ದೇವರು

ಮನುಷ್ಯನ ಪಾಪ ಪುಣ್ಯಗಳ ಲೆಕ್ಕ ಪಕ್ಕ ಬರೆಯೋ ಚಿತ್ರಗುಪ್ತನ ಜನ್ಮ ರಹಸ್ಯ ಕೇಳಿ ಆಶ್ಚರ್ಯ ಪಡ್ತಿರಾ , ಕಂಕಣ ಭಾಗ್ಯಕ್ಕಾಗಿ ಯಾವ ರೀತಿ ಪೂಜೆ ಮಾಡ್ಬೇಕು ಅದು ತಿಳ್ಕೊಳ್ಳಿ

ಚಿತ್ರಗುಪ್ತನ ಹಿಂದೆ ಇರುವ ಜನ್ಮ ರಹಸ್ಯ :

 

ಚಿತ್ರಗುಪ್ತನ ಜನ್ಮ ರಹಸ್ಯ ಮತ್ತು ಅವನ ಹೆಸರಿನಲ್ಲಿ ಇರುವಂತ ದೇವಾಲಯದ ಬಗ್ಗೆ ನಿಮಗೆ ಎಷ್ಟು ಗೊತ್ತು ?ಬನ್ನಿ ಅದರ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತಿರಿ :

ನಮಗೆ ಗೊತ್ತಿರುವಂತೆ ಚಿತ್ರಗುಪ್ತ ಯಮನ ಬಳಿ ಪಾಪ ಪುಣ್ಯದ ಬಗ್ಗೆ ಬರೆಯುವವ ಎಂದು , ಆದರೆ ಚಿತ್ರಗುಪ್ತ ಅಂದ್ರೆ ಯಾರು ಅವರು ಯಾಕೆ ಪಾಪ ಪುಣ್ಯದ ಬಗ್ಗೆ ಬರೆಯುವರು ಎಂದು ಗೊತ್ತಾ ?

 

 

ಚಿತ್ರಗುಪ್ತನಿಗೆ ದೇವರುಗಳ ತರಹ ದೇವಾಲಯಗಳನ್ನು ಯಾಕೆ ನಿರ್ಮಿಸಿದ್ದಾರೆ ?ಅದರ ಸಂಪೂರ್ಣ ವಿವರ ತಿಳಿಯೋಣ

 

 

ತಮಿಳುನಾಡಿನ ಕಾಂಚಿಪುರಂ ನಲ್ಲಿ ಚಿತ್ರಗುಪ್ತನಿಗೆ ಒಂದು ದೇವಾಲಯವಿದೇ ,ಮಾನವರ ಪಾಪ ಪುಣ್ಯಗಳ ಬಗ್ಗೆ ಚಿತ್ರಗುಪ್ತನಿಗೆ ಇರುವ ಬುದ್ದಿವಂತಿಕೆ ಬೇರೆ ಯಾರಿಗೂ ಬರುವುದಿಲ್ಲ ಯಾಕೆ ಎಂದರೆ ಮಾನವರು ಹೊರಗೆ ಮಾಡುವಂತ ಪಾಪ ಪುಣ್ಯಗಳನ್ನಲ್ಲದೆ ಅವರ ಮನಸಿನಲ್ಲಿ ಮಾಡುವಂತ ಪಾಪ ಪುಣ್ಯಗಳ ಲೆಕ್ಕ ಹಾಕುವ ಜಾಣ್ಮೆ ಇರುವುದು ಚಿತ್ರಗುಪ್ತನಿಗೆ ಮಾತ್ರ .

 

 

 

ನಾವು ಕಾಂಚಿಪುರಂನಲ್ಲಿ ಇರುವ ಚಿತ್ರಗುಪ್ತನ ದೇವಾಲಯ ಪ್ರವೇಶ ಮಾಡಿದರೆ ನಮಗೆ ಮೊದಲು ಕಂಡುಬರುವುದು ಒಂದು ಕೈಯಲ್ಲಿ ಪುಸ್ತಕ ಇನ್ನೊಂದು ಕೈಯಲ್ಲಿ ಲೇಖನ ಹಿಡಿದಿರುವಂತ ಚಿತ್ರಗುಪ್ತನ ವಿಗ್ರಹ ,ಆ ವಿಗ್ರಹ ನೋಡಿದರೆ ನಮಗೆ ಯಾವತ್ತು ಯಾವುದೇ ಪಾಪ ಮಾಡದೇ ಧರ್ಮ ಮಾರ್ಗದಲ್ಲಿ ನಡೆದುಕೊಳ್ಳಬೇಕು ಎನಿಸುತ್ತದೆ.

 

ಸ್ಥಳ ಪುರಾಣ :

 

ಇಲ್ಲಿನ ಸ್ಥಳ ಪುರಾಣಕ್ಕೆ ಬಂದರೆ ಒಂದು ಸಲ ಯಮ ಬ್ರಹ್ಮದೇವನ ಹತ್ತಿರ ಹೋಗಿ ಪಾಪಿಗಳಿಗೆ ಶಿಕ್ಷೆ ಕೊಡುವುದಕ್ಕೆ ತನ್ನಗೆ ಸಹಾಯ ಮಾಡುವಂತ ಒಬ್ಬ ಸಮರ್ಥ ಗಣಿಕನನ್ನು ಪ್ರಸಾದಿಸುವಂತೆ ಕೋರುತ್ತಾನೆ .ಇದನ್ನು ಕೇಳಿದ ಬ್ರಹ್ಮದೇವ ಏನು ಮಾಡುವುದು ಎಂದು ಯೋಚನೆ ಮಾಡುವಾಗ ಯಮನ ತಂದೆಯಾದ ಸೂರ್ಯದೇವ ಈ ಸಮಸ್ಯೆಗೆ ಪರಿಹಾರ ನೀಡಬಲ್ಲ ಎಂದು ಅನಿಸುತ್ತದೆ .

 

 

ಪ್ರಪಂಚಕ್ಕೆ ಬೆಳಕನ್ನು ನೀಡುವ ಸೂರ್ಯದೇವ ಒಂದು ದಿನ ಆಕಾಶ ಮಾರ್ಗದಲ್ಲಿ ತನ್ನ ಏಕಚಕ್ರ ರಥದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬ್ರಹ್ಮ ದೇವನ ಸಂಕಲ್ಪದಿಂದ ಮಾರ್ತಾಂಡನ ಮನಸಿನಲ್ಲಿ ಮದನ ಪ್ರವೇಶ ಮಾಡುತ್ತಾನೆ ಆ ಸಂದರ್ಭದಲ್ಲಿ ಸೂರ್ಯ ಕಿರಣ ಸಮುದ್ರದ ಮೇಲೆ ಬಿದ್ದು 7 ಬಣ್ಣಗಳಿಂದ ಕೂಡಿದ ಇಂದ್ರ ಧನುಸು ಉದ್ಭವವಾಯಿತು ಅದನ್ನು ನೋಡಿದ ಭಾನು ಇಂದ್ರ ಧನುಸುವಿನಂತ ಒಂದು ಸೌಂದರ್ಯವತಿ ಸ್ತ್ರೀ ರೂಪದಲ್ಲಿ ಬಂದರೆ ಎಷ್ಟು ಚೆನ್ನಾಗಿ ಇರುತ್ತದೆ ಎಂದು ಮನಸಿನಲ್ಲಿ ಅಂದುಕೊಳ್ಳುವಾಗ ,ಬ್ರಹ್ಮ ಸಂಕಲ್ಪದಿಂದ ಆ ಇಂದ್ರ ಧನಸು ಸೌಂದರ್ಯವತಿ ಸ್ತ್ರೀ ರೂಪಕ್ಕೆ ಪರಿವರ್ತಿತವಾಗುತ್ತದೆ .

 

 

ಆಗ ಬ್ರಹ್ಮದೇವನ ಅನುಮತಿ ಪಡೆದು ಸೂರ್ಯದೇವ ಆ ಸ್ತ್ರೀಗೆ ನೀಲದೇವಿ ಎಂದು ನಾಮಕರಣ ಮಾಡಿ ಹೆಂಡತಿ ಎಂದು ಸ್ವೀಕರಿಸುತ್ತಾನೆ .
ಸೂರ್ಯದೇವ ಮತ್ತು ನೀಲದೇವಿಗೆ ಒಂದು ಚೈತ್ರ ಪೂರ್ಣಿಮೆಯ ದಿನ ಒಂದು ಗಂಡು ಮಗು ಹುಟ್ಟುತ್ತದೆ ,ಹುಟ್ಟುತ್ತಾ ಅವನ ರೇಖೆಗಳಲ್ಲಿ ಒಂದು ಕೈಯಲ್ಲಿ ಪುಸ್ತಕ ,ಇನ್ನೊಂದು ಕೈಯಲ್ಲಿ ಲೇಖನ ಕಾಣಿಸಿತಂತೆ ಅದರಿಂದ ಆ ಮಗುವಿಗೆ ಚಿತ್ರ ಪುತ್ರ ಎಂದು ನಾಮಕರಣ ಮಾಡಿದರಂತೆ ,ಮುಂದೆ ಚಿತ್ರಗುಪ್ತ ಎಂದು ಪ್ರಸಿದ್ಧವಾದರು.

 

 

ಮದುವೆ ವಯಸ್ಸಿಗೆ ಬಂದಮೇಲೆ ಚಿತ್ರ ಗುಪ್ತನಿಗೆ 3 ಹುಡುಗಿಯರ(ಪ್ರಭಾವತಿ ,ನೀಲಾವತಿ ಮತ್ತು ಕನಿಕ ದೇವಿ ) ಜೊತೆ ಮದುವೆ ಯಾಗುತ್ತದೆ .

1910 ಕಂಚಿಯ ದೇವಾಯದ ಬಳಿ ಈ ವಿಗ್ರಹ ದೊರಕಿತು,ಪಂಚಲೋಹದ ಕನಿಕ ದೇವಿ ವಿಗ್ರಹ ಮತ್ತು ಚಿತ್ರಗುಪ್ತನ ಉತ್ಸಾಹ ಮೂರ್ತಿ ಕಂಚಿಯ ದೇವಾಲಯದಲ್ಲಿ ದರ್ಶನ ನೀಡುತ್ತಿದೆ . ಚೈತ್ರ ಪೂರ್ಣಿಮೆ ಯಿಂದ 5 ಪೂರ್ಣಿಮೆ ಚಿತ್ರಗುಪ್ತನಿಗೆ ಅರ್ಚನೆ ಮಾಡಿಸಿದರೆ ಬೇಗ ಕಂಕಣ ಭಾಗ್ಯ ಕೂಡಿಬರುತ್ತದೆ ಎಂದು ಇಲ್ಲಿನ ಜನರ ನಂಬಿಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top