ಮನೋರಂಜನೆ

ಟಗರು ದರ್ಶನಕ್ಕಾಗಿ ದುಬೈನಿಂದ ಬೆಂಗಳೂರಿಗೆ ಬಂದ್ರು ಅಭಿಮಾನಿಗಳು.

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಬಹು ನಿರೀಕ್ಷಿತ ಚಿತ್ರ ಟಗರು. ಈಗಾಗಲೇ ಹಾಡುಗಳು ಮತ್ತು ಟೀಸರ್ ನಿಂದ ಕುತೂಹಲ ಹೆಚ್ಚು ಮಾಡಿರೋ ಟಗರು ಚಿತ್ರ ತನ್ನ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಿಕೊಂಡಿದೆ.. ಟಗರು ಚಿತ್ರ ಫೆಬ್ರವರಿ 23ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 

 

ಸದ್ಯ ಗಾಂಧಿನಗರದಲ್ಲಿ ಟಗರು ಚಿತ್ರದ ಹವಾ ಜೋರಾಗಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ವಿದೇಶದ ಸಿನಿರಸಿಕರು ಟಗರು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ ಇದಕ್ಕೆ ಸಾಕ್ಷಿ ದುಬೈನಿಂದ ಬಂದಿರುವಂಥ ಶಿವಣ್ಣನ ಅಭಿಮಾನಿಗಳು.

 

 

ದುಬೈನಲ್ಲಿರುವ ಶಿವಣ್ಣನ ಅಭಿಮಾನಿ ಸಂಘದ ಸದಸ್ಯರು ತಮ್ಮ ಕಾರುಗಳ ಮೇಲೆ ಟಗರು ಚಿತ್ರದ ಪೋಸ್ಟರ್ ಹಾಕಿಕೊಂಡು ರ್ಯಾಲಿ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನೋಡೋಕೆ ಬೆಂಗಳೂರಿಗೆ ಬರುತ್ತಿದ್ದುಈಗಾಗಲೇ ಟಿಕೆಟ್ ಬುಕ್ ಮಾಡಿದ್ದಾರೆ. ಇದಕ್ಕೆ ಸಂಭಂದಿಸಿದಂತೆ ನಿರ್ಮಾಪಕ ಶ್ರೀಕಾಂತ್ ಸ್ವತಃ ಶಿವಣ್ಣನ ಕಟ್ಟಾ ಅಭಿಮಾನಿಯಾಗಿರೋದ್ರಿಂದ ದುಬೈ ಅಭಿಮಾನಿಗಳನ್ನು ಕರೆತರಲು ವಿಮಾನ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆಯನ್ನೇ ಮಾಡಿದ್ದಾರೆ.. ಅಲ್ಲದೆ ಸಂತೋಷ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ವ್ಯವಸ್ಥೆಯೂ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

 

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿರುವ ಟಗರು ಚಿತ್ರದಲ್ಲಿ ವಿಲನ್‌ಗಳಾಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ ಮಾನ್ವಿತಾ ಮತ್ತು ಭಾವನಾ ಶಿವರಾಜಕುಮಾರ್’ಗೆ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋಗಳು, ಟೀಸರ್ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top