ತಿಂಡಿ ತೀರ್ಥ

ಚಳಿಗೆ ಬಿಸಿ ಬಿಸಿ ಗರಿಗರಿ ಆಲೂ ಟಿಕ್ಕಿ ಮಾಡ್ಕೊಂಡು ತಿನ್ನಿ

ಆಲೂ ಟಿಕ್ಕಿ:

 

ಬೇಕಾಗುವ ಪದಾರ್ಥ :

6 ಆಲೂಗೆಡ್ಡೆ
ಚೆನ್ನಾಗಿ ಕತ್ತರಿಸಿಕೊಂಡ ಪುದಿನ 1 ಚಮಚ
ಚೆನ್ನಾಗಿ ಕತ್ತರಿಸಿಕೊಂಡ ಹಸಿ ಮೆಣಸಿನಕಾಯಿ 2
ಕೆಂಪು ಮೆಣಸಿನಕಾಯಿ 2
ಕಪ್ಪು ಮೆಣಸಿನ ಪುಡಿ 2 ಚಮಚ
ಅಕ್ಕಿ ಹಿಟ್ಟು 4 ಚಮಚ
ಎಣ್ಣೆ
ಉಪ್ಪು

ಮಾಡುವ ವಿಧಾನ :

 

 

6 ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಸಿಪ್ಪೆ ತೆಗೆದು ಇಟ್ಟುಕೊಳ್ಳಿ ನಂತರ ಅದಕ್ಕೆ ಚೆನ್ನಾಗಿ ಕತ್ತರಿಸಿಕೊಂಡ ಪುದಿನ 1 ಚಮಚ ,ಚೆನ್ನಾಗಿ ಕತ್ತರಿಸಿಕೊಂಡ ಹಸಿ ಮೆಣಸಿನಕಾಯಿ 2 ,ಕೆಂಪು ಮೆಣಸಿನಕಾಯಿ 2 ,ಕಪ್ಪು ಮೆಣಸಿನ ಪುಡಿ 2 ಚಮಚ ,
ಅಕ್ಕಿ ಇಟ್ಟು 4 ಚಮಚ ಮತ್ತು ರುಚಿಗೇ ಬೇಕಾದ ಉಪ್ಪು ಹಾಕಿ ಚೆನ್ನಾಗಿ ಕಲಸಿಟ್ಟು 30 ನಿಮಿಷ ಬಿಡಿ,ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಯನ್ನು ಬಿಸಿ ಮಾಡಿಕೊಳ್ಳಿ

ಅಷ್ಟರಲ್ಲಿ ಕಲಸಿಟ್ಟ ಆ ಆಲೂ ಮಿಶ್ರಣವನ್ನು ಚಿಕ್ಕ ಚಿಕ್ಕ ಚಪ್ಪಟೆ ಆಕಾರದಲ್ಲಿ ಮಾಡಿ,ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಚಪ್ಪಟೆ ಆಕಾರದಲ್ಲಿ ಮಾಡಿಟ್ಟುಕೊಂಡ ಆಲೂ ಮಿಶ್ರಣವನ್ನು ಕರಿದುಕೊಳ್ಳಬೇಕು.

ಇದನ್ನು ಟೊಮೊಟೊ ಸಾಸ್ ಜೊತೆ ಸವಿಯಲು ರುಚಿಕರವಾಗಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top