ಮನೋರಂಜನೆ

ರವಿಚಂದ್ರನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ‘ಹಳ್ಳಿ ಮೇಷ್ಟ್ರು’ ನಟಿ ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ?

ರವಿಚಂದ್ರನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ‘ಹಳ್ಳಿ ಮೇಷ್ಟ್ರು’ ನಟಿ ಬಿಂದಿಯಾ ಈಗ ಹೇಗಿದ್ದಾರೆ ಗೊತ್ತಾ?

 

 

ನಟಿ ಬಿಂದಿಯಾ ಅಸಲಿ ಹೆಸರು ಫರ್ ಹೀನ್ ಅಂತ ‘ಜಾನ್ ತೆರೆ ನಾಮ್ ‘ ಎಂಬ ಬಾಲಿವುಡ್ ಚಿತ್ರದಿಂದ ಹೆಸರವಾಸಿಯಾದಾಕೆ , ನೋಡಲು ಅಂದಿನ ಸುರಸುಂದರಿ ಮಾಧುರಿ ದೀಕ್ಷಿತ್ ಹೋಲಿಕೆ ಇದ್ದದ್ದರಿಂದ ಆಕೆಯ ರೂಪಕ್ಕೆ ಮರುಳಾಗದವರೇ ಇಲ್ಲ , ಇಷ್ಟೇ ಸಾಕಾಗಿತ್ತು ರವಿ ಚಂದ್ರನ್ ತಮ್ಮ ಚಿತ್ರಕ್ಕೆ ಹೀರೋಯಿನ್ ಹುಡುಕಾಟದಲ್ಲಿರುವ ಫರ್ ಹೀನ್ ಅವರನ್ನು ಕಂಡು ಬಿಂದಿಯಾ ಎಂಬ ಬದಲಿ ಹೆಸರಿಂದ ತಮ್ಮ ಚಿತ್ರ ‘ಹಳ್ಳಿ ಮೇಷ್ಟ್ರು ‘ ಗೆ ನಾಯಕಿ ಮಾಡಿಯೇ ಬಿಟ್ಟರು .

 

 

ವಿಷ್ಣುವರ್ಧನ್ ಅವರ ಜೊತೆ ‘ರಾಯರು ಬಂದರು ಮಾವನ ಮನೆಗೆ’ ಚಿತ್ರದಲ್ಲೂ ನಟಿಸಿದ್ದರು

ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ಬಹಳ ನೈಸರ್ಗಿಕವಾಗಿಯೇ ನಟಿಸುತ್ತಿದ್ದ ನಟಿ ಶೂಟಿಂಗ್ ಸೆಟ್ ಗಳಲ್ಲಿ ಆಗಾಗ ಕಿರಿಕ್ ತೆಗೆಯುವ ಚಾಳಿ ಇಟ್ಟುಕೊಂಡಿದ್ದಳು , ಇದು ತೀರಾ ವಿಪರೀತಕ್ಕೆ ಹೋಗಿ ನಟ ರವಿ ಚಂದ್ರನ್ ತಮ್ಮ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದರು ಎಂಬ ಹೇಳಿಕೆಗಳನ್ನು ,ಆರೋಪಗಳನ್ನು ಮಾಡಲಾರಂಭಿಸಿದಳು .

 

 

ಮೊದಲೇ ಖ್ಯಾತರಾಗಿದ್ದ ವೀರಾ ಸ್ವಾಮಿ ಯವರ ಪುತ್ರರಾಗಿದ್ದ ರವಿ ಚಂದ್ರನ್ ತಂದೆ ಹಾಗು ತಮ್ಮ ಮಾನವನ್ನು ಬೀದಿಯಲ್ಲಿ ಕೋಟ್ಯಂತರ ಮಂದಿಯ ಮುಂದೆ ಕಳೆದ ಈಕೆಗೆ ಹೇಗಾದರೂ ಬುದ್ದಿ ಕಲಿಸಬೇಕೆಂದುಕೊಂಡು ಆಕೆಯ ಮೇಲೆ ಒಂದು ರೂಪಾಯಿ ಮಾನ ನಷ್ಟ ಮೊಕದ್ದಮೆಯನ್ನು ಬಿಂದಿಯಾ ಮೇಲೆ ಜಡಿದರು .

ಇದಾದ ಬಳಿಕ ಬಿಂದಿಯಾ ಸಲುವಾಗಿ ಮೊದಲ ಬಾರಿಗೆ ರವಿ ಚಂದ್ರನ್ ಕೋರ್ಟ್ ಮೆಟ್ಟಿಲು ಹತ್ತುವಂತಾಗಿತ್ತು , ಕೊನೆಗೂ ಕೋರ್ಟ್ ತೀರ್ಪು ರವಿ ಅವರ ಪರವಾಗಿಯೇ ಬಂದು ಬಿಂದಿಯಾ ಕೋರ್ಟ್ ನಲ್ಲಿ ಎಲ್ಲರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದರು .

 

 

 

 

 

 

 

ಆನಂತ್ರದ ದಿನಗಳಲ್ಲಿ ಅತ್ತ ಬಾಲಿವುಡ್ ನಲ್ಲೂ ಅವಕಾಶ ಸಿಗದೇ ಇತ್ತ ಸ್ಯಾಂಡಲ್ ವುಡ್ ನಲ್ಲೂ ಅವಕಾಶ ಇಲ್ಲದೆ ಕಂಗಾಲಾಗಿದ್ದ ನಟಿ ಬಿಂದಿಯಾಗೆ ಕ್ರಿಕೆಟರ್ ಅದರಲ್ಲೂ ಬೌಲರ್ ಆಗಿ ಖ್ಯಾತಿ ಹೊಂದಿದ್ದ ಮನೋಜ್ ಪ್ರಭಾಕರ ಅವರ ಜೊತೆ ಪ್ರೀತಿಯಾಯಿತು .

ಆಗಲೇ ಮದುವೆಯಾಗಿದ್ದ ಮನೋಜ್ ತಮ್ಮ ಮೊದಲ ಪತ್ನಿ ಸಂಧ್ಯಾ ಅವರಿಗೆ ಡೈವೋರ್ಸ್ ನೀಡಿ ಫರ್ ಹೀನ್ ಅಲಿಯಾಸ್ ಬಿಂದಿಯಾ ಅವರನ್ನು ಮದುವೆ ಮಾಡಿಕೊಂಡರು

ಈಗ ದಂಪತಿಗಳಿಗೆ ರಾಹಿಲ್ ಮತ್ತು ಮಾನವಂಶ್ ಎಂಬ ಇಬ್ಬರು ಮಕ್ಕಳಿದ್ದು ಪ್ರಸ್ತುತ ಡೆಲ್ಲಿಯಲ್ಲಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top