fbpx
ತಂತ್ರಜ್ಞಾನ

ಚಂದ್ರಯಾನ-2 ಉಡಾವಣೆ ಮಾಡಲು ಸಜ್ಜಾಗಿ ವಿಶ್ವಗುರು ಪಥದಲ್ಲಿ ಸಾಗುತ್ತಿರುವ ಭಾರತ.

ಚಂದ್ರಯಾನ 1 ಯಶಸ್ವಿಯಾಗಿ ಕಡಿಮೆ ಖರ್ಚಿನಲ್ಲಿ ಮಾಡಿ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಭಾರತದ ಇಸ್ರೋ ಈಗ ಚಂದ್ರಯಾನ-2 ಮಾಡಲು ಸಜ್ಜಾಗುತ್ತಿದೆ. ಉಡಾವಣೆಯನ್ನು ಏಪ್ರಿಲ್ ನಲ್ಲಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

 

 

ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಅನ್ನು ಇಳಿಸಲು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ನಿರ್ಧಾರ ಮಾಡಿದ್ದಾರೆ. ಚಂದ್ರನ ದಕ್ಷಿಣ ಧ್ರುವ ಕಡಿದಾದ ಬಂಡೆಗಳಿಂದ ರೂಪಗೊಂಡಿದೆ. ಇದುವರೆಗೂ ಈ ಭಾಗದಲ್ಲಿ ಯಾರು ನೌಕೆಯನ್ನು ಇಳಿಸಿಲ್ಲ. ಭಾರತವೇ ಪ್ರಥಮ ದೇಶವಾಗಿದೆ. ಎಲ್ಲ ದೇಶಗಳು ನೌಕೆಯನ್ನು ಚಂದ್ರನ ಸಮಭಾಜಕ ಪ್ರದೇಶದ ಸಮೀಪ ಇಳಿಸಿದರು. ಭಾರತ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿ ಅಲ್ಲಿ ಸಂಶೋಧನೆ ಮಾಡಿ ಜಗತ್ತು ಹೇಗೆ ಉಗಮಿಸಿತು ಎಂದು ಅರ್ಥಮಾಡಿಕೊಳ್ಳಲು ಸಹಾಯಕಾರಿಯಾಗಬಲ್ಲದು.

 

 

ಚಂದ್ರಯಾನ-1 ಎಂದರೆ ವಾಚ್ಯಾರ್ಥವಾಗಿ ಚಂದ್ರನ ಮೇಲೆ ಪಯಣಿಸುವ, ಅಥವಾ ಚಂದ್ರ ವಾಹನ ಇದು ದೇಶದ ಪ್ರಥಮ ಮಾನವರಹಿತ ಚಂದ್ರ ಶೋಧಕ. ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಈ ಯಾನವನ್ನು ಅಕ್ಟೋಬರ್‌ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್‌ 2009ರ ತನಕ ಕಾರ್ಯವನ್ನಿ . ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV ಸಿ೧೧ ಮೂಲಕ ಗಗನನೌಕೆಯನ್ನು ೨೨ ಅಕ್ಟೋಬರ್‌ 2008 ಕ್ಕೆ 06:22 IST ಗಂಟೆಯಲ್ಲಿ (00:52 UTC) ಉಡಾವಣೆ ಮಾಡಿದರು. ಚೆನ್ನೈ ಇಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶ ರಾಜ್ಯದ ನೆಲ್ಲೂರ್ ಜಿಲ್ಲೆಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾವಣೆ ಮಾಡಲಾಯಿತು.

 

 

ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು. 8 ನವೆಂಬರ್‌ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಕೆ ಮಾಡಲಾಯಿತು,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top