ಆರೋಗ್ಯ

ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡುವುದರ ಹಿಂದಿನ ವೈಜ್ಞಾನಿಕ ,ಧಾರ್ಮಿಕ ಕಾರಣಗಳು

ಮನೆಗಳಲ್ಲಿ ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ,
ಎಷ್ಟೋ ಅಂಗಡಿ ಮಳಿಗೆ ನಾವು ಕಂಡಿರುವ ಈ ದೃಶ್ಯ ಸರ್ವೇ ಸಾಮಾನ್ಯ ಏಕೆ ಹೀಗೆ ಮಾಡುತ್ತಾರೆ ?

ವೈಜ್ಞಾನಿಕ ಕಾರಣಗಳು :

ನಿಂಬೆ ಕ್ಷಾರೀಯ ಗುಣವನ್ನು ಹೊಂದಿದ್ದು ಮನೆಯಲ್ಲಿ ಆಮ್ಲೀಯತೆ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ
ಹಾಗಾಗಿ ನಿಂಬೆಯ ಕ್ಷಾರೀಯ ಗುಣಗಳು ಮತ್ತು ನೀರು ಪ್ರಕೃತಿಯ ಆಮ್ಲಿಯ ಗುಣಗಳನ್ನು ಸೆರೆ ಹಿಡಿಯುವ ಶಕ್ತಿಯನ್ನು ಹೊಂದಿದ್ದು ಮನೆಯನ್ನು ಹಾಗು ಮನೆಯ ಮಂದಿಯನ್ನು ರಕ್ಷಣೆ ಮಾಡುತ್ತದೆ.

ತಾರ್ಕಿಕ ಹಾಗು ಧಾರ್ಮಿಕ ನಂಬಿಕೆಗಳು:

ನಿಂಬೆ ಪರಿಸರದಿಂದ ನಕಾರಾತ್ಮಕ ತರಂಗಗಳನ್ನು ಹೀರಿಕೊಳ್ಳುವ ಮತ್ತು ತಟಸ್ಥಗೊಳಿಸಲು ಗುಣವನ್ನು ಹೊಂದಿದೆ.
ಕೆಟ್ಟ ದೃಷ್ಟಿಯುಳ್ಳ ಪುರುಷರು / ಮಹಿಳೆಯರು ನಿಮ್ಮ ಪರಿಸರಕ್ಕೆ ಕೆಟ್ಟದನ್ನು ಬಯಸುತ್ತಾರೆ ಅಂತೆಯೇ ಮನೆಯ ಸಕಾರಾತ್ಮಕ ಶಕ್ತಿಯನ್ನು ಹಾಳು ಮಾಡುತ್ತಾರೆ.
ನಮ್ಮ ಪರಿಸರದ ಗಾಳಿ , ಆಹಾರ ಎಲ್ಲವು ಕಲುಷಿತಗೊಳ್ಳುತ್ತದೆ.


ಮಾಟ ಮಂತ್ರ ದುಷ್ಟ ಗ್ರಹ ಗಳ ಶಕ್ತಿಯನ್ನು ಕುಂದಿಸಲು ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ ಎಂದು ಹೇಳಲಾಗುತ್ತದೆ.

ದಿನ ನೀರನ್ನು ಬದಲಿಸಿ ಇಡುವುದು ನೀರಿನ ಬಣ್ಣ ಬದಲಾದರೆ ಅಥವಾ ನಿಂಬೆ ಕೊಳೆತರೆ ಹೊಸದಾಗಿ ನಿಂಬೆಹಣ್ಣನ್ನು ಇಡುವುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top