ಸಿನಿಮಾ

ಕಣ್ಣು ಮಿಟುಕಿಸಿ ವೈರಲ್ ಆದ ಹುಡುಗಿ ಪ್ರಿಯಾ ವಾರಿಯರ್ ಸೀನ್ ಹಂಗೆ ಕಾಪಿ ಹೊಡ್ದಿರೊದಂತೆ ವಿಡಿಯೋ ನೋಡಿ

 

ಸೋಷಿಯಲ್ ಮೀಡಿಯಾ ಎಂಬುದು ಎಲ್ಲ ಕ್ಷೇತ್ರಗಳನ್ನೂ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಈಗ ಸೋಷಿಯಲ್ ಮೀಡಿಯಾ ಮೂಲಕ ರಾತ್ರೋ ರಾತ್ರಿ ಲಕ್ಷಂತಾರ ಅಭಿಮಾನಿಗಳನ್ನು ಹುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಏಕಾಏಕಿ ಪ್ರಸಿದ್ಧಿಯನ್ನ ಪಡಿಯಬೋದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಮಲೆಯಾಳಂ ಯುವ ನಟ ನಟಿಯರಾದ ರೋಷನ್ ಅದ್ಬುಲ್ ಮತ್ತು ಪ್ರಿಯ ವಾರಿಕರ್. ಸದ್ಯ ಇಂಟರ್ನೆಟ್ ಮೂಲೆ ಮೂಲೆಗಳಲ್ಲಿ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಿಯಾ ವಾರಿಯರ್ ಅವರದ್ದೇ ಹವಾ ಈಕೆಯ ನೆರಳಲ್ಲಿ ರೋಷನ್ ಕೂಡ ಸಾಕಷ್ಟು ಖ್ಯಾತಿಯನ್ನ ಗಳಿಸುತ್ತಿದ್ದಾರೆ.

 

 

ಎರಡು ದಿನಗಳಿಂದ ಇಡೀ ದೇಶದ ಸೋಷಿಯಲ್ ಮೀಡಿಯವನ್ನೇ ಆವರಿಸಿಕೊಂಡಿರುವ ಚೆಲುವೆಯೊಬ್ಬಳು ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾಳೆ. ಒಂದೇ ಒಂದು ಸಣ್ಣ ವೀಡಿಯೊ ಮೂಲಕ ಪಡ್ಡೆ ಹುಡುಗರ ಹೊಸ ಕ್ರಶ್ ಎಂದೇ ಕರೆಸಿಕೊಳ್ಳುತ್ತಿರುವ ಈಕೆ ತೋರಿಸಿದ ಮನಮೋಹಕ ಕಣ್ಣಿನ ನೋಟ ಮತ್ತು ಕಣ್ಣಿನ ಸನ್ನೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ. ಒರು ಆದಾರ್ ಲವ್’ (Ooru adaar love) ಎಂಬ ಮಲೆಯಾಳಂ ಸಿನಿಮಾದ ಹಾಡಿನಲ್ಲಿನ ಕೇವಲ ಮೂವತ್ತು ಸೆಕೆಂಡಿನ ವಿಡಿಯೋ ದೇಶದಾದ್ಯಂತ ಹಿಂದೆಂದೂ ಮಾಡಿರಿ ರೀತಿಯಲ್ಲಿ ಜಾದು ಮಾಡಿದೆ.

 

 

ಕಣ್ಣಿನಿಂದ ಬಿಟ್ಟ ಹೂಬಾಣದಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಪ್ರಿಯಾ ವಾರಿಯರ್ ಅಭಿನಯದ ಒರು ಆದಾರ್ ಲವ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ನಾಳೆ ಪ್ರೇಮಿಗಳ ದಿನಾಚರಣೆ ಇರುವುದರಿಂದ ಈ ಪ್ರಯುಕ್ತ ಪ್ರೇಮಕಥೆಯನ್ನೇ ಆಧರಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈ ಭಾರಿಯೂ ಹುಡುಗರ ಹೃದಯವನ್ನು ಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅಂದಹಾಗೆ ಈ ಚಿತ್ರ ಮಾರ್ಚ್ 20ರಂದು ತೆರೆಗೆ ಬರುತ್ತಿದೆ.

 

ಈ ಚಿತ್ರದ ಟೀಸರ್ ಅನ್ನು ಇಲ್ಲಿ ನೋಡಿ👇👇👇

 

 

ಇಷ್ಟೆಲ್ಲ ಖ್ಯಾತಿ ಹೊಂದಿದ ಈ ಹಾಡಿಗೆ ದಿನದಿಂದ ದಿನ ಹೊಸ ಹೊಸ ಆರೋಪಗಳನ್ನು ಎದುರಿಸುವಂತಾಗಿದೆ

 

ಮಾಣಿಕ್ಯ ಮಲರಾಯಿ ಪೂವಿ ಈ ಹಾಡಿನ ದೃಶ್ಯದ ತುಣುಕನ್ನು ನಮ್ಮ ಸಿನಿಮಾದಿಂದ ಕದ್ದು ಸ್ವಲ್ಪ ಬದಲಾಯಿಸಿ ಹಾಗೆ ಇಳಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕರು

‘ಕೈದು’ ಎಂಬ ಚಿತ್ರಕ್ಕೆ ಇದೇ ರೀತಿಯ ದೋಷಗಳನ್ನು ನಿರ್ದೇಶಕರು ಚಿತ್ರೀಕರಿಸಿದ್ದಾರಂತೆ ಆ ದೃಶ್ಯವನ್ನು ಯಥಾವತ್ತಾಗಿ ‘ಒರು ಆದರ್ ಲವ್’ ಚಿತ್ರದಲ್ಲಿ ಕಾಪಿ ಮಾಡಲಾಗಿದೆ ಎಂದು ನಿರ್ದೇಶಕರು ಆರೋಪಿಸುತ್ತಾರೆ

 

 

ಕೈದು ಚಿತ್ರದಲ್ಲಿನ ದೃಶ್ಯವನ್ನು ಅಪ್ಲೋಡ್ ಮಾಡಿರುವ ನಿರ್ದೇಶಕ ಮಜೀದ್ ಅಬು ಈ ಕಾಫಿ ಕರ್ಮಕಾಂಡವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ ಈ ವಿಷಯವನ್ನು ಎಲ್ಲರಿಗು ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top