ಆರೋಗ್ಯ

ಒರಟು ಕೂದಲು ಸಾಫ್ಟ್ ಶೈನ್ ಆಗಲು ಈ  ಟಿಪ್ಸ್ ಟ್ರೈ ಮಾಡಿ

ಕೂದಲಿನ ಬೆಳವಣಿಗೆ, ಹೇರ್‌ ಫಾಲ್‌, ಡ್ಯಾಂಡ್ರಫ್‌ ಸಮಸ್ಯೆ ದೂರ ಮಾಡಲು ನಾವು ಹಲವಾರು ವಿಧದ ಪ್ರಾಡಕ್ಟ್‌ ಬಳಕೆ ಮಾಡುತ್ತೇವೆ. ತಿಂಗಳಲ್ಲಿ ಇವುಗಳ ಖರ್ಚು ಹೆಚ್ಚಾಗುತ್ತದೆ ಅಲ್ವಾ? ಆದರೆ ನೀವು ರೆಗ್ಯುಲರ್‌ ಆಗಿ ಕೂದಲಿನ ಬಗ್ಗೆ ಕೇರ್‌ ತೆಗೆದುಕೊಂಡು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದರೆ ಖರ್ಚು ಕಡಿಮೆಯಾಗುತ್ತದೆ, ಕೂದಲು ಸಾಫ್ಟ್‌ ಆ್ಯಂಡ್‌ ಶೈನ್‌ ಕೂಡ ಆಗುತ್ತದೆ.

Image result for menthe kalu

*ಮೆಂತೆ : 2 ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ಹಾಕಿಡಿ. ಬೆಳಗ್ಗೆ ಅದನ್ನು ಮಿಕ್ಸಿ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಕಪ್ಪು ಹಾಗೂ ದಪ್ಪವಾಗುತ್ತದೆ.

Related image

*ಗುಲಾಬಿ ದಳ- ಕೊಬ್ಬರಿ ಎಣ್ಣೆ :ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3 ಗಂಟೆಗಳ ನಂತರ ಸ್ನಾನ ಮಾಡಬಹುದು. ಅಥವಾ ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು.

Related image

*ಮೊಸರು : ಎರಡು ಚಮಚ ಈರುಳ್ಳಿ ರಸದಲ್ಲಿ ಒಂದು ಚಮಚ ಮೊಸರು ಹಾಗೂ ನಿಂಬೆ ರಸ ಬೆರೆಸಿ ಕೂದಲಿಗೆ ಮಸಾಜ್‌ ಮಾಡಿ. 30 ನಿಮಿಷದ ನಂತರ ತೊಳೆಯಿರಿ. ಇದರಿಂದ ಕೂದಲು ಸ್ಟ್ರಾಂಗ್‌ ಆಗುತ್ತದೆ.

Image result for mehandi for hair

*ಮೆಹೆಂದಿ : ಇದು ನಿಮ್ಮ ಕೂದಲಿಗೆ ನ್ಯಾಚುರಲ್ ಕಂಡೀಷನರ್. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಉದ್ದ ಕೂದಲು ಪಡೆಯಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುವಾಗ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ತಣ್ಣಗಾದ ನಂತರ ಮೆಹೆಂದಿ ಪುಡಿ, ಸ್ವಲ್ಪ ಮೊಸರು/ ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ(ಇಡೀ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಬಹುದು). ನಂತರ ಕೂದಲಿಗೆ ಸಂಪೂರ್ಣವಾಗಿ ಮೆಹೆಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ. ಕೂದಲಿಗೆ ಬಣ್ಣ ಬೇಕಾದರೆ 1 ಗಂಟೆ ಬಿಡಬಹುದು. ಕೂದಲು ಸಾಫ್ಟ್ ಆದ್ರೆ ಸಾಕು ಅಂತಿದ್ರೆ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.

Image result for banana almond oil for hair

* ಬಾಳೇಹಣ್ಣು- ಬಾದಾಮಿ ಎಣ್ಣೆ: ಚೆನ್ನಾಗಿ ಕಳಿತ ಬಾಳೇಹಣ್ಣನ್ನು ರುಬ್ಬಿಕೊಂಡು ಅದಕ್ಕೆ 2 ಚಮಚ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಕೂದಲು ತೊಳೆಯುವಾಗ ಬಾಳೆಹಣ್ಣಿನ ಅಂಶ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ. ಸ್ವಲ್ಪ ಸ್ವಲ್ಪ ಕೂದಲಿನಲ್ಲೇ ಇದ್ದರೆ ಚಿಂತೆ ಬೇಡ, ಕೂದಲು ಒಣಗಿದ ನಂತರ ಅದೆಲ್ಲಾ ಉದುರಿ ಹೋಗುತ್ತದೆ.

Related image

*ಕರಿಬೇವಿನ ಎಲೆ : ಒಂದು ಚಮಚ ಕರಿಬೇವಿನ ಎಲೆಯನ್ನು ಪೇಸ್ಟ್‌ ಮಾಡಿ, ಅದಕ್ಕೆ ಮೊಸರು ಮಿಕ್ಸ್‌‌ ಮಾಡಿ ರೆಗ್ಯುಲರ್‌ ಆಗಿ ಕೂದಲಿಗೆ ಮತ್ತು ಸ್ಕಾಲ್ಪ್‌ಗೆ ಹಚ್ಚಿ. ಇದರಿಂದ ಕೂದಲು ಕಪ್ಪಾಗಿ, ಸದೃಢವಾಗುತ್ತದೆ.

Image result for aloe vera

*ಆಲೋವೆರಾ: ಆಲೋವೆರಾವನ್ನ ಮುಖಕ್ಕೆ, ಕೈ-ಕಾಲಿಗೆ ಹಾಗೇ ತಲೆಗೂದಲಿಗೂ ಬಳಸಬಹುದು. ಆಲೋವೆರಾದ ಸಿಪ್ಪೆ ತೆಗೆದು ಅದರ ತಿರುಳನ್ನ ತೆಗೆದು ರುಬ್ಬಿಕೊಳ್ಳಿ. ನಂತರ ತಲೆಗೆ ಪ್ಯಾಕ್ ಹಾಕಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಆಲೋವೆರಾ ಬದಲು ಆಲೋವೆರಾ ಜೆಲ್ ಕೂಡ ಬಳಸಬಹುದು. ಆದ್ರೆ ನೈಸರ್ಗಿಕವಾದ್ದದಾದ್ರೆ ಉತ್ತಮ.

Image result for olive oil

*ಆಲಿವ್‌ ಆಯಿಲ್‌ : 3-4 ಚಮಚ ಆಲಿವ್‌ ಆಯಿಲ್‌ನ್ನು ಬಿಸಿ ಮಾಡಿ ಕೂದಲಿಗೆ ಮಸಾಜ್‌ ಮಾಡಿ. ಇದರ ನಂತರ ಟವೆಲ್‌ನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಕಟ್ಟಿ. ಒಂದು ಗಂಟೆಯ ನಂತರ ಸ್ನಾನ ಮಾಡಿ.

Related image

*ಬೀಟ್‌ರೂಟ್‌ : ಒಂದು ಚಮಚ ಬೀಟ್‌ರೂಟ್‌ ರಸಕ್ಕೆ ಎಳ್ಳಿನ ಎಣ್ಣೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಕಪ್ಪಾಗಿ, ಶೈನಿಯಾಗುತ್ತದೆ.

Image result for alugadde for hair

*ಆಲೂಗಡ್ಡೆ : 2-3 ಆಲೂಗಡ್ಡೆಯನ್ನು ಮಿಕ್ಸಿ ಮಾಡಿ ಅದರ ರಸ ತೆಗೆದುಕೊಂಡು ಕೂದಲು ಮತ್ತು ಸ್ಕಾಲ್ಪ್‌ಗೆ ಹಚ್ಚಿ. ಒಂದು ಗಂಟೆಯ ನಂತರ ತೊಳೆಯಿರಿ. ಇದರಿಂದ ಡ್ರೈನೆಸ್‌ ಕಡಿಮೆಯಾಗಿ ಕೂದಲು ಹೆಲ್ತಿಯಾಗುತ್ತದೆ.

Related image

*ಮೊಟ್ಟೆ : ಎರಡು ಚಮಚ ಈರುಳ್ಳಿ ರಸಕ್ಕೆ ಒಂದು ಮೊಟ್ಟೆಯ ಬಿಳಿ ಭಾಗವನ್ನು ಮಿಕ್ಸ್‌ ಮಾಡಿ ಪೂರ್ತಿ ಸ್ಕಾಲ್ಪ್‌ಗೆ ಹಾಕಿ ಮಸಾಜ್‌ ಮಾಡಿ. ಒಂದು ಗಂಟೆಯ ನಂತರ ತೊಳೆಯಿರಿ. ಇದರಿಂದ ಕೂದಲು ಉದ್ದ ಬೆಳೆಯುತ್ತದೆ, ಕೂದಲು ಉದುರುವುದು ಕಡಿಮೆಯಾಗುತ್ತದೆ.

Related image

*ಕ್ಯಾರೆಟ್‌ ರಸ : ರೆಗ್ಯುಲರ್‌ ಆಗಿ 2 ಚಮಚ ಕ್ಯಾರೆಟ್‌ ರಸವನ್ನು ಕೂದಲಿಗೆ ಮತ್ತು ಸ್ಕಾಲ್ಪ್‌ಗೆ ಹಾಕಿ. ಇದರಲ್ಲಿರುವ ಬಯೋಟನ್‌ ಕೂದಲು ಶೈನ್‌ ಆಗುವಂತೆ ಮಾಡುತ್ತದೆ, ಕೂದಲು ಉದುರುವುದು ನಿಲ್ಲುತ್ತದೆ.

Image result for cucumber for hair

*ಸೌತೆಕಾಯಿ ಪೇಸ್ಟ್‌‌ : 2 ಚಮಚ ಸೌತೆಕಾಯಿ ಪೇಸ್ಟ್‌‌ನ್ನು ಕೂದಲಿಗೆ ಹಾಕಿ. ಇದರಲ್ಲಿರುವ ವಿಟಾಮಿನ್‌ ಸಿ ಮತ್ತು ಆ್ಯಂಟಿಬಯೋಟಿಕ್ಸ್‌ ಕೂದಲು ಶೈನ್‌ ಆಗುವಂತೆ ಮಾಡುತ್ತದೆ.

Related image

*ಜೇನು : 2 ಚಮಚ ಜೇನನ್ನು 2 ಚಮಚ ಹಾಲಿಗೆ ಮಿಕ್ಸ್‌ ಮಾಡಿ. ಇದನ್ನು ಕೂದಲಿಗೆ ಹಾಕಿ ರೆಗ್ಯುಲರ್‌ ಆಗಿ ಮಸಾಜ್‌ ಮಾಡುತ್ತಿರಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪು, ದಪ್ಪವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top