ಸಿನಿಮಾ

ಒಂದು ಎಪಿಸೋಡಿಗೆ ಸಲ್ಮಾನ್ ಖಾನ್ ಇಷ್ಟು ಸಂಭಾವನೆನಾ , ಬೆಚ್ಚಿಬಿದ್ದರು ಪ್ರೇಕ್ಷಕರು

ಬಾಲಿವುಡ್ ಸುಲ್ತಾನ್ ಖ್ಯಾತ ನಟ ಸಲ್ಮಾನ್ ಖಾನ್ ಬೆಳ್ಳಿಪರದೆ ಮತ್ತು ಕಿರುತೆರೆಯಲ್ಲಿ ಅತ್ಯಂತ ಯಶಸ್ವಿ ನಾಯಕ. ಒಂದರ ನಂತರ ಒಂದು ಹಿಟ್‌ ಚಲನಚಿತ್ರ ನೀಡಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋ ಮೆಖೇನ ಇನ್ನಷ್ಟು ಜನಪ್ರಿಯ ಪಡೆದುಕೊಂಡಿರುವ ಸಲ್ಮಾನ್‌, ಇದೀಗ ಇನ್ನೊಂದು ರಿಯಾಲಿಟಿ ಶೋ ನಲ್ಲಿ ಹೋಸ್ಟ್ ಮಾಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಶೋ ನಲ್ಲಿ ಹಿಂದೆಂದೂ ಪಡೆಯದ ಅತಿ ಹೆಚ್ಚಿನ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

 

 

‘ಬಿಗ್​ಬಾಸ್​’ ರಿಯಾಲಿಟಿ ಶೋ ನಂತರ ಸಲ್ಮಾನ್​ ‘ದಸ್​ ಕಾ ದಮ್’​ ಕಾರ್ಯಕ್ರಮದ ಮೆಖೇನ ಕಿರುತೆರೆಗೆ ಮರಳಿ ಬರಲಿದ್ದಾರೆ. 26 ಎಪಿಸೋಡ್​ಗಳಿಗೆ 78 ಕೋಟಿ ಸಂಭಾವನೆಯನ್ನು ಸಲ್ಮಾನ್ ಖಾನ ಪಡೆಯಲಿದ್ದಾರಂತೆ . ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ​.

 

 

ಇದರ ಲೆಕ್ಕಾಚಾರದ ಪ್ರಕಾರ ಒಂದು ಎಪಿಸೋಡ್ ಗೆ 3 ಕೋಟಿ ಸಂಭಾವನೆಯಾಗಲಿದೆ. ಸಲ್ಮಾನ್​ ‘ರೇಸ್​ 3’ ಚಲನಚಿತ್ರದ ಶೂಟಿಂಗ್ ಗಾಗಿ ಬ್ಯಾಂಕಾಕ್​ಗೆ ಹೋಗುವ ಮೊದಲೇ ಈ ಕಾರ್ಯಕ್ರಮದ ಪ್ರೊಮೊ ಮತ್ತು ಟೀಸರ್​ ಶೂಟಿಂಗ್ ಮುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮದ ಟೀಸರ್​ ಬಿಡುಗಡೆಯಾಗುವ ಸಂಭವ ಇದೆ. ಎಲ್ಲ ಸಲ್ಲು ಅಭಿಮಾನಿಗಳು ಅತಿ ಕಾತುರದಿಂದ ಕಾಯುತ್ತಿದ್ದಾರೆ.

ಈ ಶೋನ ಮೂರನೇ ಮತ್ತು ನಾಲ್ಕನೇ ಸೀಸನ್ ಸಲ್ಮಾನ್ ಖಾನ್ ಅವರೇ ಹೋಸ್ಟ್ ಮಾಡಲಿದ್ದಾರೇ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top