ಸಿನಿಮಾ

ಸೂಪರ್ ಸ್ಟಾರ್ ಮಮ್ಮುಟ್ಟಿ ಚಿತ್ರದಲ್ಲಿ ಕಿಚ್ಚ ಸುದೀಪ್ ನಟನೆ ಮಾಡ್ತಾರಾ ,ಇದಕ್ಕೆ ಕಿಚ್ಚನ ಉತ್ತರ ನೋಡಿ

ಸುದೀಪ್! ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕನಟರನ್ನು ಪ್ರತಿನಿಧಿಸುವ ಮುಂಚೂಣಿಯ ನಟ. ತಮ್ಮ ವಿಭಿನ್ನ ಕಂಠ ಮತ್ತು ಅದ್ಭುತ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಕಿಚ್ಚಾ ಸುದೀಪ್ ಈಗಂತೂ ದೇಶ ವಿದೇಶಗಳಲ್ಲಿಯೂ ಸಖತ್ ಫೇಮಸ್. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟ. ಇಂಥ ಸುದೀಪ್’ಗೆ ಮಾರಿ ಹೋಗಿರುವ ಮಲೆಯಾಳಂ ಚಿತ್ರರಂಗದ ಮಂದಿ ಈಗ ಸ್ವತಃ ಅವರ ಚಿತ್ರದಲ್ಲಿ ನಟಿಸಿವಂತೆ ಸುದೀಪ್ ಅವರನ್ನು ಕೇಳಿಕೊಳ್ಳಲಾಗಿದೆಯಂತೆ.

 

 

ಕನ್ನಡದಲ್ಲಿ ಅತ್ಯುತ್ತಮ ನಟನೆಂದು ಪರಿಗಣಿಸಲ್ಪಟ್ಟ ಸುದೀಪ್, ದಕ್ಷಿಣ ಭಾರತೀಯ ಚಿತ್ರೋದ್ಯಮದಲ್ಲೆಲ್ಲಾ ಸಮಾನವಾಗಿ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಈಗ ಚಿತ್ರದ ಮೂಲಕ ದಕ್ಷಿಣದ ಭಾಷೆಗಳ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡ ಸುದೀಪ್ ಅಂದಿನಿಂದಲೂ ಇತರ ಭಾಷೆಗಳ ನಿರ್ಮಾಪಕರ ಗಮನವನ್ನು ಸೆಳೆದಿದ್ದಾರೆ. ಮೊದಲೇ ವರದಿ ಮಾಡಿದಂತೆ, ಈ ವರ್ಷ ಸುದೀಪ್ ಹಾಲಿವುಡ್ ಚಿತ್ರವಾದ ರೈಸನ್ ನಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಅಮಿತಾಬ್ ಬಚ್ಚನ್ ಮತ್ತು ಚಿರಂಜೀವಿಯವರ ಸೈರಾ ರೆಡ್ಡಿ ಚಿತ್ರದಲ್ಲೂ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

ಸುದೀಪ್ ಅವರು ತಮಿಳಿನ ಧನುಷ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟಿಸುತ್ತಾರೆ ಈ ಸಂಭಂದ ಖುದ್ದು ಧನುಷ್ ಅವ್ರೆ ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಹಾಗೊಮ್ಮೆ ಹೀಗೊಮ್ಮೆ ಸುದೀಪ್ ಆ ಚಿತ್ರದಲ್ಲಿ ನಟಿಸುತ್ತಾರಂತೆ, ಈ ಚಿತ್ರದಲ್ಲಿ ನಟಿಸುತ್ತಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿರುತ್ತವೆ. ಈಗ ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಚಾಲ್ತಿಗೆ ಬಂದಿದೆ..

 

 

ಸಂಜೀವ್‌ ಪಿಳ್ಳೈ ನಿರ್ದೇಶನದ ಮಮಂಗಮ್‌ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮಮ್ಮುಟ್ಟಿ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣಕ್ಕೆ ತಯಾರಿ ಭರದಿಂದ ಸಾಗಿದೆ. ಚಿತ್ರದಲ್ಲಿ ನಟಿಸುವಂತೆ ಸುದೀಪ್ ಅವರಿಗೆ ಕರೆ ಬಂದಿದ್ದು ಈ ಸಂಬಂಧ ಸುದೀಪ್‌ ಅವರು ಚಿತ್ರತಂಡ ಹಾಗೂ ಮಮ್ಮುಟ್ಟಿ ಅವರನ್ನು ಕೇರಳದಲ್ಲಿ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಇದೆ, ಜತೆಯಲ್ಲಿ ಸುದೀಪ್‌ ಪತ್ನಿ ಪ್ರಿಯಾ ಅವರೂ ಕೂಡ ಇದ್ದು ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಪ್ರಿಯಾ ಅವರು ಟ್ವಿಟರ್ ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

 

ಈ ಚಿತ್ರ ನೋಡಿದ ಮೇಲೆ ಮಮ್ಮುಟ್ಟಿ ಅವರ ಜೊತೆ ಕಿಚ್ಚ ಸುದೀಪ್ ಹೊಸ ಸಿನಿಮಾ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ಇತ್ತು ಇನ್ನು ಈ ಸುದ್ದಿಯನ್ನು ಅಲ್ಲಗಳಿದಿರುವ ಸುದೀಪ್ ಇದೊಂದು ಮೊದಲೇ ಪ್ಲಾನ್ ಮಾಡಿದ ಭೇಟಿಯಲ್ಲ ನಾವಿಬ್ಬರು ಸಧ್ಯಕ್ಕೆ ಯಾವುದೇ ಸಿನಿಮಾ ಜೊತೆಯಲ್ಲಿ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top