ತಿಂಡಿ ತೀರ್ಥ

ರುಚಿರುಚಿಯಾದ ಹರಿಯಲಿ ಚಿಕನ್ ರೆಸಿಪಿ ಈಗ ತುಂಬಾ ಸುಲಭವಾಗಿ ಮನೇಲಿ ಮಾಡ್ಕೋಬಹುದು:

ಹರಿಯಲಿ ಚಿಕನ್ ರೆಸಿಪಿ:

ಬೇಕಾಗುವ ಸಾಮಗ್ರಿಗಳು :

ಚಿಕನ್ ಅರ್ಧ ಕೆಜಿ
ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ಒಂದು
ಧನಿಯಾ – 1 ಚಮಚ
ಪುದಿನ ಸೊಪ್ಪು -1 ಚಿಕ್ಕ ಕಪ್

 

 

ಕೊತ್ತಂಬರಿ ಸೊಪ್ಪು -1 ಚಿಕ್ಕ ಕಪ್
ಮೊಸರು -ಅರ್ಧ ಚಿಕ್ಕ ಕಪ್
ಉಪ್ಪು ರುಚಿಗೆ
ಅಚ್ಚ ಖಾರದಪುಡಿ -1 ಚಮಚ

 

 

ಹಸಿ ಮೆಣಸಿನ ಕಾಯಿ 10
ಚಕ್ಕೆ 4
ಶುಂಠಿಬೆಳ್ಳುಳಿ ಪೇಸ್ಟ್ – 2 ಚಮಚ
ಗರಂ ಮಸಾಲಾ ಪುಡಿ -1 ಚಮಚ

ಮೆಂತ್ಯ ಸೊಪ್ಪಿನ ಪುಡಿ -1 ಚಮಚ
ಜೀರಿಗೆ ಪುಡಿ -1 ಚಮಚ

 

 

ಮಾಡುವ ವಿಧಾನ :

ಮೊದಲಿಗೆ ಪುದಿನ ಸೊಪ್ಪು ,ಕೊತ್ತಂಬರಿ ಸೊಪ್ಪು ,ಮೊಸರು ಮತ್ತು ಹಸಿ ಮೆಣಸಿನ ಕಾಯಿ ಯನ್ನು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ .
ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ ಅದಕ್ಕೆ ಚಕ್ಕೆ ,ಈರುಳ್ಳಿ ಮತ್ತು ಚಿಕನ್ ತುಂಡುಗಳನ್ನೂ ಹಾಕಿಚೆನ್ನಾಗಿ ಬಾಡಿಸಿಕೊಳ್ಳಿ ನಂತರ ಇದಕ್ಕೆ ಶುಂಠಿಬೆಳ್ಳುಳಿ ಪೇಸ್ಟ್ ,ಗರಂ ಮಸಾಲಾ ಪುಡಿ ,ಜೀರಿಗೆ ಪುಡಿ ,ಅಚ್ಚ ಖಾರದಪುಡಿ ಮತ್ತು ರುಬ್ಬಿಕೊಂಡ ಮಿಶ್ರಣ ,ರುಚ್ಚಿಗೆ ಬೇಕಾದ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಲು ಬಿಡಿ ಕೊನೆಯಲ್ಲಿ ಮೆಂತ್ಯ ಸೊಪ್ಪಿನ ಪುಡಿ ಸೇರಿಸಿ ಸವಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top