ಮನೋರಂಜನೆ

ದಿವಾಕರ್ ಬಾಳಲ್ಲಿ ‘ದೀಪ’ ಬೆಳಗಿದ ಕಿಚ್ಚ: ಆರ್ಥಿಕ ನೆರವು ನೀಡಿ ಸಹಾಯ ಹಸ್ತ ಚಾಚಿದ ಸುದೀಪ್.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಉತ್ತಮ ನಟ ಮಾತ್ರವಲ್ಲ ಅಷ್ಟೇ ಒಳ್ಳೆಯ ಮನಸಿನ ಶ್ರೇಷ್ಠವ್ಯಕ್ತಿ ಕೂಡ ಹೌದು, ದಾನ ಧರ್ಮ ಮಾಡುವುದರಲ್ಲಿ ಸುದೀಪ್ ಎತ್ತಿದ ಕೈ ಚಿತ್ರರಂಗದ ಒಳಗೂ ಹೊರಗೂ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿರುವ ಸುದೀಪ್ ಏನೇ ಸಹಾಯ ಮಾಡಿದರೂ ಎಲ್ಲಿಯೂ ಹೇಳಿಕೊಳ್ಳಿವುದಿಲ್ಲ, ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅಂತ ಹೇಳ್ತಾರಲ್ಲ ಹಾಗೆ., ಈಗ ಅದೇ ರೀತಿ ಬಿಗ್ ಬಾಸ್ ಸೀಸನ್ 5ರನ್ನರ್ ಅವರಿಗೆ ಯಾರಿಗೂ ತಿಳಿಯದ ಹಾಗೆ ಸಹಾಯ ಹಸ್ತ ಚಾಚಿದ್ದಾರೆ.

 

 

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ದಿವಾಕರ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡ ಸುದೀಪ್ ದೊಡ್ಡ ಮೊತ್ತದ ಹಣವನ್ನು ನೀಡಿರುವುದರ ಜೊತೆಗೆ ತಮ್ಮ ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ನೀಡುವುದಾಗಿ ಹೇಳಿದ್ದರಂತೆ.. ಈ ಮಾತುಗಳನ್ನು ಸ್ವತಃ ದಿವಾಕರ್ ಅವರೇ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಸುದೀಪ್‌ರ ಔದಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ..

 

 

” ಬಿಗ್’ಬಾಸ್ ಮನೆಯಿಂದ ಹೊರಬಂದ ನಂತರ ದಿವಾಕರ್’ಗೆ ಯಾರೂ ಸಹಾಯ ಮಾಡಿಲ್ಲ ಅಂತಾ ಕೆಲವು ಜನ ಮಾತನಾಡಿಕೊಂಡಿದ್ದಾರೆ, ಅದು ಸುಳ್ಳು.ಸುದೀಪ್ ಸರ್ ನನ್ನನ್ನು ಪ್ರೀತಿಯಿಂದ ಮನೆಗೆ ಕರೆಸಿಕೊಂಡು ನನಗೆ ಒಂದು ಅಮೌಂಟ್ ಕೊಟ್ಟು ಸಹಾಯ ಮಾಡಿದ್ದಾರೆ. ಆದರೆ ಅವರು ಪಬ್ಲಿಸಿಟಿ ಇಷ್ಟ ಪಡಲ್ಲ ಹಾಗಾಗಿ ಈ ವಿಷಯ ಯಾರಿಗೂ ಗೊತ್ತಿಲ್ಲ.. ತುಂಬಾ ಪ್ರೀತಿಯಿಂದ ನನ್ನನ್ನು ಮಾತನಾಡಿಸಿದರು ಅವರ ಪತ್ನಿ ಕೂಡ ಅಷ್ಟೇ ಪ್ರೀತಿಯಿಂದ ಮಾತನಾಡಿಸಿದ್ರು, ನನಗೆ ಸಹಾಯ ಮಾಡಿದ್ದಕ್ಕೆ ಸುದೀಪ್ ಸರ್ ಹಾಗೂ ಅವರ ಕುಟುಂಬಕ್ಕೆ ನಾನು ಯಾವಾಗಲೂ ಚಿರಋಣಿ.”

” ನನ್ನನ್ನು ಅವರ ಸ್ವಂತ ತಮ್ನನ ರೀತಿ ಮನೆಗೆ ಕರೆಸಿ ಒಂದು ಅಮೌಂಟ್ ನೀಡುವುದರ ಜೊತೆಗೆ ಚಿತ್ರಗಳಲ್ಲೂ ಅವಕಾಶ ಕೊಡಿಸೋದಾಗಿ ಭರವಸೆ ಕೊಟ್ಟರು,,ಸುದೀಪ್ ಸರ್ ಕೊಟ್ಟ ಈ ಹಣದಿಂದಲೇ ನಾನು ಮನೆಯನ್ನು ಕಟ್ಟಿಕೊಳ್ಳಲು ಯೋಚಿಸಿದ್ದೇನೆ. ಸುದೀಪ್ ಸರ್ ತಮ್ಮ ಸುತ್ತಲಿನ ಪ್ರತಿ ವ್ಯಕ್ತಿಗಳನ್ನು ಒಂದೇ ರೀತಿ ಕಾಣುತ್ತಾರೆ. ಸುದೀಪ್ ಸರ್ ನಿಜಕ್ಕೂ ಒಂದು ಅದ್ಭುತ ಅವರನ್ನ ವರ್ಣನೆ ಮಾಡೋದಕ್ಕೆ ಪದಗಳೇ ಸಿಗೋದಿಲ್ಲ” ಅಂತೆಲ್ಲಾ ದಿವಾಕರ್ ಸುದೀಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

 

 

ಹಾಗೆ ನೋಡಿದರೆ ಕಳೆದ ಬಾರಿಯ ಬಿಗ್ ಬಾಸ್ ಸೀಸನ್’ನಲ್ಲಿ ರನ್ನರ್ ಆಗಿದ್ದ ಕಿರಿಕ್ ಕೀರ್ತಿ ಅವರಿಗೂ ಕೂಡ ಹತ್ತು ಲಕ್ಷ ರೂಪಾಯಿಗಳನ್ನು ನೀಡುವುದರ ಮೂಲಕ ಎಲ್ಲರ ಮನಸ್ಸನ್ನು ಕಿಚ್ಚ ಸುದೀಪ್ ಗೆದ್ದಿದ್ದರು.,ಸದಾ ಒಂದಿಲ್ಲೊಂದು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವ ಸುದೀಪ್’ರ ಈ ರೀತಿಯ ಎಷ್ಟೋ ಕಾರ್ಯಗಳು ಅವರು ಪ್ರಚಾರ ಇಷ್ಟ ಪಡದ ಕಾರಣ ಬೆಳಕಿಗೆ ಬಂದಿರುವುದಿಲ್ಲ, ತಮ್ಮ ಸುತ್ತಮುತ್ತಲಿನವರೂ ಚನ್ನಗಿರಬೇಕು ಎಂಬ ಇಂಥ ಶ್ರೇಷ್ಠ ಗುಣವನ್ನು ಮೈಗೂಡಿಸಿಕೊಂಡಿರುವ ಸುದೀಪ್ ಅವರ ಈ ಇಂಥ ಕೆಲಸಗಳನ್ನು ಪ್ರತಿಯೊಬ್ಬರು ಮೆಚ್ಚಲೇಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top