ಮನೋರಂಜನೆ

ನಲಪಾಡ್​ ಹ್ಯಾರಿಸ್ ಪರ ಬ್ಯಾಟ್ ಬೀಸಿದ ಸ್ಯಾಂಡಲ್’ವುಡ್ ಖ್ಯಾತ ನಟಿ.

ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಬಹುಕೋಟಿ ಉದ್ಯಮಿಯ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸ್ನೇಹಿತರರಿಗೆ ನಗರ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ನಿರಾಕರಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದ್ದು ಸ್ಯಾಂಡಲ್’ವುಡ್ ನಟಿಯೊಬ್ಬರು ಶಾಸಕ ಎನ್.ಎ.ಹ್ಯಾರಿಸ್ ಪರ ಬೆಂಬಲಕ್ಕೆ ನಿಂತಿದ್ದಾರೆ.

 

 

ನಟಿ ಸಂಜನಾ ಗರ್ಲಾನಿ ಶಾಂತಿನಗರದ ಶಾಸಕ ಹ್ಯಾರಿಸ್​ ಬಗ್ಗೆ ಮಾಡಿರುವ ಅನುಕಂಪದ ಟ್ವೀಟ್ ಈಗ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಬಹುಕೋಟಿ ಉದ್ಯಮಿಯ ಮಗ ವಿದ್ವತ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಲಪಾಡ್ ಜೈಲು ಸೇರಿದ್ದಾರೆ ಇತ್ತ ಇತ್ತ ನಟಿ ​ಸಂಜನಾ ಟ್ವಿಟರ್​​ನಲ್ಲಿ ಶಾಸಕ ಹ್ಯಾರಿಸ್ ಬ್ಯಾಟ್ ಬೀಸಿದ್ದಾರೆ.

 

 

“ಶಾಂತಿನಗರದ ಶಾಸಕ ಹ್ಯಾರಿಸ್​ ಒಬ್ಬ ಉತ್ತಮ ರಾಜಕಾರಣಿ, ಈ ವಿಷಯದಲ್ಲಿ ಹ್ಯಾರಿಸ್​ರದ್ದು ಯಾವುದೇ ತಪ್ಪಿಲ್ಲದಿದ್ದರೂ, ತಮ್ಮ ಮಗ ಮಾಡಿದ ಗೊಂಡಾಗಿರಿಯ ತಪ್ಪಿಗೆ ಹ್ಯಾರಿಸ್​ ಬೆಲೆ ತೆರುವಂತಾಗಿದೆ, ಸುಮಾರು ಇಪ್ಪತ್ತು ವರ್ಷಗಳಿಂದಲೂ ಕ್ಷೇತ್ರದಾದ್ಯಂತ ಉತ್ತಮ ಕೆಲಸ ಮಾಡುತ್ತಿರುವ ಹ್ಯಾರಿಸ್, ತಮ್ಮ ಮಗ ವಿದ್ವತ್​ ಮೇಲೆ ಹಲ್ಲೆ ನಡೆಸಿದ ಬಳಿಕ ಇಂಥದನ್ನೆಲ್ಲಾ ನೋಡಬೇಕಾಗಿದೆ” ಎಂದು ಸಂಜನಾ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top