fbpx
ಸಿನಿಮಾ

ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 32 ವರ್ಷ ಪೂರೈಸಿದ ಶಿವಣ್ಣ

ಕನ್ನಡ ಚಿತ್ರರಂಗದ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಹೀರೋ ಶಿವರಾಜ್‌ಕುಮಾರ್‌ ವಯಸ್ಸು 50 ದಾಟಿದರು ಎಲ್ಲ ರೀತಿಯ ಪಾತ್ರಗಳನ್ನು ಅದ್ಭುತವಾಗಿ ಅಭಿನಯ ಮಾಡುವ ಮೂಲಕ ಶಿವಣ್ಣ ಅವರು ಜನರ ಮನಸ್ಸು ಗೆದ್ದಿದ್ದಾರೆ. ತಮ್ಮ ಜೀವನದ ಪ್ರಥಮ ಚಿತ್ರವಾಗಿರುವ ಆನಂದ್ ಚಿತ್ರದ ಮಹೂರ್ತವಾಗಿ ಈಗ 32 ವರ್ಷ ಕಳೆದಿವೆ.

 

 

ತಮ್ಮ ಮೊದಲ ಮೂರೂ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡು ಹ್ಯಾಟ್ರಿಕ್ ಹೀರೋ ಆದರೂ ಶಿವರಾಜ್ ಕುಮಾರ್. ಶಿವಣ್ಣ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಸಿಕರ ಮನಸ್ಸು ಗೆದ್ದಿದ್ದಾರೆ. ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು 32 ವರ್ಷ ಕಳೆದಿರುವ ಈ ಸಂಧರ್ಭದಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ.

 

 

ಆನಂದ್ ಚಿತ್ರದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿರುವ ಶಿವರಾಜ್ ಕುಮಾರ್ ಅಂದಿನಿಂದ ಇಂದಿನ ವರೆಗೆ ನಾನು ವಿದ್ಯಾರ್ಥಿಯಾಗಿ ಕಲಿಯುತ್ತ ಇದ್ದೇನೆ. ಮೊದಲ ಚಿತ್ರದ ಮೊದಲ ಸಿನ್ ಎದುರಿಸಿದಾಗ ನನಗೆ ಇದ್ದ ಭಯ ಈಗಲೂ ಮೊದಲ ಶಾಟ್‌ ಎದುರಿಸುವಾಗಲು ಆಗುತ್ತದೆ. ಆದಕಾರಣದಿಂದ ನನ್ನಲ್ಲಿ ಅಂಥ ಯಾವುದೇ ಬದಲಾವಣೆಗಳು ಆಗಿಲ್ಲ. ಆದರೆ ಅವತ್ತು ನಾನು ಕಾಲೇಜಿಗೆ ಹೊಸ ವಿದ್ಯಾರ್ಥಿ. ಇಂದು ಒಂದೆರೆಡು ಚಾಪ್ಟರ್‌ ಓದಿಕೊಂಡಿದ್ದೇನೆ, ಇನ್ನು ಓದಬೇಕಾದದ್ದು ಬಹಳಷ್ಟಿದೆ ಎಂದರು.

 

 

ಶಿವಣ್ಣ ಮೊದಲ ಚಿತ್ರ ಆನಂದ್ ದಿಂದ ಈ ವಾರ ಬಿಡುಗಡೆ ಆಗಲಿರುವ ಟಗರು ಸಿನಿಮಾದ ವರೆಗೂ ಶಿವಣ್ಣ ಅವರ ಅಭಿನಯದಲ್ಲಿ ಯಾವ ಬದಲಾವಣೆ ಕಂಡಿಲ್ಲ. ಬಣ್ಣ ಹಚ್ಚಲು ಶುರು ಮಾಡಿ 32 ವರ್ಷ ಕಳೆದರು ಶಿವಣ್ಣ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top