ತಿಂಡಿ ತೀರ್ಥ

ಕಡಲೆಬೇಳೆ-ತೊಗರಿಬೇಳೆ ಹೋಳಿಗೆ

ಕಡಲೆಬೇಳೆ-ತೊಗರಿಬೇಳೆ ಹೋಳಿಗೆ

ಸಾಮಗ್ರಿ:

ಮೈದಾಹಿಟ್ಟು-2 ಕಪ್,

ಚಿರೋಟಿ ರವೆ 2 ಕಪ್,

ಕಡ್ಲೆಬೇಳೆ-2 ಕಪ್,

ತೊಗರಿಬೇಳೆ-2 ಕಪ್,

ಬೆಲ್ಲ-4 ಅಚ್ಚು,

ತೆಂಗಿನಕಾಯಿ-1.

ಅರಿಶಿನ-1/2 ಚಮಚ,

ಏಲಕ್ಕಿ ಪುಡಿ-1/2 ಚಮಚ,

ಎಣ್ಣೆ-1 ಕಪ್.

Related image

ವಿಧಾನ:

ಮೈದಾಹಿಟ್ಟು, ಚಿರೋಟಿ ರವೆಗೆ ಅರಿಶಿನ, ನೀರು, ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಕಣಕ ರೆಡಿಮಾಡಿಟ್ಟುಕೊಳ್ಳಿ. ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿಟ್ಟು ನಂತರ ಬೇಯಿಸಿ. ಅರ್ಧ ಬೆಂದ ನಂತರ ತೊಳೆದ ತೊಗರಿಬೇಳೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ಬೆಂದ ನಂತರ ಕಟ್ಟನ್ನು ಬಸಿದು ಬೆಲ್ಲ, ತೆಂಗಿನತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕದಕಿ. ಗಟ್ಟಿಯಾದ ನಂತರ ಇಳಿಸಿ ಸ್ವಲ್ಪ ಬಿಸಿಯಿರುವಾಗಲೇ ಹೂರಣವನ್ನು ರುಬ್ಬಿಕೊಳ್ಳಿ. ನಂತರ ಉಂಡೆ ಮಾಡಿಕೊಂಡು ಕಣಕಕ್ಕೆ ತುಂಬಿ ಬಾಳೆ ಎಲೆ ಅಥವಾ ಕವರ್ ಮೇಲೆ ಹೋಳಿಗೆ ಲಟ್ಟಿಸಿ ಎರಡೂ ಕಡೆ ಸಣ್ಣ ಉರಿಯಲ್ಲಿ ಬೇಯಿಸಿ ತುಪ್ಪದೊಂದಿಗೆ ಸವಿಯಿರಿ.

Related image

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top