fbpx
ಮನೋರಂಜನೆ

ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಪುನೀತ್ ತಮ್ಮ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ?

ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ರು ಪುನೀತ್ ರಾಜಕುಮಾರ್!

 

 

ಈಗಂತೂ 4G ಇಂಟರ್ನೆಟ್ಟಿನ ಸೋಷಿಯಲ್ ಮೀಡಿಯಾ ಜಮಾನ, ಯಾರನ್ನೇ ನೋಡಿದರು ಕೈಯಲ್ಲಿ ದೊಡ್ಡ ದೊಡ್ಡ ಫೋನ್’ಗಳನ್ನ ಹಿಡಿದು ಫೋಟೋ ಕ್ಲಿಕ್ಕಿಸಿ ಫೇಸ್ಬುಕ್ ಸೇರಿ ಸಾಕಷ್ಟು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುತ್ತಾರೆ, ಒಂದು ರೀತಿ ಹೇಳಬೇಕೆಂದರೆ ವಯಕ್ತಿಕ ವಿಷಯಗಳನ್ನ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸುಲಭ ವೇದಿಕೆಯಾಗಿ ಸಾಮಾಜಿಕ ಜಾಲತಾಣಗಳು ಪರಿಣಮಿಸಿವೆ. ಇದಕ್ಕೆ ಸೆಲೆಬ್ರೆಟಿಗಳು ಹೊರತಾಗಿಲ್ಲ,,

ಹಾಗೆಯೇ ನಟ ಪುನೀತ್ ರಾಜಕುಮಾರ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚಿಗೆ ಸಕ್ರಿಯಾಗಿ ಪಾಲ್ಗೊಳ್ಳುಳ್ಳುತ್ತಿದ್ದಾರೆ.. ತಮ್ಮ ವಯಕ್ತಿಕ ಜೀವನದ ಮತ್ತು ತಮ್ಮ ಚಿತ್ರಕ್ಕೆ ಸಂಭಂದಿಸಿದಂತೆ ತಮ್ಮ ಅಭಿಮಾನಿಗಳಿಗೆ ಫೇಸ್ಬುಕ್, ಟ್ವಿಟರ್,ಮೂಲಕ ತಿಳಿಸುತ್ತಿದ್ದ ಪುನೀತ್ ಇದೀಗ ಇನ್ಸ್ಟಾಗ್ರಾಮ್ ಖಾತೆಯನ್ನ ತೆರೆದಿದ್ದಾರೆ.. ಇನ್ಸ್ಟಾಗ್ರಾಮ್’ನ ಬಳಕೆ ಯುವಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಪುನೀತ್ ಕೂಡ ಅಕೌಂಟ್ ಓಪನ್ ಮಾಡಿದ್ದೂ ತಮ್ಮ ಬಗೆಗಿನ ಮಾಹಿತಿಗಳಿಗಾಗಿ ಫಾಲೋ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

 

ಮೊದಲ ಪೋಸ್ಟ್ ಮಾಡಿರುವ ಪುನೀತ್ ರಾಜಕುಮಾರ್ “ಹಲೋ ಫ್ರೆಂಡ್ಸ್, ನನ್ನ ಮುಂದಿನ ಚಿತ್ರದ ಡಿಟೇಲ್ಸ್ ಅನ್ನು ನನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ತೀನಿ,, ಫಾಲೋ ಮಾಡಿ” ಎಂದು ಹೇಳಿದ್ದಾರೆ. ಸದ್ಯ ಫೇಸ್ಬುಕ್ ನಲ್ಲಿ ಐದು ಲಕ್ಷ ಫಾಲೋಯರ್ಸ್ ಗಳನು ಹೊಂದಿರುವ ಪುನೀತ್ ಇನ್ಸ್ಟಾಗ್ರಾಮ್ ನಲ್ಲಿ ಮೂರು ಸಾವಿರ ಫಾಲೋಯರ್ಸ್ ಹೊಂದಿದ್ದಾರೆ. ಇತ್ತೀಚಿಗಿನ PRK ಪ್ರೊಡಕ್ಷನ್ ಮತ್ತು PRK ಆಡಿಯೋ ಕಂಪನಿಯ ಮಾಹಿತಿಗಳನ್ನು ಫೇಸ್ಬುಕ್ ಮೂಲಕ ಹಂಚಿಕೊಳ್ಳುತ್ತಿದ್ದರು ಇನ್ನುಮುಂದೆ ಆ ಮಾಹಿತಿಗಳು ಇನ್ಸ್ಟಾಗ್ರಾಮ್ ನಲ್ಲೂ ಲಭ್ಯವಾಗಲಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top