fbpx
ಮನೋರಂಜನೆ

ಲವ್‌ನಲ್ಲಿ ಬಿದ್ಲು ‘ವಿಲನ್‌’ ಚೆಲುವೆ: ಬಹು ಕೋಟ್ಯಾಧಿಪತಿ ಶ್ರೀಮಂತನ ಜೊತೆ ಆ್ಯಮಿ ಜಾಕ್ಸನ್ ಲವ್ವಿ ಡವ್ವಿ.

ಬಹು ಕೋಟ್ಯಾಧಿಪತಿ ಶ್ರೀಮಂತನ ಜೊತೆ ಆ್ಯಮಿ ಜಾಕ್ಸನ್ ಲವ್ವಿ ಡವ್ವಿ…

 

 

ಕನ್ನಡದ ಬಹು ನಿರೀಕ್ಷಿತ ದಿ ವಿಲನ್ ಚಿತ್ರದಲ್ಲಿ ಸುದೀಪ್’ಗೆ ನಾಯಕಿಯಾಗಿರುವ ಬ್ರಿಟನ್ ಚೆಲುವೆ ಆ್ಯಮಿ ಜಾಕ್ಸನ್ ವಯಕ್ತಿಕ ಜೀವನದಲ್ಲಿ ಎಂಗೇಜ್ ಆಗಿದ್ದಾಳೆ. ತನ್ನ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚಿಗೆ ಹಾಕಿರುವ ಫೋಟೋ ಎಲ್ಲರ ಹುಬ್ಬೇರಿಸುವಂತಿದ್ದು ಬ್ರಿಟನ್ ಮೂಲದ ಹುಡುಗನ ಜೊತೆ ಡೇಟಿಂಗ್‌ನಲ್ಲಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

 

 

 

ನಾಯಿಯೊಡನೆ ಆಡುತ್ತಿರುವ ಬ್ರಿಟಿಷ್ ಉದ್ಯಮಿ ಜಾರ್ಜ್ ಪಾನಾಯ್ಟೊವ್ ಅವರ ಫೋಟೋವನ್ನು ಆ್ಯಮಿ ಜಾಕ್ಸನ್ ಪೋಸ್ಟ್ ಮಾಡಿದ್ದಾಳೆ. ಮೂಲಗಳ ಪ್ರಕಾರ ಜಾರ್ಜ್ ಪಾನಾಯ್ಟೊವ್ ಹಾಗೂ ನಟಿ ಆ್ಯಮಿ ಜಾಕ್ಸನ್ ಪರಸ್ಪರ ಪ್ರೀತಿಸುತ್ತಿದ್ದಾರಂತೆ.. 2015 ರಲ್ಲಿ ಭೇಟಿಯಾಗಿದ್ದ ಇವರಿಬ್ಬರಲ್ಲಿ ಪರಿಚಯ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯ ಅಂಕುರವಾಗಿದೆಯಂತೆ.

 

 

 

ಕಳೆದ ಕೆಲವು ತಿಂಗಳಿನಲ್ಲಿ ಮ್ಯಾಕ್ಸಿಕೋ ನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುತ್ತಾಡಿದೆ ಈ ಜೋಡಿ. ಅಷ್ಟೇ ಅಲ್ಲದೇ ಪ್ರೇಮಿಗಳ ದಿನವನ್ನು ಕೂಡ ಅದ್ದೂರಿಯಾಗಿಯೇ ಜಾರ್ಜ್ ಪಾನಾಯ್ಟೊವ್ ಹಾಗೂ ನಟಿ ಆ್ಯಮಿ ಜಾಕ್ಸನ್ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹರಿಬಿಟ್ಟಿದ್ದಾರೆ.

ಆ್ಯಮಿ ಜಾಕ್ಸನ್ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿರುವ ಜಾರ್ಜ್ ಪಾನಾಯ್ಟೊವ್ ಬಹು ಕೋಟ್ಯಧಿಪತಿಯಾಗಿದ್ದು ಸಾಕಷ್ಟು ಸ್ಟಾರ್ ಹೋಟೆಲ್‌ಗಳನ್ನು ಹೊಂದಿದ್ದಾರಂತೆ. ಇನ್ನು ಇವರ ತಂದೆ ರಿಯಲ್ ಎಸ್ಟೇಟ್‌ ಉದ್ಯಮಿಯಾಗಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top