fbpx
ಸಿನಿಮಾ

ಡೈಲಾಗ್ ವಿವಾದ ರೊಚ್ಚಿಗೆದ್ದ ಶಿವಣ್ಣನ ಫ್ಯಾನ್ಸ್ ಕ್ಷಮೆ ಕೇಳಿದ ಡಾಲಿ ಧನಂಜಯ

ಸೂರಿ ಮತ್ತು ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ `ಟಗರು’ ಭರಪೂರ ಆರ್ಭಟದೊಂದಿಗೇ ಥೇಟರಿಗೆ ಲಗ್ಗೆಯಿಟ್ಟಿದೆ. ಈ ಚಿತ್ರ ಹಂತ ಹಂತವಾಗಿ ಕುತೂಹಲದ ಜ್ವರವೇರಿಸಿಕೊಂಡು ಸಾಗಿ ಬಂದಿತ್ತಲ್ಲಾ? ಅದರಿಂದಾಗಿಯೇ ಹುಟ್ಟಿಕೊಂಡಿದ್ದ ಅಗಾಧ ನಿರೀಕ್ಷೆಗಳೆಲ್ಲವೂ ಪ್ರೇಕ್ಷಕರ ಶಿಳ್ಳೆ, ಕೇಕೆ ಮತ್ತು ತೃಪ್ತಿಯ ಮಂದಹಾಸದ ಮೂಲಕ ಸಾರ್ಥಕ್ಯ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಟಗರಿನ ಪೊಗರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ!

 

 

ಸಾದಾ ಸೀದಾ ಕಥೆಯೊಂದನ್ನು ಪಳಗಿಸಿಕೊಂಡು ಪಾಂಗಿತವಾಗಿ ದೃಷ್ಯ ಕಟ್ಟುವ ಅಪರೂಪದ ಮಂತ್ರದಂಡವೊಂದರ ಮಾಲೀಕನಂತೆ ಅಚ್ಚರಿ ಹುಟ್ಟಿಸುವವರು ದುನಿಯಾ ಸೂರಿ. ಮಳೆ ಸುರಿಸಿಯೂ ಬಿಸಿಯೇರಿಸುವ, ರಾ ಸೀನುಗಳಲ್ಲೂ ಕಣ್ಣಾಲಿಗಳನ್ನು ತೇವಗೊಳಿಸುವ, ನೆತ್ತರನ್ನೂ ಕಾವ್ಯವಾಗಿಸೋದು ಸೂರಿ ಟ್ರೇಡ್ ಮಾರ್ಕು. ಅದೆಲ್ಲವುಗಳ ಸಂಗಮದಂತೆ ಮೂಡಿ ಬಂದಿರೋ ಚೇತೋಹಾರಿ ಚಿತ್ರ ಟಗರು.

ಟಗರು ಚಿತ್ರವನ್ನು ಇಷ್ಟು ಚನ್ನಾಗಿ ತೆರೆಗೆ ತಂದಿದ್ದರೂ ಶಿವಣ್ಣನ ಕಟ್ಟಾ ಅಭಿಮಾನಿಗಳು ನಿರ್ದೇಶಕ ಸೂರಿ ಮೇಲೆ ಕೊಂಚ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಸಂಭಾಷಣೆಯಲ್ಲಿ ಎಡವಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

 

 

ಟಗರು ಚಿತ್ರದಲ್ಲಿ ಶಿವಣ್ಣನ ಪಾತ್ರಕ್ಕೆ ವಿಲನ್ ಪಾತ್ರದಾರಿಗಳಾದ ಧನಂಜಯ ಹಾಗೂ ವಸಿಷ್ಠ ತೀರಾ ಅವ್ಯಾಚ ಪದಗಳಿಂದ ಬಯ್ಯುವ ದೃಶ್ಯಗಳಿದ್ದು ಅಲ್ಲಿ ಬಳಸುವ ಪದಗಳಿಗೆ ಬಿಪ್ ಸೌಂಡ್ ಹಾಕಬಹುದಾಗಿತ್ತು ಆದರೆ ನಿರ್ದೇಶಕ ಸೂರಿ ಹಾಗೆ ಮಾಡಿಲ್ಲ.. ಇದು ಸಿನಿಮಾನೇ ಆಗಿದ್ದರು ಅದು ಪಾತ್ರವೇ ಆಗಿದ್ದರೂ ಶಿವಣ್ಣನನ್ನು ದೇವರಂತೆ ಆರಾಧಿಸುವ ನಮ್ಮಂತ ಕಟ್ಟಾರ್ ಅಭಿಮಾನಿಗಳ ಮನಸಿಗೆ ಬೇಸರವಾಗುತ್ತಿದೆ ಎನ್ನುವುದು ಅಭಿಮಾನಿಗಳ ಬಿನ್ನಹ..

 

ವಿವಾದದ ಬಗ್ಗೆ ಡಾಲಿ ಧನಂಜಯ ಹೇಳಿದ್ದು ಹೀಗೆ

 

ಈ ಚಿತ್ರದಲ್ಲಿ ಬರುವ ಕೆಲವು ಡೈಲಾಗುಗಳು ಆ ಚಿತ್ರಕ್ಕೆ ಮಾತ್ರ ಸೀಮಿತ ನನ್ನ ಪಾತ್ರದ ಹೆಸರು ಡಾಲಿ ಈ ಚಿತ್ರದಲ್ಲಿ ಬರುವ ಕೆಲವು ಡೈಲಾಗುಗಳು ಡಾಲಿ ಹಾಗೂ ಟಗರು ಶಿವನ ನಡುವಿನ ಡೈಲಾಗುಗಳರುತ್ತವೆ ಇಲ್ಲಿ ನಾವು ಶಿವಣ್ಣನಿಗೆ ವೈಯಕ್ತಿಕವಾಗಿ ಏನನ್ನು ನಾವು ಬೈದಿಲ್ಲ .

 

 

ಈ ಸಂಪೂರ್ಣ ಚಿತ್ರವನ್ನು ನಾವು ತುಂಬಾ ಇನ್ವಾಲ್ಮೆಂಟ್ ನಿಂದ ಮಾಡಿದ್ದೇವೆ , ನನ್ನ ಪಾತ್ರಕ್ಕೆ ಯಾವ ರೀತಿಯ ಡೈಲಾಗುಗಳು ಬೇಕು ಎಂದು ನಿರ್ದೇಶಕರು ಆದೇಶಿಸಿದ್ದರೊ ಅದೇ ರೀತಿ ನಾನು ಮಾಡಲು ನೂರರಷ್ಟು ಶ್ರಮ ಪಟ್ಟಿದ್ದೇನೆ , ಶಿವಣ್ಣ ಸಹ ನಾವು ಅಭಿನಯಿಸುವಾಗ ನಮಗೆ ಬೇಕಾದ ಎಲ್ಲಾ ಪ್ರೋತ್ಸಾಹ , ಧೈರ್ಯವನ್ನು ತುಂಬಲು ಸಾಕಷ್ಟು ಕಷ್ಟಪಟ್ಟಿದ್ದಾರೆ .

ಇದು ಕೇವಲ ಸಿನಿಮಾ ಅಷ್ಟೇ ಇಲ್ಲಿರುವ ಪಾತ್ರಧಾರಿಗಳು ಕೇವಲ ಕಾಲ್ಪನಿಕ ಸಿನಿಮಾವನ್ನು ಪ್ರೀತಿಸೋಣ ಹಾಗೂ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯೋಣ ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹ ಬಹಳ ಅಗತ್ಯ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ

ಶಿವಣ್ಣನ ಪ್ರತಿಕ್ರಿಯೆ ಹೀಗಿತ್ತು

ಈ ಕುರಿತು ಸಂತೋಷ್ ಥಿಯೇಟರ್’ನಲ್ಲಿ ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ರು. “ನಾನ್ ವಿಲನ್ ಗಳಿಗೆ ಬೈದಾಗ, ಹೊಡೆದಾಗ ನೀವು ಸಿಳ್ಳೆ,ಚಪ್ಪಾಳೆ ಹೊಡಿತೀರಾ. ಅದೇ ನನಗೆ ವಿಲನ್’ಗಳು ಬೈದಾಗ ಬೈದಾಗ ಯಾಕೆ ಸಹಿಸಲ್ಲ.. ಇದು ಸಿನಿಮಾ ಅಷ್ಟೇ, ಇಂಥ ರಿಯಲಿಸ್ಟಿಕ್ ಸಿನಿಮಾಗಳಲ್ಲಿ ಈ ರೀತಿಯ ಡೈಲಾಗ್ ಇರಬೇಕು ಆಗಲೇ ಅದು ರಿಯಲಿಸ್ಟಿಕ್ ಸಿನಿಮಾ ಆಗೋದು,, ಇವೆಲ್ಲಾ ಪಾತ್ರಗಳಷ್ಟೇ ಸಿನಿಮಾವನ್ನು ಸಿನಿಮಾ ರೀತಿ ನೋಡಿ ” ಎಂದು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top