ಮನೋರಂಜನೆ

ರಾಜಕುಮಾರ ನಿರ್ದೇಶಕನಿಗೆ ಇಂದು ಮದುವೆಯ ಸಂಭ್ರಮ!

ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಕಮಾಲ್ ಸೃಷ್ಟಿ ಮಾಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನವೆಂಬರ್ 26ರಂದು ತಮ್ಮ ಫ್ಯಾಮಿಲಿಗೆ ಕ್ಲೋಸ್ ಆಗಿರುವ ಶ್ರೀನಿವಾಸ್ ಹತ್ವಾರ್ ಎಂಬುವವರ ಮಗಳಾದ ಸುರಭಿ ಹತ್ವಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂತೋಷ್ 11.30ರ ಶುಭ ಲಗ್ನದಲ್ಲಿ ಹಸೆಮಣೆಯೇರುತ್ತಿದ್ದಾರೆ.

 

 

ಈಗಾಗಲೇ ನೆನ್ನೆ ರಾತ್ರಿ ಅರಕ್ಷತೆಯ ಕಾರ್ಯಕ್ರಮ ನಡೆಯುತ್ತಿದ್ದು ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಅರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಇಂದು ನಡೆಯುವ ಮದುವೆಗೆ ಚಿತ್ರರಂಗದಿಂದ ಸೆಲೆಬ್ರೆಟಿಗಳ ದಂಡೇ ಆಗಮಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಜೆ.ಪಿ. ನಗರದ ಸಿಂಧೂರ್ ಕನ್ವೆನ್ಷನ್ ಹಾಲ್‌ನಲ್ಲಿ ಮಾಡುವೆ ಸಮಾರಂಭ ನಡೆಯುತ್ತಿದ್ದು ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ.

 

 

ಅಂದಹಾಗೆ ಬಿ.ಇ ಮಾಡಿ ನಂತರ ಎಂ.ಟೆಕ್ ಪದವಿ ಪಡೆದಿರುವ ಸುರಭಿ, ಶ್ರೀನಿವಾಸ್ ಹತ್ವಾರ್ ಮತ್ತು ಭಾವನಾ ಹತ್ವಾರ್ ದಂಪತಿಯ ಏಕೈಕ ಪುತ್ರಿ.. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಎಂಬುವವರನ್ನು ಸಂತೋಷ್ ಆನಂದರಾಮ್ ಕೈಯಿಡಿಯಲಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top