿದ್ದರು. ಅವನು ಶಿವನ ಪರಮ ಭಕ್ತನಾಗಿದ್ದನು.ರಾವಣನು ವೇದ ಪಾರಂಗತನಾಗಿದ್ದನು. ವೀಣೆಯನ್ನು ನುಡಿಸುವುದರಲ್ಲಿಯೂ ಸಹ ಪರಿಣಿತಿಯನ್ನು ಹೊಂದಿದ್ದನು. ಆದ್ದರಿಂದ ರಾವಣನ ಬಾವುಟದಲ್ಲಿಯೂ ಸಹ ವೀಣೆಯ ಚಿತ್ರವನ್ನು ಕಾಣಬಹುದು.ವೀಣೆಯನ್ನು ನುಡಿಸುವ ಕಲೆಗೆ ರಾವಣನು ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಲಿಲ್ಲ. ಆದರೆ ಅವನಿಗೆ ವೀಣೆಯನ್ನು ನುಡಿಸುವುದೆಂದರೆ ಬಹಳ ಇಷ್ಟವಾಗಿತ್ತು .

 

21.ರಾವಣ ಮತ್ತು ಶ್ರೀರಾಮನ ಯುದ್ಧದಲ್ಲಿ ವಿಭೀಷಣನಿಲ್ಲದೆ ಶ್ರೀರಾಮನು ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಯುದ್ಧಕ್ಕೆ ತಯಾರಾಗುತ್ತಿರುವಾಗ ವಿಭೀಷಣ ರಾವಣನಿಗೆ ಸಲಹೆ ನೀಡಿದನು.ಅದೇನೆಂದರೆ ರಾವಣನಿಗೆ ವಿಭೀಷಣನ ಹೀಗೆ ಹೇಳಿದನು. ಸೀತೆಯನ್ನು ರಾಮನಿಗೆ ಒಪ್ಪಿಸಿ ಶರಣಾಗಿ ಈಗಲೂ ಸಹ ಕಾಲ ಮಿಂಚಿಲ್ಲ ಎಂದು ಸಲಹೆ ನೀಡಿದನು. ಇದರಿಂದ ರಾವಣನು ಕೋಪಗೊಂಡು ವಿಭೀಷಣನನ್ನು ತನ್ನ ಸಾಮ್ರಾಜ್ಯದಿಂದ ದೂರ ಓಡಿಸಿದನು.ಆಗ ವಿಭೀಷಣನು ರಾಮನ ಪಕ್ಷವನ್ನು ಬಂದು ಸೇರಿಕೊಂಡನು. ರಾವಣನು ಸೀತೆಯೂ ಸತ್ತು ಹೋಗಿರುವಳು ಎಂದು ಯುದ್ಧದಲ್ಲಿ ಭ್ರಮೆ ಮೂಡಿಸಿದನು. ಇದರಿಂದ ರಾಮ ಮೂರ್ಛೆ ಹೊಂದಿದನು. ಆಗ ಶ್ರೀರಾಮನಿಗೆ ವಿಭೀಷಣನು ರಾವಣನ ಮಾಯಾಜಾಲದ ಬಗ್ಗೆ ವಿವರಿಸಿ ಹೇಳಿದನು.

22.ಈ ಸಂಪೂರ್ಣ ರಾಮಾಯಣದ ಕಥೆಯಲ್ಲಿ ರಾವಣನನ್ನು ಅತ್ಯಂತ ಕ್ರೂರಿ ಮತ್ತು ಶಕ್ತಿಶಾಲಿ ರಾಕ್ಷಸ ಎಂದು ವರ್ಣಿಸಲಾಗಿದೆ .ಆದರೆ ರಾವಣನು ತನ್ನ ಹಿಂದಿನ ಜನ್ಮದಲ್ಲಿ ವಿಷ್ಣುವಿನ ಪರಮ ಭಕ್ತನಾಗಿದ್ದು. ಅವನಿಗೆ ಶಾಪದ ಕಾರಣ ವಿಷ್ಣುವಿನ ಕೈಯಿಂದಲೇ ಐದು ಬಾರಿ ಈ ಭೂಮಿಯ ಮೇಲೆ ಜನ್ಮ ತಾಳಿ ಮರಣ ಹೊಂದಿ ನಂತರ ವಿಷ್ಣುವಿನ ಭಕ್ತಿಗೆ ಪಾತ್ರನಾಗಬಹುದು ಎಂದು ವಿಷ್ಣುವು ಹೇಳಿದ್ದನು. ಆದ್ದರಿಂದಲೇ ಶ್ರೀರಾಮನು ಸಹ ಸಾಕ್ಷಾತ್ ವಿಷ್ಣುವಿನ ಅವತಾರವೇ ಆಗಿರುವುದರಿಂದ ರಾವಣನು ಶ್ರೀರಾಮನಿಂದಲೇ ಮರಣ ಹೊಂದಿದರೆ ಮೋಕ್ಷವನ್ನು ಪಡೆಯುವವನಾಗಿದ್ದನು.

 

ರಾವಣನು ಈ ರೀತಿ ಹೇಳುತ್ತಾನೆ ರಾಮ ಮತ್ತು ಲಕ್ಷ್ಮಣ ಸಾಮಾನ್ಯ ಮನುಷ್ಯರಾಗಿದ್ದರೆ. ಅವರನ್ನು ನಾನು ಯುದ್ಧದಲ್ಲಿ ಸೋಲಿಸಿ ಸೀತೆಯನ್ನು ಹೊತ್ತು ತರುತ್ತೇನೆ.ಆ ಮನುಷ್ಯರನ್ನು ನಾನು ಗೆಲ್ಲುತ್ತೇನೆ. ಆದರೆ ಅವರು ದೇವರಾಗಿದ್ದಲ್ಲಿ ನಾನು ಅವರ ಬಾಣಗಳಿಂದಲೆೇ ಸಾಯುತ್ತೇನೆ. ಅವರ ಕೈಯಿಂದಲೇ ಹತನಾಗುತ್ತಾನೆ ಮತ್ತು ಮೋಕ್ಷವನ್ನು ಪಡೆಯುತ್ತೇನೆ ಎಂದು ಹೇಳಿದ್ದನು.

23. ರಾಮನು ಈ ಭೂಮಿಯ ಮೇಲೆಯೇ ಜಲ ಸಮಾಧಿಯಾಗಿ ಸರಯೂ ನದಿಯ ಬಳಿ ಸಾಯುತ್ತಾನೆ ಎಂದು ನಂಬಲಾಗಿದೆ. ಸೀತೆಯ ಮುಗ್ಧತೆಯನ್ನು ಪರೀಕ್ಷಿಸಲು ಇನ್ನೊಂದು ಪರೀಕ್ಷೆಯನ್ನು ನಡೆಸಲು ಮುಂದಾದಾಗ ಸೀತೆಯೂ ಕಾಡಿನಲ್ಲಿ ಇರುವಾಗ ಅವಳ ತಾಯಿಯಾದ ಭೂದೇವಿಯನ್ನು ಮರಳಿ ತನ್ನ ಬಳ್ಳಿ ಮರಳಿ ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತಾಳೆ. ಭೂದೇವಿಯು ಭೂಮಿಯನ್ನು ಎರಡು ಭಾಗವನ್ನಾಗಿ ಮಾಡಿ ಸೀತೆಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಲು ಬರುತ್ತಾಳೆ . ಆಗ ಸೀತೆಯ ಮಗನಾದ ಕುಷನು ತನ್ನ ಅಮ್ಮನ ಕೈಗಳನ್ನು ಹಿಡಿದು ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ ಆದ್ದರಿಂದ ಕುಷನು ಸಹ ಚಿಂತಾಕ್ರಾಂತ ನಾಗುತ್ತಾನೆ.ತಾಯಿಯನ್ನು ಕಳೆದುಕೊಂಡ ಕುಶನು ಅವರ ತಾಯಿಯಾದ ಸೀತೆಯನ್ನೇ ಹಿಂಬಾಲಿಸುತ್ತಾನೆ. ಇದನ್ನೆಲ್ಲ ಕಣ್ಣಾರೆ ಕಂಡ ಶ್ರೀರಾಮನು ತನ್ನ ಪ್ರೀತಿ ಪಾತ್ರಳಾದ ಸೀತೆಯನ್ನು ಕಳೆದುಕೊಂಡ ದುಃಖದಲ್ಲಿ ಅವನು ತನ್ನ ಮನುಷ್ಯ ಜೀವನವನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾನೆ.ಆದ್ದರಿಂದಲೇ ಶ್ರೀರಾಮನು ಭಗವಂತನಾದ ಶ್ರೀ ವಿಷ್ಣುವನ್ನು ಸೇರಲು ಸರಯೂ ನದಿಯ ಬಳಿ ಹೋಗಿ ಜಲಸಮಾಧಿ ಯಾಗುತ್ತಾನೆ.

 

 

24. ಲಕ್ಷ್ಮಣನು ತನ್ನ ಹದಿನಾಲ್ಕು ವರ್ಷಗಳ ಸಂಪೂರ್ಣ ವನವಾಸದ ಸಮಯದಲ್ಲಿ ನಿದ್ರೆಯನ್ನೇ ಮಾಡುವುದಿಲ್ಲ. ತನ್ನ ಸ್ವಂತ ಅಣ್ಣನಾದ ಶ್ರೀ ರಾಮ ಮತ್ತು ತನ್ನ ಅತ್ತಿಗೆಯಾದ ಸೀತೆಯನ್ನು ರಕ್ಷಿಸಲು ಹದಿನಾಲ್ಕು ವರ್ಷವೂ ಸಹ ಎಚ್ಚರವಾಗಿಯೇ ಇರುತ್ತಾನೆ.ಆದ್ದರಿಂದ ಲಕ್ಷ್ಮಣನನ್ನು ಗುದಕೇಶ ಎಂದು ಕರೆಯಲಾಗುತ್ತದೆ.
ಲಕ್ಷ್ಮಣನು ತನ್ನ ವನವಾಸದ ಮೊದಲ ರಾತ್ರಿಯಲ್ಲೇ ನಿದ್ರಾದೇವಿಯನ್ನು ಆಹ್ವಾನಿಸಿ ಹೀಗೆ ಬೇಡಿಕೊಳ್ಳುತ್ತಾನೆ. ತನ್ನ ಅಣ್ಣನಾದ ಶ್ರೀರಾಮ ಮತ್ತು ಅತ್ತಿಗೆಯಾದ ಸೀತೆಯನ್ನು ರಕ್ಷಿಸಲು ತನ್ನ ಹದಿನಾಲ್ಕು ವರ್ಷಗಳ ವನವಾಸದಲ್ಲಿ ತನಗೆ ನಿದ್ರೆ ಬಾರದೇ ಇರುವ ಹಾಗೆ ವರವನ್ನು ನೀಡು ಎಂದು ನಿದ್ರಾದೇವಿಯನ್ನು ಕೇಳಿಕೊಳ್ಳುತ್ತಾನೆ. ಆಗ ನಿದ್ರಾದೇವಿಯ ಇದಕ್ಕೆ ಒಪ್ಪಿಕೊಂಡು ಇನ್ನೊಂದು ಷರತ್ತನ್ನು ವಿಧಿಸುತ್ತಾಳೆ. ತಾನು ಎಚ್ಚರವಾಗಿರಬೇಕಾದರೆ ತನ್ನ ನಿದ್ರೆಯನ್ನು ಇನ್ನೊಬ್ಬರು ಮಾಡಬೇಕೆಂದು ಹೇಳುತ್ತಾಳೆ. ಆಗ ಲಕ್ಷ್ಮಣನು ತನ್ನ ಹೆಂಡತಿಯಾದ ಊರ್ಮಿಳೆಯು ಈ ಕೆಲಸವನ್ನು ನಿರ್ವಹಿಸುವಳು ಎಂದು ಅವಳ ಹೆಸರನ್ನೇ ನಿದ್ರಾದೇವಿಗೆ ಹೇಳುತ್ತಾನೆ.

ಆಗ ನಿದ್ರಾದೇವಿಯ ಊರ್ಮಿಳೆಯ ಬಳಿ ಹೋಗಿ ಇದನ್ನೆಲ್ಲ ವಿವರಿಸಿ ಹೇಳಿದಾಗ ಊರ್ಮಿಳೆಯು ಸಹ ಇದಕ್ಕೆ ಒಪ್ಪುತ್ತಾಳೆ. ಆಗ ಊರ್ಮಿಳೆಯು ಪ್ರತಿ ದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಕೂಡ ನಿದ್ರೆ ಮಾಡಿಯೇ ಕಾಲ ಕಳೆಯುತ್ತಾಳೆ. ರಾತ್ರಿಯಲ್ಲಿ ಅವಳ ನಿದ್ರೆಯನ್ನು ಬೆಳಗಿನ ಸಮಯದಲ್ಲಿ ಲಕ್ಷ್ಮಣ ನಿದ್ರೆಯನ್ನು ಮಾಡಿ ಹಗಲು ರಾತ್ರಿ ಕೂಡ ನಿದ್ರೆಯಲ್ಲಿಯೇ ಕಾಲ ಕಳೆಯುತ್ತಾಳೆ .ಇದರಿಂದಾಗಿಯೇ ಊರ್ಮಿಳೆಯ ಸಹಾಯದಿಂದ ಲಕ್ಷ್ಮಣನು ಇಡೀ ಹದಿನಾಲ್ಕು ವರ್ಷಗಳ ವನವಾಸದಲ್ಲಿ ಎಚ್ಚರವಾಗಿದ್ದು ರಾಮ ಮತ್ತು ಸೀತೆಯನ್ನು ಸಹ ರಕ್ಷಣೆ ಮಾಡಿ. ನಂತರ ಯುದ್ಧದಲ್ಲಿ ರಾವಣನ ಮಗನಾದ ಮೇಘನಾದನನ್ನು ಸಹ ಲಕ್ಷ್ಮಣನು ಸಂಹರಿಸಿದನು.

25. ಈ ರಾಮಾಯಣದ ಸಂಪೂರ್ಣ ಕಥೆಯಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ ಲಕ್ಷ್ಮಣ ರೇಖೆ. ಇದರಲ್ಲಿ ಲಕ್ಷ್ಮಣನು ವನವಾಸದಲ್ಲಿದ್ದಾಗ ಕಾಡಿನಲ್ಲಿ ತಮ್ಮ ಗುಡಿಸಲಿನ ಸುತ್ತ ಒಂದು ಗೆರೆಯನ್ನು ಎಳೆಯುತ್ತಾನೆ. ಅದನ್ನೇ ಲಕ್ಷ್ಮಣ ರೇಖೆ ಎಂದು ಕರೆಯಲಾಗುತ್ತದೆ.

ಒಂದು ದಿನ ಕಾಡಿನಲ್ಲಿ ಸೀತೆಯೂ ಒಂದು ಸುಂದರವಾದ ಜಿಂಕೆಯನ್ನು ನೋಡುತ್ತಾಳೆ. ಆಗ ಸೀತೆ ರಾಮನಿಗೆ ಆ ಜಿಂಕೆಯನ್ನು ಹಿಡಿದುಕೊಂಡು ಬರಲು ಹೇಳುತ್ತಾಳೆ. ಆಗ ರಾಮನು ಆ ಜಿಂಕೆಯನ್ನು ಹಿಂಬಾಲಿಸಿದಾಗ ಆ ಜಿಂಕೆಯು ರಾಕ್ಷಸನಾದ ಮಾರೀಚನ ರೂಪ ತಾಳುತ್ತದೆ. ಆ ರಾಕ್ಷಸನನ್ನು ರಾಮನು ಕೊಲ್ಲಲು ಮುಂದಾಗುತ್ತಾನೆ. ಅವನು ಕೊನೆಯುಸಿರೆಳೆಯುವಾಗ ಆ ಮಾರೀಚ ರಾಕ್ಷಸನು ರಾಮನ ಧ್ವನಿಯಲ್ಲಿ ಲಕ್ಷ್ಮಣ ಸೀತೆ ಎಂದು ಕೂಗಿ ಕರೆದು ಅಳುತ್ತಾನೆ. ಆದ್ದರಿಂದ ಸೀತೆಯೂ ಗಾಬರಿಯಾಗಿ ಲಕ್ಷ್ಮಣನಿಗೆ ರಾಮನಿಗೆ ಸಹಾಯ ಮಾಡಲು ಹೇಳಿ ಕಳಿಸುತ್ತಾಳೆ. ಆದರೂ ಲಕ್ಷ್ಮಣನಿಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗಲು ಭಯವಾಗುತ್ತದೆ. ಆದರೂ ತನ್ನ ಅತ್ತಿಗೆಯಾದ ಸೀತೆಯ ಮಾತನ್ನು ಪಾಲಿಸಬೇಕೆಂದು ಹೊರಡುತ್ತಾನೆ.ಹೋಗುವಾಗ ಗುಡಿಸಲಿನ ಸುತ್ತ ಸೀತೆಯ ರಕ್ಷಣೆಗಾಗಿ ಒಂದು ರೇಖೆಯನ್ನು ಬರೆಯುತ್ತಾನೆ. ಈ ರೇಖೆಯೊಳಗೆ ಯಾರೂ ಸಹ ಒಳಗೆ ಪ್ರವೇಶಿಸಲು ಆಗುವುದಿಲ್ಲ. ಯಾರಾದರೂ ಈ ರೇಖೆಯನ್ನು ದಾಟಿ ಒಳಗಡೆ ಹೋಗಲು ಪ್ರಯತ್ನಿಸಿದರೆ ಸುಟ್ಟು ಬೂದಿಯಾಗುತ್ತಾರೆ.ಸೀತೆಗೂ ಸಹ ಈ ರೇಖೆಯನ್ನು ದಾಟಿ ಹೊರಗೆ ಬರದಂತೆ ಹೇಳಿ ಹೊರಡುತ್ತಾನೆ. ರಾಮನು ಬರುವವರೆಗೂ ಸಹ ಈ ರೇಖೆಯನ್ನು ದಾಟಿ ಹೊರಗೆ ಬರದಂತೆ ಹೇಳುತ್ತಾನೆ.

 

 

ಈ ಕಥೆಯ ಭಾಗದ ಸತ್ಯ ಸಂಗತಿ ಏನೆಂದರೆ ವಾಲ್ಮೀಕಿ ರಾಮಾಯಣ ಅಥವಾ ರಾಮಚರಿತಮಾನಸದಲ್ಲಿ ಈ ಕಥೆಯ ಭಾಗ ಎಲ್ಲಿಯೂ ಉಲ್ಲೇಖವಾಗಿಲ್ಲ. ಆದರೆ ಲಂಕಾ ಕಾಂಡದ ರಾಮಚರಿತಮಾನಸದಲ್ಲಿ ಉಲ್ಲೇಖಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top