ವಿಶೇಷ

ಊರವರೆಲ್ಲರ ಕಾಮತೃಷೆ ತೀರಿಸುವ ದೇವದಾಸಿಯ ಕಥೆಯಲ್ಲ ವ್ಯಥೆ

ದೇವರ ಹೆಸರು ಹೇಳಿಕೊಂಡು ತಮ್ಮ ಕಾಮ ತೃಷೆ ತೀರಿಸಿಕೊಳ್ಳುತ್ತಿರುವ ದೊಡ್ಡ ಮನುಷ್ಯರು

 

ಇನ್ನಷ್ಟು ದೇವದಾಸಿ ಪದ್ಧತಿ ಬಹಳ ವರ್ಷಗಳಿಂದ ಇದ್ದು ದೇವರ ಹೆಸರಲ್ಲಿ ಕೆಲವು ಧರ್ಮಭ್ರಷ್ಟರು ಪರಿಶಿಷ್ಟ ಜಾತಿ ಕುಲಗಳ ಹೆಣ್ಣು ಮಕ್ಕಳನ್ನು ದೇವದಾಸಿಯಾಗಿ ಮಾಡುತ್ತಾರೆ

 

 

ಇವರನ್ನು ದೇವದಾಸಿ, ಊರ ಬಸವಿ ಹಾಗೂ ಜೋಗಿಣಿ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯುತ್ತಾರೆ ಆಚಾರದ ಪ್ರಕಾರ ಒಮ್ಮೆ ದೇವದಾಸಿಯಾದ ಹೆಣ್ಣುಮಗಳನ್ನು ಊರಿನ ಎಲ್ಲಾ ಮುಖಂಡರು ಪುರೋಹಿತರು ಎಲ್ಲರೂ ಅನುಭವಿಸಬಹುದು.

ಒಮ್ಮೆ ಈ ಮೇಲ್ ಪಂಥೀಯ ಗಂಡಸರೆಲ್ಲ ಆಕೆಯನ್ನು ಅನುಭವಿಸಿದ ಮೇಲೆ ಊರಿನ ಇತರ ಗಂಡಸರು ಸಹ ಆಕೆಯನ್ನು ಅನುಭವಿಸಬಹುದು ಆಕೆ ದೇವರ ಹೆಂಡತಿ ದೇವರ ಹೆಂಡತಿಯ ಮೇಲೆ ಎಲ್ಲರಿಗೂ ಸಮಾನ ಪಾಲಿದೆ ಎಂಬುದು ಅನೇಕ ಮೂಢರು ಕಟ್ಟಿರುವ ನಂಬಿಕೆ ಹೀಗೆ ಒಮ್ಮೆ ಒಬ್ಬ ಹೆಣ್ಣುಮಗಳು ದೇವದಾಸಿಯಾದ ಮೇಲೆ ಆಕೆ ಭಿಕ್ಷೆ ಬೇಡಿ ಬದುಕಬೇಕು ಇಲ್ಲವಾದರೆ ಊರಿನ ಮುಖಂಡರೆಲ್ಲ ಸೇರಿ ಇಂತಿಷ್ಟು ದುಡ್ಡು ಎಂದು ಆಕೆಗೆ ತಿಂಗಳಿಗೆ ಕೊಡುತ್ತಾರೆ

ಊರಿನಲ್ಲಿರುವ ಒಬ್ಬ ವ್ಯಕ್ತಿ ತನಗೆ ದೇವರು ಬಂದಿದೆ ಮೈಮೇಲೆ ಎಂದು ನಾಟಕ ಆಡುತ್ತಾನೆ ಹೀಗೆ ನಾಟಕ ಆಡಿದ ಮೇಲೆ ಒಬ್ಬ ಪರಿಶಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ ಹೆಣ್ಣು ಮಗಳನ್ನು ದೇವದಾಸಿ ಮಾಡಬೇಕು ಇಲ್ಲ ಎಂದರೆ ಈ ಊರಿಗೆ ಬರಗಾಲ ಬರುತ್ತದೆ ಅವರ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ನಾಶವಾಗುತ್ತಾರೆ ಈ ರೀತಿ ಅನೇಕ ಸುಳ್ಳುಗಳನ್ನು ಹೇಳುತ್ತಾನೆ.

 

 

ಕೆಲವು ಕಡೆ ಇರುವ ಸಂಪ್ರದಾಯದಂತೆ ಹೆಣ್ಣು ಮಗುವನ್ನು ಸಂಪೂರ್ಣವಾಗಿ ಬೆತ್ತಲು ಮಾಡಿ ಕೇವಲ ಕೇವಲ ಎದೆಯ ಭಾಗ ಹಾಗೂ ಸೊಂಟದ ಕೆಳಗಿನ ಭಾಗಕ್ಕೆ ಮಾತ್ರ ಬೇವಿನ ಸೊಪ್ಪಿನಿಂದ ಕಟ್ಟುತ್ತಾರೆ ಹಾಗೂ ಮೈಮೇಲೆಲ್ಲಾ ಅರಿಶಿನವನ್ನು ಬಳಿಯುತ್ತಾರೆ ಆಕೆಯ ತಲೆಯ ಮೇಲೆ ಆರತಿಯನ್ನು ಹೊರಿಸಿ ಊರಿನಲ್ಲೆಲ್ಲ ಮೆರವಣಿಗೆ ಮಾಡುತ್ತಾರೆ ದೇವರಿಗೆ ಪೂಜೆ ಮಾಡಿಸಿ ನಾಲ್ಕು ಕೊಡಗಳನ್ನು ದೇವರ ಮನೆಯೊಳಗೆ ಇರಿಸುತ್ತಾರೆ, ಊರಿನ ಮುಖಂಡ ಅಥವಾ ದೇವಸ್ಥಾನದ ಹಿರಿಯ ತಾಳಿ ಕಟ್ಟುತ್ತಾನೆ ಈ ರೀತಿ ಮಾಡಿದರೆ ಸಾಕು ಆಕೆ ದೇವದಾಸಿಯಾಗಿ ಬಿಡುತ್ತಾಳೆ ಇನ್ನೂ ಆಕೆ ಊರಿನವರೆಲ್ಲರ ಸೊತ್ತು

ಇನ್ನು ಕೆಲವು ಕಡೆ ಹೆಣ್ಣುಮಕ್ಕಳಿಗೆ ಬೆಲೆಬಾಳುವ ಗೆಜ್ಜೆಯನ್ನು ಕಾಲಿಗೆ ಹಾಕುತ್ತಾರೆ ಇದಕ್ಕೆ ಮುತ್ತು ಕಟ್ಟುವುದು ಎನ್ನುತ್ತಾರೆ .

 

 

 

ಈ ರೀತಿಯ ಅನಿಷ್ಟ ಪತಿ ಭಾರತ ದೇಶದಲ್ಲಿ ಮಾತ್ರವೇ ಅಲ್ಲ ಬ್ಯಾಬಿಲೋನಿಯ ನಾಗರಿಕತೆಯಲ್ಲೂ ಈ ಅನಿಷ್ಟ ಪದ್ಧತಿಯನ್ನು ನಾವು ಕಾಣಬಹುದು ಸೆಂಟ್ರಲ್ ಅಮೆರಿಕ ವೆಸ್ಟ್ ಆಫ್ರಿಕಾ ,ಬ್ಯಾಬಿಲೋನಿಯ, ಸಿರಿಯಾ, ಲಿಬಿಯಾ , ಅರೇಬಿಯಾ , ಗ್ರೀಕ್ ಪ್ರಾಂತ್ಯಗಳಲ್ಲೂ ಇದ್ದವು .

ಪೈಪೋಟಿಗೆ ಬೀಳುತ್ತಿದ್ದ ಊರಿನ ಮುಖಂಡರಲ್ಲಿ ಯಾರೂ ಹೆಚ್ಚು ಹಣವಂತ ಹಾಗೂ ಶಕ್ತಿವಂತ ಅವನಿಗೆ ಆ ದೇವದಾಸಿ ಮೊದಲು ಸಲ್ಲಬೇಕಿತ್ತು ಅವನಿಗೆ ಬೇಕೆನಿಸಿದ್ದು ದಿನ ಜೊತೆ ಜೊತೆಯಲ್ಲಿದ್ದು ಆ ನಂತರ ಆತ ಮತ್ತೆ ದೇವಸ್ಥಾನಕ್ಕೆ ಆಕೆಯನ್ನು ತಂದು ಬಿಡುತ್ತಿದ್ದ, ೨.೫ ಲಕ್ಷ ಜನರು ದಕ್ಷಿಣ ಭಾರತದಲ್ಲಿ ಈ ದೇವದಾಸಿ ಪದ್ಧತಿಯಿಂದ ಈಗಲೂ ನಲುಗುತ್ತಿದ್ದಾರೆ.

 

ಹೀಗೆ ದಿನದಿಂದ ದಿನಕ್ಕೆ ವ್ಯಭಿಚಾರಿಣಿಯಾಗಿ ಮಾರ್ಪಾಡಾಗುತ್ತಿರುವ ದೇವದಾಸಿಯರು ಅಥವಾ ಊರ ದೇವಿಯರು ಮೊದಲಿಂದಲೂ ಹೀಗೆ ಇದ್ದರೆ ?

 

 

ಇಲ್ಲ ಆಗಮ ಶಾಸ್ತ್ರದ ಪ್ರಕಾರ ದೇವರಿಗೆ ಪ್ರಿಯವಾದ ಎರಡು ವಿಷಯಗಳೆಂದರೆ ನೃತ್ಯ ಹಾಗೂ ಸಂಗೀತ ಹಿಂದಿನ ಕಾಲದಲ್ಲಿ ದೇವದಾಸಿ ಎಂದರೆ ದೇವರ ಪೂಜೆಯನ್ನು ಮಾಡುವವರು ದೇವರ ಮುಂದೆ ನೃತ್ಯ ಹಾಗೂ ಸಂಗೀತ ಹೇಳುವವರಿದ್ದರೂ ಆದರೆ ಕಾಲಕ್ರಮೇಣವಾಗಿ ದೇವದಾಸಿಯರನ್ನು ವ್ಯಭಿಚಾರಿಣಿಯಾಗಿ ಈ ಸಮಾಜ ಮಾರ್ಪಾಡು ಮಾಡಿತ್ತು.

 

ದೇವದಾಸಿ ಯಾಕಾದರೂ ?

 

ಈ ರೀತಿಯ ವ್ಯವಸ್ಥೆಯನ್ನು ನಾವು ಕಾಳಿದಾಸನ ಮೇಘದೂತ ಕಾವ್ಯಗಳಲ್ಲಿ ಕಾಣಬಹುದು , ದೇವದಾಸಿಯಾಗಿ ಹುಡುಗಿಯರಲ್ಲಿ ಹಾಗೂ ಅವರ ಕುಟುಂಬಗಳಲ್ಲಿ ಈ ಮೂರು ವಿಷಯಗಳನ್ನು ನಾವು ಗಮನಿಸಬಹುದು.

 

 

ತೀರಾ ಬಡತನದಿಂದ ನೀಡಿರುವ ಕುಟುಂಬದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಮುಂದೆ ಅವರ ವಿದ್ಯಾಭ್ಯಾಸ ಹಾಗೂ ಮದುವೆಗೆ ಬಹಳ ಖರ್ಚಾಗುತ್ತದೆ ಈ ರೀತಿ ದೇವದಾಸಿ ಮಾಡಿಬಿಟ್ಟರೆ ಆಕೆಯ ಖರ್ಚು ಉಳಿಯುತ್ತದೆ ಎನ್ನುವ ಆಲೋಚನೆ ಅನೇಕ ಜನರಲ್ಲಿ ಇತ್ತು

ಇನ್ನು ಬಡತನದಲ್ಲಿರುವ ಕುಟುಂಬಕ್ಕೆ ಆ ಊರಿನ ಮುಖಂಡರು ಹಣ ಕೊಟ್ಟು ಅವರ ಮಗಳನ್ನು ದೇವದಾಸಿ ಮಾಡಿಬಿಡುತ್ತಿದ್ದರು

ಹಿಂದಿನ ಕಾಲದಲ್ಲಿ ಹೆಚ್ಚು ದೇವದಾಸಿಯರು ದೇವಸ್ಥಾನದಲ್ಲಿ ಇದ್ದರೆ ಆ ದೇವಸ್ಥಾನ ಬಹಳ ಪ್ರಖ್ಯಾತಿ ಹೊಂದುತ್ತದೆ ಎಂಬ ನಿಯಮವನ್ನು ಹಾಕಿಕೊಂಡಿದ್ದರು

ದೇವಸ್ಥಾನಗಳಲ್ಲಿ ಹಾಡು ಹಸೆ ಮಾಡಿಕೊಂಡಿದ್ದ ದೇವದಾಸಿಯರು ಮುಂದೆ ರಾಜನ ಆಸ್ಥಾನದಲ್ಲಿ ರಾಜನ ಮುಂದೆ ನೃತ್ಯ ಮಾಡುತ್ತಿದ್ದರು ಆ ನಂತರದಲ್ಲಿ ಹಿಂದುಳಿದ ವರ್ಗ ಹಾಗೂ ಹಿಂದುಳಿದ ಜಾತಿಗಳಿಂದ ಹೆಣ್ಣುಮಕ್ಕಳನ್ನು ಆಯ್ತು ದೇವದಾಸಿಯಾಗಿ ಮಾಡುತ್ತಿದ್ದರು ಆ ನಂತರ ವಿದೇಶಿಯರ ಆಕ್ರಮಣ ಭಾರತದ ಮೇಲಾದಾಗ ವಿದೇಶಿಯರು ಸಹ ದೇವದಾಸಿಯರನ್ನು ತಮ್ಮ ಅನುಕೂಲಕ್ಕೆ ಬಳಸಲು ಶುರು ಮಾಡಿದರು.

 

 

೧೯೮೮ ರ ವರೆಗು ಈ ಅನಿಷ್ಟ ಪದ್ಧತಿ ಕಾನೂನಾತ್ಮಕ ವಾಗಿತ್ತು ಆ ನಂತರ ಅನೇಕ ಸಂಘ ಸಂಸ್ಥೆಗಳು ಹೋರಾಟ ನಡೆಸಿ ಸರ್ಕಾರದ ಕಣ್ಣು ತೆರೆಸಿದವು ಇದಾದ ಮೇಲೆ ದೇವದಾಸಿಯರಿಗೆ ಮದುವೆ ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಉದ್ಯೋಗವನ್ನು ಕೊಡುವ ಹಾಗೂ ಹಣಕಾಸಿನ ಸಹಾಯವನ್ನು ಮಾಡುವ ಮಹಿಳಾ ಸಬಲೀಕರಣಕ್ಕೆ ಸಹಾಯ ಮಾಡುವ ವ್ಯವಸ್ಥೆಗಳನ್ನು ಸರ್ಕಾರ ಮಾಡಿದವು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top