fbpx
ಮನೋರಂಜನೆ

ಶ್ರೀದೇವಿ ನನ್ನ ತಂದೆಯ ಹೆಂಡತಿಯಷ್ಟೇ ಹೊರತು ನನ್ನ ತಾಯಿಯಲ್ಲ ಎಂದು ಹೇಳಿದ್ದ ಮಲಮಗ ಅರ್ಜುನ್ ಕಪೂರ್ ಆಕೆಯ ಅಂತ್ಯಕ್ರಿಯೆ ಮಾಡ್ತಾರಾ?

ನಟಿ ಶ್ರೀದೇವಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ದುಬೈ ಪೊಲೀಸರು ಕೊನೆಗೂ ಅನುಮತಿ ನೀಡಿದ್ದು ಇಂದು ರಾತ್ರಿ 9 ಗಂಟೆಯ ಹೊತ್ತಿಗೆ ಶ್ರೀ ದೇವಿ ಪಾರ್ಥಿವ ಶರೀರವು ಭಾರತಕ್ಕೆ ಆಗಮಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಶ್ರೀದೇವಿ ಅವರ ಮೃತದೇಹ ಕೆಡದಂತೆ ಶರೀರಕ್ಕೆ ರಾಸಾಯನಿಕ ಲೇಪನವನ್ನೂ ಮಾಡಲಾಗಿದೆ. ಪಾರ್ಥಿವ ಶರೀರದ ಜೊತೆಯಲ್ಲಿ, ಬೋನಿ ಕಪೂರ್ ಮತ್ತು ಅರ್ಜುನ್ ಕಪೂರ್ ಕೂಡಾ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ಶ್ರೀದೇವಿಯವರ ಪಾರ್ಥಿವ ಶರೀರವನ್ನು ಭಾರತಕ್ಕೆ ಬಂದ ನಂತರ ಶವವನ್ನು ಅಂತ್ಯಕ್ರಿಯೆ ಮಾಡಲಾಗುವುದು ಆದರೆ ಶವಸಂಸ್ಕಾರವನ್ನು ಯಾರು ಮಾಡುತ್ತಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ, ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಶ್ರೀದೇವಿ ನನ್ನ ತಂದೆಯ ಹೆಂಡತಿಯೇ ಹೊರೆತು ನನ್ನ ಸ್ವಂತ ತಾಯಿ ಅಲ್ಲ, ಅದೇ ರೀತಿ ಜಾಹ್ವವಿ ಕಪೂರ್ ತಂಗಿಯಲ್ಲ ಎಂದು ಹೇಳಿದ್ದ ನಟ ಅರ್ಜುನ್ ಕಪೂರ್ ತನ್ನ ಚಿಕ್ಕಮ್ಮ ಶ್ರೀದೇವಿಯ ಅಂತ್ಯಕ್ರಿಯೆ ನೆರವೇರಿಸುತ್ತಾರೆಯೇ ಇಲ್ಲವೇ ಎಂಬುದು ಇದೀಗ ಕುತೂಹಲಕ್ಕೆ ಕೆರಳಿಸಿದೆ.

 

 

ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಪುತ್ರ ಅರ್ಜುನ್ ಕಪೂರ್ ಶ್ರೀದೇವಿಯನ್ನು ತಾಯಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಆದರೆ ಅರ್ಜುನ್ ಶ್ರೀದೇವಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಅವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು,. ಸ್ವತಃ ಅರ್ಜುನ್ ಕೂಡ ತಾವು ಶ್ರೀದೇವಿಯವರನ್ನು ಗೌರವಿಸುವುದಾಗಿ ಮಾತು ಅವರಿಗೆ ಕೆಟ್ಟದನ್ನು ಮಾಡದಿರುವುದಾಗಿ ಹೇಳಿಕೊಂಡಿದ್ದರು,, ತಮ್ಮ ಚಿಕ್ಕಮ್ಮನ ಮೇಲೆ ಗೌರವವನ್ನು ಇಟ್ಟುಕೊಂಡಿದ್ದ ಅರ್ಜುನ್ ಈಗ ಆಕೆಯ ಅಂತ್ಯ ಸಂಸ್ಕಾರ ಮಾಡುತ್ತಾರೆಯೇ ಎಂಬುದನ್ನು ಕಾದುನೋಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top