ವಿಶೇಷ

ಇಲ್ಲಿ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ. ಇದು  ನಂಬಲು ಕಷ್ಟವಾದರೂ ,ವಿಚಿತ್ರವಾದರೂ ಸಹ ಸತ್ಯ .

ಇಲ್ಲಿ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ. ಇದು  ನಂಬಲು ಕಷ್ಟವಾದರೂ ,ವಿಚಿತ್ರವಾದರೂ ಸಹ ಸತ್ಯ .

 

ವಿವರಿಸಲಾಗದ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವ ಪ್ರಕೃತಿಯು ನಮಗೆ ಆಶ್ಚರ್ಯವಾಗಿದೆ ಎಂದು ಅನಿಸುತ್ತದೆ. ಒಂದು ಕಡೆ ಬಿದ್ದಿರುವ ಕಲ್ಲು ತನ್ನಷ್ಟಕ್ಕೇ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿ ಇರಬೇಕು ಅಷ್ಟೇ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯವನ್ನು ಉಂಟುಮಾಡುತ್ತದೆ.

 

 

ಹೌದು ಡೆತ್ ಕಣಿವೆಯಲ್ಲಿರುವ  ಕಲ್ಲುಗಳು ತಮ್ಮದೇ ಆದ ನೌಕಾಯಾನವನ್ನು ನಡೆಸುತ್ತವೆ. ಈ ಕುರಿತು ಹಲವಾರು  ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ನೀಡಲಾಗುತ್ತಿದೆ . ಆದರೆ ಅವು ಯಾವುವೂ ನಿಜವಾದ ತರ್ಕವನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಹಾಗಾದರೆ ಈ ಡೆತ್ ವ್ಯಾಲಿ ಎಂದರೆ ಏನು? ಈ ಪ್ರದೇಶದ ವಿಚಾರವನ್ನು ಕೇಳಿದರೆ ಯಾಕೆ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಾರೆ ? ಇಲ್ಲಿನ ನಿಗೂಢ ರಹಸ್ಯವೇನು ? ಇವುಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ

ನಿಮಗೂ ಕುತೂಹಲ ಹಾಗೂ ಕಾತುರ ಉಂಟಾಗುತ್ತಿದೆಯೇ ? ಹಾಗಾದರೆ ಬನ್ನಿ ಕೇಳಿ ಡೆತ್ ವ್ಯಾಲಿ ಎನ್ನುವುದು ಒಂದು ಮರುಭೂಮಿಯ ಪ್ರದೇಶ. ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೆ.ಇದನ್ನು ಡೆತ್ ವ್ಯಾಲಿ ಅಥವಾ ಅತ್ಯಂತ ಬಿಸಿ ಅಥವಾ  ಅತಿ ಹೆಚ್ಚು ತಾಪಮಾನ ಇರುವ ಪ್ರದೇಶ ಎಂದು ಹೇಳಲಾಗುತ್ತದೆ. ಈ ಪ್ರದೇಶವು ಸುಮಾರು ಒಂದು ಶತಮಾನಗಳಷ್ಟು  ಹಿಂದಿನ ರಹಸ್ಯ  ಕತೆಯನ್ನು ಒಳಗೊಂಡಿದೆ.

ಈ ಪ್ರದೇಶದಲ್ಲಿರುವ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ . ಆ ಕಲ್ಲನ್ನು ನೋಡುತ್ತಿರುವಾಗ ಅದು ಚಲಿಸುವುದಿಲ್ಲ. ಯಾರೂ ಇಲ್ಲದ ಸಮಯದಲ್ಲಿ ಅವು ಚಲಿಸುತ್ತವೆ ಎಂದು ಹೇಳಲಾಗುವುದು. ಕಲ್ಲುಗಳು ಚಲಿಸುವ ಸ್ಥಳವನ್ನು ರೆಟ್ರ್ಯಾಕ್ ಪ್ಲಾಯಾ ಎಂದು ಕರೆಯುತ್ತಾರೆ. ಇದನ್ನು ತೇಲುವ ಕಲ್ಲುಗಳಿಗೆ ಹೆಸರಾದ ಓಣ ಸ್ಥಳ ಎಂದು ಕರೆಯುತ್ತಾರೆ. ಈ ಸ್ಥಳದ  ಒಣ ನೆಲದ ಮೇಲೆ ಕಲ್ಲುಗಳು ಸಾಗಿರುವ  ಗುರುತನ್ನು ಕಾಣಬಹುದು. ಯಾವ ಮಾರ್ಗವಾಗಿ ಹೋಗಿದೆ ಎನ್ನುವುದನ್ನು ಸಹ ನಮಗೆ ಅದು ಕಾಣಿಸುತ್ತದೆ. ಈ ಕಲ್ಲನ್ನು ಚಲಿಸಲು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಯ ಬಲವನ್ನು ಬಳಸುವುದಿಲ್ಲ. ಈ ಕೆಲಸವೂ ತಾನಾಗಿಯೇ ನೈಸರ್ಗಿಕವಾಗಿ ನಡೆಯುತ್ತದೆ .

 

 

 

ಯಾರಾದರೂ ನೋಡುವಾಗ ಈ ಕಲ್ಲುಗಳು ಚಲಿಸುವುದಿಲ್ಲ ಎಂದು ಹೇಳಲಾಗುತ್ತದೆ.  ಇದು ನಿಜಕ್ಕೂ ಒಂದು ಆಶ್ಚರ್ಯಕಾರಿ ಸಂಗತಿಯಾಗಿದೆ. ಇನ್ನೊಂದು ವಿಚಾರವೆಂದರೆ ಇಲ್ಲಿ ಇರುವ ಎಲ್ಲಾ ಕಲ್ಲುಗಳು ಚಲಿಸುವುದಿಲ್ಲ. ಕೆಲವು ಕಣ್ಣುಗಳು ಮಾತ್ರ ಮುಂದೆ ಸಾಗುತ್ತವೆ ಎಂದು ಪರೀಕ್ಷೆ ಮಾಡಲಾಗಿದೆ . ಚಲಿಸುವ ಕಲ್ಲುಗಳು ಸುಮಾರು ಎರಡರಿಂದ ಮೂರು  ವರ್ಷಗಳಿಗೊಮ್ಮೆ ಚಲಿಸುತ್ತದೆ. ಅಲ್ಲದೆ ಎಲ್ಲಾ ಕಲ್ಲುಗಳು ಒಂದೇ ಮಾರ್ಗದಲ್ಲಿ ಚಲಿಸುವುದಿಲ್ಲ. ಈ ಕಲ್ಲುಗಳು ಕಾಂತಿಯ ಪರಿಣಾಮದಿಂದ ಚಲಿಸುತ್ತವೆ ಎಂದು ನಂಬಲಾಗಿದೆ.

ಇನ್ನು ಈ ಸ್ಥಳದಲ್ಲಿ ನಡೆಯುವ ಇಂತಹ ಅಪರೂಪದ  ವಿದ್ಯಮಾನದ ಬಗ್ಗೆ ಹಲವಾರು ಸಿದ್ಧಾಂತಗಳಿವೆ ಡೆತ್ ವ್ಯಾಲಿಯಲ್ಲಿ ಬಲವಾದ ಗಾಳಿ ಬೀಸುತ್ತದೆ. ಆದ್ದರಿಂದಲೇ ಕಲ್ಲುಗಳು ಚಲಿಸುತ್ತವೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ ಗಾಳಿಗೆ ಚಲಿಸುವುದಾದರೆ ಕಲ್ಲು ಮಾತ್ರ ಏಕೆ ಚಲಿಸುತ್ತದೆ ಎನ್ನುವುದು ಇನ್ನೊಂದು ಯಕ್ಷ ಪ್ರಶ್ನೆಯಾಗಿದೆ . ಕೆಲವು ಸಿದ್ಧಾಂತಗಳು ಮತ್ತು ಸಂಶೋಧನೆಗಳು ಗಾಳಿ ಮತ್ತು ಉಷ್ಣತೆಯ ಸಂಯೋಗದಿಂದ  ಈ ವಿದ್ಯಮಾನ ಉಂಟಾಗುತ್ತದೆ ಎಂದು ಹೇಳುತ್ತಾರೆ.

 

ಈ ತೇಲುವ ಕಲ್ಲುಗಳು ಮಣ್ಣಿನ ಮೇಲ್ಮೈ ಗಳಲ್ಲಿ ಅಂಕು ಡೊಂಕಾದ  ಹಾದಿಯನ್ನು ಉಂಟು  ಮಾಡಿರುತ್ತದೆ. ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕಾದರೆ ವರ್ಷಗಟ್ಟಲೆ ಅಲ್ಲಿಯೇ ಕುಳಿತು ಅಧ್ಯಯನ ನಡೆಸಬೇಕಷ್ಟೇ, ಆದರೆ ಇಂತಹ ಒಂದು ಪ್ರಯತ್ನವನ್ನು ಇದುವರೆಗೂ ಯಾರೂ ಸಹ ಮಾಡಿಲ್ಲ. ಹಾಗಾಗಿ ಇದು ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ. ಒಟ್ಟಿನಲ್ಲಿ ಅದು ಏನೇ ಆಗಿರಲಿ, ಇಲ್ಲಿ ಕಲ್ಲುಗಳು ನೌಕಾಯಾನ ಮಾಡುವುದಂತೂ ನಿಜ ಎಂದು ಕೆಲವರು ಹೇಳುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top