ವಿಶೇಷ

ಥೈಲ್ಯಾಂಡ್ ನಲ್ಲಿ ಇರೋ ಈ ರೂಲ್ಸ್ ಕೇಳ್ಬಿಟ್ರೆ ಅಬ್ಬಬ್ಬಾ ವಿಚಿತ್ರ ಇವ್ರು ಅಂತೀರಾ ..

ಕೆಲವು ದೇಶದ ನಿಯಮಗಳು ಬಹಳ ವಿಚಿತ್ರವಾಗಿರುತ್ತವೆ ಕೆಲವು ಆ ನಿಯಮಗಳನ್ನು ಕೇಳಿದರೆ ಸಾಕು ನಗು ತರಿಸುವಂತೆ ಇರುತ್ತವೆ ಇನ್ನು ಕೆಲವು ನಿಯಮಗಳು ಬಹಳ ಕಠಿಣವಾಗಿರುತ್ತವೆ ಇನ್ನು ಕೆಲವು ದೇಶಗಳ ನಿಯಮಗಳನ್ನು ಕೇಳಿದರೆ ಸಾಕು ನಮಗೆ ಗೌರವ ಉಕ್ಕಿ ಬರುತ್ತವೆ

 

ಥಾಯ್ಲೆಂಡ್ ದೇಶದಲ್ಲಿರುವ ಕೆಲವು ನಿಯಮಗಳನ್ನು ನೀವು ತಿಳಿದುಕೊಂಡರೆ ನಿಜವಾಗಿಯೂ ಆಶ್ಚರ್ಯ ಪಡುತ್ತೀರಿ ಬನ್ನಿ ಆ ನಿಯಮಗಳೇನು ಈಗ ತಿಳಿಯೋಣ

 

ಥಾಯ್ಲೆಂಡ್ ದೇಶದಲ್ಲಿ ಶರ್ಟ್ ಅನ್ನು ಹಾಕಿಕೊಳ್ಳದೆ ಕಾರನ್ನು ಓಡಿಸುವಂತಿಲ್ಲ ಹೀಗೆ ಕಾರು ಓಡಿಸಿದರೆ ಅದು ಕೆಟ್ಟದ್ದನ್ನು ಸೂಚಿಸುತ್ತದೆಯಂತೆ ಹಾಗೆಯೇ ಇತರ ಕಾರು ಚಾಲಕರಿಗೆ ಬೇರೆಡೆ ಧ್ಯಾನವನ್ನು ಹೊರಳಿಸುತ್ತದೆ ಯಂತೆ

 

 

ಥೈಲೆಂಡ್ ದೇಶದಲ್ಲಿ ನೀವು ಬಟ್ಟೆ ಹಾಕಿದರೂ ಹಾಕದೇ ಇದ್ದರೂ ಸಹ ಅಂಡರ್ ವೇರ್ ಖಚಿತ ಅಂಡರ್ವೆ ಹಾಕದೇ ಇದ್ದರೆ ನಿಯಮ ಉಲ್ಲಂಘನೆ ಆದಂತೆ

 

 

ಥಾಯ್ಲೆಂಡ್ನಲ್ಲಿ ತೃತೀಯ ಲಿಂಗಿಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗುತ್ತದೆ ಅವರನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಾರೆ ಹಾಗೆಯೇ ಎಲ್ಲಾ ಸಾರ್ವಜನಿಕ ಶೌಚಾಲಯಗಳಲ್ಲೂ ತೃತೀಯ ಲಿಂಗಿಗಳಿಗೆ ವಿಶೇಷ ಶೌಚಾಲಯ ವಿರುತ್ತದೆ ಇವುಗಳನ್ನು ಪಿಂಕ್ ಟಾಯ್ಲೆಟ್ ಎಂದು ಕರೆಯುತ್ತಾರೆ

 

 

ಥಾಯ್ಲೆಂಡ್ ಕರೆನ್ಸಿ ಮೇಲೆ ಅಲ್ಲಿರುವ ಜನರಿಗೆ ವಿಶಿಷ್ಟವಾದ ಅಭಿಮಾನವಿರಬೇಕು ಎಂದು ಅಲ್ಲಿನ ಸರ್ಕಾರ ಹೇಳುತ್ತದೆ ಹಾಗೆಯೇ ಕರೆನ್ಸಿಯನ್ನು ಯಾರಾದರೂ ಕಾಲಿನಲ್ಲಿ ತುಳಿದರೆ ಅಪರಾಧ

 

 

ಇಲ್ಲಿ ಕಟ್ಟಿಂಗ್ ಶಾಪ್ ಗಳು ಮಂಗಳವಾರ ರಜೆ ತೆಗೆದುಕೊಂಡರೆ ಥಾಯ್ಲೆಂಡ್ನಲ್ಲಿ ಬುಧವಾರ ಕಟಿಂಗ್ ಶಾಪ್ ಗಳು ಬಂದ್

 

 

೨೦೧೮ ವರ್ಷ ಇಲ್ಲಿ ನಡೆಯುತ್ತಿದ್ದರೆ ಅವರಿಗೆ ೨೫೬೦ ವರ್ಷ ನಡೆಯುತ್ತಿದೆ ಅವರು ಹಾಗೂ ನಾವು ಹಿಂಬಾಲಿಸುವ ಕ್ಯಾಲೆಂಡರ್ ವಿಧ ಬೇರೆ

 

 

ಥಾಯ್ಲೆಂಡ್ ದೇಶಭಕ್ತಿಗೀತೆ ಹೆಚ್ಚು ಕಡಿಮೆ ಎರಡು ನಿಮಿಷಗಳ ಕಾಲ ಇದ್ದು ದಿನಕ್ಕೆ ಎರಡು ಬಾರಿ ಹಾಡಲಾಗುತ್ತದೆ ಹೀಗೆ ರಸ್ತೆಗಳಲ್ಲಿ ಲೌಡ್ ಸ್ಪೀಕರ್ನಲ್ಲಿ ಕೇಳಿಸುವಂತೆ ಬೆಳಗ್ಗೆ ಎಂಟು ಗಂಟೆಗೆ ಹಾಗೂ ಸಂಜೆ ಆರು ಗಂಟೆಗೆ ಕೇಳಿಸಲಾಗುತ್ತದೆ ಈ ಸಮಯದಲ್ಲಿ ಯಾರು ಏನೇ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಮೌನವಾಗಿ ದೇಶಭಕ್ತಿ ಗೀತೆಯನ್ನು ಕೇಳಬೇಕು

ಈ ಸಮಯದಲ್ಲಿ ಥಾಯ್ಲೆಂಡ್ ಪೂರ್ತಿಯಾಗಿ ಮೌನ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top