fbpx
ಭವಿಷ್ಯ

ಮಹಾ ಶಿವರಾತ್ರಿಯ ಹಬ್ಬದ ನಂತರ ಸೂರ್ಯಗ್ರಹಣ ಈ 4 ರಾಶಿಯವರಿಗೆ ಶುಭ ಫಲಗಳು ದೊರೆಯಲಿವೆ.

ಮಹಾ ಶಿವರಾತ್ರಿಯ ಹಬ್ಬದ ನಂತರ ಸೂರ್ಯಗ್ರಹಣ ಈ 4 ರಾಶಿಯವರಿಗೆ ಶುಭ ಫಲಗಳು ದೊರೆಯಲಿವೆ.

ಮಹಾಶಿವರಾತ್ರಿ ಹಬ್ಬ ಬರುತ್ತಿರುವುದು ಇದೇ ತಿಂಗಳ ಹದಿಮೂರನೇ ತಾರೀಖು, ಇದರ ಜೊತೆಗೆ ಮಹಾಶಿವರಾತ್ರಿ ಹಬ್ಬದ ನಂತರವೇ ಅಂದರೆ ಮಾರನೇ ದಿನ ಬೆಳಗ್ಗೆ ಕೃಷ್ಣ ಪಕ್ಷದ, ಮಾಘ ಮಾಸದ, ಚತುರ್ದಶಿ ತಿಥಿಯ ದಿನ ಚತುರ್ದಶಿಯ ರಾತ್ರಿಯ ಸಮಯದಲ್ಲಿ ರಾತ್ರಿಯ ಸಮಯವೂ ಅಂದು ಅಧಿಕವಾಗಿರುವುದರಿಂದ ಅಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಭಗವಂತನಾದ ಶಿವನ ಆರಾಧನೆಯನ್ನು ಎಲ್ಲರೂ ಶ್ರದ್ಧಾ ಭಕ್ತಿಯ ಭಾವನೆಯಿಂದ ಮಾಡುತ್ತಾರೆ.

 

 

ಶಿವಪುರಾಣದಲ್ಲಿ ಹೀಗೆ ಹೇಳಲಾಗಿದೆ….. ಮಹಾಶಿವರಾತ್ರಿಯ ದಿನ ಭಗವಂತನಾದ ಶಿವನನ್ನು ಕೈಲಾಸ ಪರ್ವತದಲ್ಲಿ ಪ್ರಸನ್ನ ಮುದ್ರೆಯಲ್ಲಿ ನಿವಾಸ ಮಾಡುವನು. ಆ ದಿನ ಯಾರು ಶಿವನ ಭಕ್ತರು ಭಗವಂತನಾದ ಶಿವನ ಮುಂದೆ ಅವರ ಆಸೆಯನ್ನು ಹೇಳಿಕೊಳ್ಳುತ್ತಾರೋ ,..ಪ್ರಾರ್ಥನೆ ಮಾಡುತ್ತಾರೋ, ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಅವರ ಎಲ್ಲಾ ಆಸೆಗಳನ್ನು ಭಗವಂತನಾದ ಶಿವನು ಈಡೇರಿಸುತ್ತಾನೆ, ಯಾಕೆಂದರೆ ಶಿವನು ದಯಾಳು, ಕರುಣಾಮಯಿ, ಕೃಪಾಳುವಾಗಿದ್ದು ಭಕ್ತರ ಆಸೆಗಳನ್ನು ಬೇರೆ ಎಲ್ಲ ದೇವರುಗಳಿಗಿಂತ ಬೇಗನೆ ಈಡೇರಿಸುತ್ತಾನೆ ಶಿವನು. ಎಲ್ಲರಿಗೂ ತಿಳಿದಿರುವ ಹಾಗೆ ಯಾವ ದೇವರು ಎಲ್ಲರಿಗಿಂತ ಪ್ರಸನ್ನನಾಗು ತ್ತಾನೆ ಎಂದರೆ ಅದೇ ಶಿವ ದೇವನು.

 

 

ಮಹಾಶಿವರಾತ್ರಿ ಹಬ್ಬವನ್ನು ಕೆಲವು ಪಂಚಾಂಗಗಳಲ್ಲಿ ಹದಿಮೂರನೇ ತಾರೀಖು ,ಇನ್ನೂ ಕೆಲವು ಪಂಚಾಂಗಗಳಲ್ಲಿ ಹದಿನಾಲ್ಕನೇ ತಾರೀಖು ಎಂದು ಹೇಳಿದ್ದಾರೆ, ಯಾಕೆಂದರೆ ಹದಿನಾಲ್ಕನೇ ತಾರೀಖು ಚತುರ್ದಶಿಯ ತಿಥಿ ಇರುವುದರಿಂದ ಆ ದಿನ ರಾತ್ರಿಯ ಸಮಯ ಅಧಿಕವಾಗಿರುವುದರಿಂದ ಹದಿನಾಲ್ಕನೇ ತಾರೀಖು, ಫೆಬ್ರವರಿ ಮಹಾಶಿವರಾತ್ರಿಯನ್ನು ಆಚರಿಸಲು ವಿದ್ವಾಂಸರು ನಿರ್ಧಾರ ಮಾಡಿದ್ದಾರೆ. ನೀವೆಲ್ಲರೂ ಮಹಾಶಿವರಾತ್ರಿಯ ಹಬ್ಬವನ್ನು ಶ್ರದ್ಧೆ ,ಭಕ್ತಿಯಿಂದ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಆಸೆಗಳನ್ನು ಭಗವಂತನಾದ ಶಿವನು ಪೂರ್ಣಗೊಳಿಸುವನು.

 

 

ಹಬ್ಬದ ನಂತರ ಸೂರ್ಯ ಗ್ರಹಣ.

ಇದೇ ಸಮಯದಲ್ಲಿ 15 ನೇ ತಾರೀಖು ಮತ್ತು 16 ನೇ ತಾರೀಖು ಮಧ್ಯ ರಾತ್ರಿಯ ಸಮಯದಲ್ಲಿ ಸೂರ್ಯ ಗ್ರಹಣವು ಸಂಭವಿಸಲಿದೆ. ಸೂರ್ಯಗ್ರಹಣ , ಚಂದ್ರಗ್ರಹಣ ಸಂಭವಿಸಿದಾಗ ಪ್ರಕೃತಿಯಲ್ಲಿ ವಾಸಿಸುವ ಜೀವಿಗಳ ಮೇಲೆ ವ್ಯಾಪಕವಾದ ಪ್ರಭಾವ ಬೀರುವುದು. ಗ್ರಹಣವಾಗುವುದರಿಂದ ಕೆಲವು ರಾಶಿಗಳ ಮೇಲೆ ವಿಶೇಷವಾಗಿ ಪ್ರಭಾವ ಬೀರಲಿದೆ. ಗ್ರಹಣ ಎಲ್ಲಿ ಸಂಭವಿಸಿದರೂ ಕೂಡಾ ಆದರ ಪ್ರಭಾವ ಪೃಥ್ವಿ ವಾಸಿಗಳ ಮೇಲೆ ಬೀರಲಿದೆ.
ಗ್ರಹಣ ಎಲ್ಲಿ ಸಂಭವಿಸುತ್ತದೆ ? ಎಲ್ಲಿ ಕಾಣುತ್ತದೆ ? ಎಲ್ಲಿ ಕಾಣುವುದಿಲ್ಲ ? ಇದು ಬೇರೆ ವಿಷಯ ,ಆದರೆ ವೈದಿಕ ಜ್ಯೋತಿಷ್ಯದ ಪ್ರಕಾರ.

 

ಸೂರ್ಯಗ್ರಹಣ ಈ ಬಾರಿ ಶತಭಿಷಾ ನಕ್ಷತ್ರ, ಕುಂಭ ರಾಶಿಯಲ್ಲಿ ಸಂಭವಿಸುತ್ತಿದೆ. ಶತಭಿಷ ನಕ್ಷತ್ರ ರಾಹುವಿನ ನಕ್ಷತ್ರವಾಗಿದ್ದು, ಈ ನಕ್ಷತ್ರಕ್ಕೆ ಸಂಬಂಧಪಟ್ಟವರಿಗೆ ಈ ಗ್ರಹಣ ಸ್ವಲ್ಪ ತೊಂದರೆಯನ್ನು ತಂದೊಡ್ಡಲಿದೆ .ಅಲ್ಲದೆ ಪ್ರತಿಯೊಂದು ರಾಶಿಯ ಮೇಲೂ ಗ್ರಹಣದ ಪ್ರಭಾವ ಭಿನ್ನ ಭಿನ್ನವಾಗಿ ಬೀರಲಿದೆ.

 

 

ಈ ಗ್ರಹಣ ಆಕಾಶ ಮಂಡಲದಲ್ಲಿ , ಬ್ರಹ್ಮಾಂಡದಲ್ಲಿ ಉಂಟಾಗುವುದು. ಇದರ ವ್ಯಾಪಕವಾದ ಪ್ರಭಾವ ಪೃಥ್ವಿ ವಾಸಿಗಳ ಮೇಲೆ ಆಗುವುದು. ಇದರ ವಿಶೇಷ ಪ್ರಭಾವ ಪಶ್ಚಿಮ ದೇಶಗಳ ಮೇಲೆ ಆಗುವುದು.ಅಲ್ಲಿನ ಜನರು ಈ ಸೂರ್ಯ ಗ್ರಹಣವನ್ನು ನಾವು ನೋಡಬಹುದಾಗಿದೆ.ಆದರೆ ಭಾರತೀಯ ಕಾಲಮಾನದ ಪ್ರಕಾರ ಇಲ್ಲಿ ಮಧ್ಯರಾತ್ರಿ ಸಮಯವಾಗಿರುವುದರಿಂದ ಇಲ್ಲಿ ನೋಡಲು ಗೋಚರಿಸುವುದಿಲ್ಲ. ಪಶ್ಚಿಮ ದೇಶಗಳಲ್ಲಿ ಅನೇಕ ವಿವಿಧ ರೀತಿಯ ರಾಜನೀತಿಯ ವಿಷಯಗಳಲ್ಲಿ ಉಲ್ಟ ಆಗುವುದನ್ನು ಕಾಣಬಹುದಾಗಿದೆ.

 

ಒಂದೇ ಮಾಸದಲ್ಲಿ ಎರಡೆರಡು ಗ್ರಹಣ ಸಂಭವಿಸುವುದರಿಂದ ಇದು ತುಂಬಾ ಕೆಟ್ಟ ಸಂಕೇತವಾಗಿದ್ದು, ಅನೇಕ ರೀತಿಯ ದುರ್ಘಟನೆಗಳು ಸಂಭವಿಸುತ್ತವೆ .ಪ್ರಾಕೃತಿಕ ವಿಪತ್ತುಗಳು, ಪೃಥ್ವಿ ಮಂಡಲದಲ್ಲಿ ಆಗುವ ಸಂಕೇತವನ್ನು, ಈ ಗ್ರಹಣಗಳು ನೀಡುತ್ತವೆ. ಈ ಗ್ರಹಣ ವಿಶೇಷ ರೂಪವಾಗಿ ನಾಲ್ಕು ರಾಶಿಯವರಿಗೆ ಅದೃಷ್ಟ ಮತ್ತು ಸೌಭಾಗ್ಯವನ್ನು ತಂದುಕೊಡಲಿದೆ.

 

ಹದಿನೈದು ಮತ್ತು ಹದಿನಾರನೇ ತಾರೀಖು ಮಧ್ಯ ರಾತ್ರಿಯಲ್ಲಿ ಅಂದರೆ ರಾತ್ರಿ 1 ಗಂಟೆ 21 ನಿಮಿಷಗಳಿಂದ ಬೆಳಗಿನ ಜಾವ 4 ಗಂಟೆ 17 ನಿಮಿಷಗಳವರೆಗೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯ ಗ್ರಹಣ ಬ್ರಹ್ಮಾಂಡದಲ್ಲಿ ಘಟಿತವಾಗುವುದರಿಂದ, ಈ ಗ್ರಹಣದ ನಂತರ ಈ ನಾಲ್ಕು ರಾಶಿಯವರ ಎಲ್ಲ ಆಸೆಗಳು ಪೂರ್ಣಗೊಳ್ಳುತ್ತವೆ.

 

 

ಯಾಕೆಂದರೆ ಒಂದು ದಿನ ಮುಂಚೆ ಭಗವಂತನಾದ ಶಿವನ ಹಬ್ಬವಿದೆ, ಮಹಾಶಿವರಾತ್ರಿಯ ನಂತರದ ದಿನ ಈ ಸೂರ್ಯ ಗ್ರಹಣದ ಸ್ಥಿತಿ ಉಂಟಾಗಲಿದೆ. ಈ ಕಾರಣ ಈ ನಾಲ್ಕು ರಾಶಿಯವರಿಗೆ ದೊಡ್ಡ ಸೌಭಾಗ್ಯವನ್ನು ಉಂಟು ಮಾಡಲಿದೆ. ಈ ನಾಲ್ಕು ರಾಶಿಯವರು ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತವೆ. ಎಲ್ಲಾ ಆಸೆಗಳು ಈ ಗ್ರಹಣದ ಕಾರಣದಿಂದ ಪೂರ್ಣವಾಗುತ್ತವೆ. ಆ ರಾಶಿಗಳು ಯಾವುವೆಂದರೆ ಮೇಷ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ. ಇದರ ಜೊತೆಗೆ ಹನ್ನೆರಡು ರಾಶಿಗಳ ಮೇಲೂ ಸಹ ವಿವಿಧ ರೀತಿಯಲ್ಲಿ ಪ್ರಭಾವ ಬೀರುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top