ಮಾಹಿತಿ

ಗೊಂದಲ ಬೇಡ ಜುಲೈನಿಂದ ಮೊಬೈಲ್ ಸಂಖ್ಯೆ 13 ಡಿಜಿಟ್ ಗೆ ಬದಲಾಗುವುದಿಲ್ಲ..

ಜುಲೈ 1ರಿಂದ ಎಲ್ಲಾ ಗ್ರಾಹಕರ ಮೊಬೈಲ್ ಸಂಖ್ಯೆಗಳು 10 ಡಿಜಿಟ್’ನಿಂದ 13 ಡಿಜಿಟ್ ಗೆ ಬದಲಾಗುತ್ತವೆ ಎಂಬ ಗಾಳಿಸುದ್ದಿಗಳಿಗೆ ಗ್ರಾಹಕರು ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಎಲ್ಲಾ ಗ್ರಾಹಕರ ಮೊಬೈಲ್ ಸಂಖ್ಯೆಗಳು ಈಗ ಇರುವಂತೆಯೇ 10 ಅಂಕಿಗಳಾಗಿಯೇ ಮುಂದುವರಿಯುತ್ತದೆ.

 

 

ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ ಎಂಬ ಸುದ್ದಿಯನ್ನು ನೆನ್ನೆ ನೀವು ಓದಿರಬಹುದು ಇದೊಂದು ಸುಳ್ಳು ಸುದ್ದಿಯಾಗಿದ್ದು ಈ ಸುದ್ದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಹಾಗಾಗಿ ಈ ಸುಳ್ಳು ಸುದ್ದಿಯನ್ನು ನಿಮ್ಮ ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ಶೇರ್ ಮಾಡಬೇಡಿ..

 

 

ಹಾಗಿದ್ದರೆ 13 ನಂಬರ್ ಯಾವುದಕ್ಕೆ?
ಟೆಲಿಂಕಾ ಇಲಾಖೆಯ ಈ ಆದೇಶವನ್ನು ಕೇವಲ ಎಂ2ಎಂ ಮೆಷಿನ್ ಟು ಮೆಷಿನ್ ಗಳಿಗೆ ಮಾತ್ರ ಸೀಮಿತವಾಗಿಸಿದೆ.. ಎಂ2ಎಂ ಸಂಖ್ಯೆಗಳು ಮಾಮೂಲಿ ಸಿಮ್ ಗಳಿಗಿಂತ ಗಾತ್ರದಲ್ಲಿ ಬದಲಾವಣೆ ಹೊಂದಿರುತ್ತವೆ. ಸ್ವೈಪಿಂಗ್ ಯಂತ್ರಗಳು, ಕಾರುಗಳು ಮತ್ತು ವಿದ್ಯುತ್ ಮೀಟರ್ ಗಳಲ್ಲಿ ಬಳಸುವ ಸಿಮ್ ಗಳಿಗೆ ನೀಡುವ ನಂಬರ್ ಗಳಾಗಿವೆ. ಮಾಮೂಲಿ ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top