ಮನೋರಂಜನೆ

ಟಗರು ಸಿನಿಮಾ ನೋಡೋಕೆ ಬರೋ ಪ್ರೇಕ್ಷಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣ ಅಭಿಮಾನಿಗಳು.

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಬಹು ನಿರೀಕ್ಷಿತ ಚಿತ್ರ ಟಗರು. ಈಗಾಗಲೇ ಹಾಡುಗಳು ಮತ್ತು ಟೀಸರ್ ನಿಂದ ಹೆಚ್ಚು ಕುತೂಹಲ ಮಾಡಿರೋ ಟಗರು ಚಿತ್ರ ನಾಳೆ (ಫೆಬ್ರವರಿ 23)ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.. ಸದ್ಯ ಗಾಂಧಿನಗರದಲ್ಲಿ ಟಗರು ಚಿತ್ರದ ಹವಾ ಜೋರಾಗಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ವಿದೇಶದ ಸಿನಿರಸಿಕರು ಟಗರು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ

 

 

ಈ ಮಧ್ಯೆ ಶಿವಣ್ಣ ಪಕ್ಕ ಅಭಿಮಾನಿಗಳು ಸಿನಿಮಾ ನೋಡೋಕೆ ಬರುವ ಪ್ರೇಕ್ಷಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.,, ಟಗರು ಚಿತ್ರ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗಗಳಲ್ಲೂ ಟಾಕ್ ಕ್ರಿಯೇಟ್ ಮಾಡಿರೋದ್ರಿಂದ ಸಾಮಾನ್ಯವಾಗಿ ಚಿತ್ರ ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ, ಇತ್ತೀಚಿಗೆ ಈ ರೀತಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಚಿತ್ರಗಳಿಗೆ ಫೇಸ್ಬುಕ್ ಲೈವ್ ಎಂಬ ಬೂತ ಕಾಡಿತ್ತು(ಹೆಬ್ಬುಲಿ,ಚಕ್ರವರ್ತಿ,ಭರ್ಜರಿ, ತಾರಕ್) ಹಾಗಾಗಿ ಟಗರು ಚಿತ್ರಕ್ಕೆ ಈ ರೀತಿಯ ಸಮಸ್ಯೆ ಎದುರಾಗಬಾರದು ಎಂದು ಸಿನಿಮಾ ನೋಡೋಕೆ ಬರುವ ಜನರಿಗೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆಯ ಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಒಂದು ವೇಳೆ ವಿಡಿಯೋ ಮಾಡುವುದಾಗಲಿ ಅಥವಾ ಫೇಸ್ಬುಕ್ ಲೈವ್ ಮಾಡುವುದಾಗಲಿ ಕಂಡು ಬಂದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಚಿತ್ರ ಬಿಡುಗಡೆಯಾಗುವ ದಿನ ಶಿವಣ್ಣನ ಅಭಿಮಾನಿ ಸಂಘದ ಸದಸ್ಯರು ಟಗರು ರಿಲೀಸ್ ಆಗಿರುವ ತಮ್ಮ ಸ್ಥಳೀಯ ಥಿಯೇಟರ್ ಗಳಿಗೆ ಭೇಟಿ ನೀಡಿ ಮೊಬೈಲ್ ನಲ್ಲಿ ವಿಡಿಯೋಗಳನ್ನ ತೆಗೆಯದಂತೆ ಪೈರಸಿ ಕಾಟ ಚಿತ್ರಕ್ಕೆ ತಾಗದಂತೆ ಕಾಪಾಡಲು ನಿರ್ಧರಿಸಿದ್ದಾರೆ.

 

 

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿರುವ ಟಗರು ಚಿತ್ರದಲ್ಲಿ ವಿಲನ್‌ಗಳಾಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ ಮಾನ್ವಿತಾ ಮತ್ತು ಭಾವನಾ ಶಿವರಾಜಕುಮಾರ್’ಗೆ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋಗಳು, ಟೀಸರ್ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top