fbpx
ಸಮಾಚಾರ

ಮಾಧ್ಯಮಗಳ ಮೇಲೆ ದಬ್ಬಾಳಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!

ಹ್ಯಾರಿಸ್ ಪುತ್ರ ನಲಪಾಡ್, ಪೆಟ್ರೋಲ್ ನಾರಾಯಣನ ದಬ್ಬಾಳಿಕೆಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗನ್ ಮ್ಯಾನ್’ಗಳು ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ.

 

 

ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದ ವಿಷಯವನ್ನು ಪ್ರಸ್ತಾಪಿಸಿ ಪತ್ರಕರ್ತರೊಬ್ಬರು ವಿಧಾನಸೌಧದಲ್ಲಿ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳಲು ಮುಂದಾದರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಗನ್ ಮ್ಯಾನ್ ಕೋಪಗೊಂಡು ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತರನ್ನು ತಳ್ಳಿದ್ದಾರೆ.

ಪತ್ರಕತ್ರ ಕೆಳಗಡೆ ಬಿದ್ದರೂ ಸೌಜನ್ಯಕ್ಕೂ ಪತ್ರಕರ್ತನನ್ನ ನೋಡದ ಸಿಎಂ ಸಿದ್ದರಾಮಯ್ಯ “ಮೈಮೇಲೆ ಬೀಳೋಕೆ ಬರುವ ಇಂತವರನ್ನು ತಳ್ಳದೇ ಇನ್ನೇನು ಮಾಡಬೇಕು, ಬಿಡ್ರಯ್ಯ ಬಿಡ್ರಯ್ಯ ಎಂದು ಗನ್ ಮ್ಯಾನ್‍ಗೆ ಹೇಳಿ ಮುಂದಕ್ಕೆ ಹೋಗಿದ್ದಾರೆ.” ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಡೋಕೆ ಆಗದವರು ಮಾದ್ಯಮದವರ ಮೇಲೆ ದರ್ಪ ಮಾಡುತ್ತಿರುವುದು ನಿಜಕ್ಕೂ ಖಂಡನೀಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top