fbpx
ಸಿನಿಮಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಜಕುಮಾರ ನಿರ್ದೇಶಕ ಸಂತೋಷ್‌

ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಕಮಾಲ್ ಸೃಷ್ಟಿ ಮಾಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವೆಂಬರ್ 26ರಂದು ತಮ್ಮ ಫ್ಯಾಮಿಲಿಗೆ ಕ್ಲೋಸ್ ಆಗಿರುವ ಶ್ರೀನಿವಾಸ್ ಹತ್ವಾರ್ ಎಂಬುವವರ ಮಗಳಾದ ಸುರಭಿ ಹತ್ವಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂತೋಷ್ 11.30ರ ಶುಭ ಲಗ್ನದಲ್ಲಿ ಮದುವೆಯಾದರು.

 

 

ಹೂವಿನ ಪಲ್ಲಕ್ಕಿ ಇಂದ ಬಂದಿಳಿದ ವಧು ಸುರಭಿಗೆ ಬೆಳಗ್ಗೆ 11.30ರ ವೃಷಭ ಲಗ್ನದಲ್ಲಿ ಸಂತೋಷ ಆನಂದ್ ರಾಮ್ ಮಾಂಗಲ್ಯವನ್ನು ಧಾರಣೆ ಮಾಡಿದರು. 2017 ರ ನವೆಂಬರ್‌ ತಿಂಗಳಿನಲ್ಲಿ ಸಂತೋಷ ಮತ್ತು ಸುರಭಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸ್ನೇಹಿತರು ಮದುವೆಗೆ ಆಗಮಿಸಿ ವಧು ವರರಿಗೆ ಶುಭಾಶಯವನ್ನು ಕೋರಿ ಹಾರೈಸಿದರು.

 

ನಿನ್ನೆ ರಾತ್ರಿ ಅರಕ್ಷತೆಯ ಕಾರ್ಯಕ್ರಮ ನಡೆದಿದ್ದು ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಅರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ಜೆ.ಪಿ. ನಗರದ ಸಿಂಧೂರ್ ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಸಂತೋಷ್ ಹಾಗು ಸುರಭಿ ಅವರ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಡಾ ರಾಜ್ ಫ್ಯಾಮಿಲಿಯ ಎಲ್ಲಾ ಸದಸ್ಯರು ಭಾಗಿ ಆಗಿ ಶುಭಾಶಯ ಕೋರಿದರು.

 

 

ಅಂದಹಾಗೆ BE ಮಾಡಿ ನಂತರ ಎಂ.ಟೆಕ್ ಪದವಿ ಪಡೆದಿರುವ ಸುರಭಿ, ಶ್ರೀನಿವಾಸ್ ಹತ್ವಾರ್ ಮತ್ತು ಭಾವನಾ ಹತ್ವಾರ್ ದಂಪತಿಯ ಏಕೈಕ ಪುತ್ರಿ.. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಎಂಬುವವರನ್ನು ಸಂತೋಷ್ ಆನಂದರಾಮ್ ಕೈಹಿಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top