ಮನೋರಂಜನೆ

ಫೇಸ್ಬುಕ್ ಮಾಲೀಕ ಝುಕರ್‌ಬರ್ಗ್‌’ನನ್ನೇ ಮೀರಿಸಿದ ವೈರಲ್ ಹುಡುಗಿ.

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಬಹುಶಃ ಈಗಷ್ಟೇ ಒಂದು ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಅಡಿಯಿರಿಸಿರುವ ಪ್ರಿಯಾ ವಾರಿಯರ್ ಎಂಬ ಹುಡುಗಿ ಇಪ್ಪತೈದು ಚಿತ್ರಗಳಲ್ಲಿ ನಟಿಸಿದರೂ ಸಿಗಲಾರದ ಪ್ರಚಾರವನ್ನು ಇಪ್ಪತ್ತು ಸೆಕೆಂಡುಗದ್ದೊಂದು ವೀಡಿಯೋ ಮೂಲಕವೇ ಪಡೆದುಕೊಂಡಿದ್ದಾಳೆ. ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಈ ಹುಡುಗಿ ಪಡೆದ ಪಬ್ಲಿಸಿಟಿ ಕಂಡು ಎಲ್ಲರೂ ದಂಗೆದ್ದು ಹೋಗಿರೋದಂತೂ ಸತ್ಯ!

 

 

ಪ್ರಿಯಾ ವಾರಿಯರ್ ಬಗ್ಗೆ ದಿನ ಮಾತ್ರದಲ್ಲಿಯೇ ಹುಟ್ಟಿಕೊಂಡ ಕುತೂಹಲ ಎಂಥಾದ್ದಿತ್ತೆಂದರೆ ಮಿಲಿಯಗಟ್ಟಲೆ ಜನ ಈಕೆಯ ಬಗ್ಗೆ ವಿವರ ಕಲೆ ಹಾಕಲು ಗೂಗಲ್ ಮೊರೆ ಹೋಗಿದ್ದರು. ಅದರ ವೇಗ ಯಾವ ಪರಿಯದ್ದೆಂದರೆ, ಅದುವರೆಗೂ ಗೂಗಲ್ ಸರ್ಚ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಸನ್ನಿ ಲಿಯೋನ್ ಕೂಡಾ ಪ್ರಿಯಾ ವಾರಿಯರ್ ಮುಂದೆ ಸಪ್ಪೆಯಾಗಿದ್ದಳು!

 


 

ಇದೀಗ ಪ್ರಿಯಾ ವಾರಿಯರ್ ಫೇಸ್ಬುಕ್ ಸ್ಥಾಪಕ ಮತ್ತು ಮಾಲೀಕ ಮಾರ್ಕ್ ಜುಕರ್ ಬರ್ಗ್ ಅವರಿಗಿಂತಲೂ ಹೆಚ್ಚು ಹಿಂಬಾಲಕರನ್ನು ಗಳಿಸುವ ಮೂಲಕ ಅವರನ್ನು ಹಿಂದಿಕ್ಕಿದ್ದಾರೆ. 18 ವರ್ಷದ ಪ್ರಿಯಾ ವಾರಿಯರ್ ತನ್ನ ಇನ್‌‌ಸ್ಟಾಗ್ರಾಮ್‌ನಲ್ಲಿ 45 ಲಕ್ಷ ಫಾಲೋಯರ್ಸ್ ಹೊಂದಿದ್ದರೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್’ಗಳ ಮಾಲೀಕ ಮಾರ್ಕ್ ಝುಕರ್‌ಬರ್ಗ್‌ಗೆ 40 ಲಕ್ಷ ಫಾಲೋಯರ್ಸ್‌ ಇದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top