fbpx
ಪ್ರಯಾಣ

ಜಗತ್ತಿನ ಅತ್ಯಂತ ಮನೋಹರ ಜಲಪಾತಗಳು

1. ಇಗವಾಜು ಜಲಪಾತ
ಬ್ರೆಜಿಲ್ ಹಾಗೂ ಅರ್ಜೆಂಟೈನಾದ ಅದ್ಭುತ ನೈಸರ್ಗಿಕ ಆಕರ್ಷಣೆಯಾಗಿದೆ. ಈ ಎರಡೂ ದೇಶಗಳ ಗಡಿಯಲ್ಲಿ ಈ ಜಲಪಾತ ವಿಸ್ತಾರವಾಗಿ ಹರಡಿಕೊಂಡಿದೆ. ಗೌರಾನಿಯಲ್ಲಿ ಇಗುವಾಜು ಎಂದರೆ ಬೃಹತ್ ನೀರು ಎಂದರ್ಥ. ದಂತಕತೆಯ ಪ್ರಕಾರ ದೇವರು ಓರ್ವ ಯುವತಿಯನ್ನು ವಿವಾಹವಾಗಲು ಬಯಸಿದಾಗ, ಆಕೆ ಅದನ್ನು ತಿರಸ್ಕರಿಸಿ ತನ್ನ ಪ್ರೇಮಿಯನ್ನು ಕೂಡಿಕೊಳ್ಳಲು ನದಿಯಾಗಿ ಹರಿದಳಂತೆ! ಮತ್ತೊಂದು ಕತೆಯ ಪ್ರಕಾರ ಪ್ರೇಮಿಗಳನ್ನು ಖಂಡಿಸಿದ ದೇವರು ಜಲಪಾತಗಳನ್ನು ಸೃಷ್ಟಿಸಿದನಂತೆ.

2. ಅಲ್‍ಫ್ರೆಡ್ ಕ್ರೀಕ್
ಗ್ರೀಸಿಯರ್ ಕ್ರೀಕ್ ಎಂದು ಕರೆಯಲ್ಪಡುತ್ತಿದ್ದ ಈ ಜಲಪಾತವನ್ನು ಈಗ ಆಲ್‍ಫ್ರೆಡ್ ಕ್ರೀಕ್ ಎನ್ನಲಾಗುತ್ತಿದೆ. ಇದು ಕೊಲಂಬಿಯಾದ ದಕ್ಷಿಣ ಕರಾವಳಿಯುದ್ದಕ್ಕೂ ಪ್ರವಹಿಸುತ್ತದೆ. ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್‍ರ ಪುತ್ರ ಮೌಂಟ್ ಆಲ್‍ಫ್ರೆಡ್‍ರಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ. ಪೆಸಿಫಿಕ್ ಪರ್ವತ ಶ್ರೇಣಿಗಳಲ್ಲಿ ಈ ಜಲಪಾತವಿದೆ. ಇದರ ಉದ್ದ 2,297 ಅಡಿಗಳಿದ್ದು, ಉತ್ತರ ಅಮೆರಿಕದ ಅತಿ ಎತ್ತರದ ಜಲಪಾತವೆನಿಸಿದೆ.

3. ಅಗ್ರಾಬಿಸ್ ಜಲಪಾತ
ದಕ್ಷಿಣ ಆಫ್ರಿಕಾದ ಉತ್ತರ ಪ್ರಾಂತ್ಯದ ಆರೇಂಜ್ ನದಿಯ ಜಲಪಾತವಿದು. ಸರಿಸುಮಾರು 60 ಮೀಟರ್ ಎತ್ತರವಿದ್ದು, ಸೆಕೆಂಡಿನ ಧುಮ್ಮಿಕ್ಕುವಿಕೆಯಲ್ಲಿ 7,800 ಕ್ಯುಬಿಕ್ ಮೀಟರ್ ನೀರು ಹರಿಯುತ್ತದೆ. ಈ ಪ್ರದೇಶವು ವಜ್ರಗಳ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ.

4.ಬಟಾರಾ ಗಾರ್ಗ್ ಜಲಪಾತ
ಲೆಬೆನಾನಿನ ಈ ಅತಿ ಸುಂದರ ಜಲಪಾತವು ಪ್ರಕೃತಿಯ ವಿಸ್ಮಯಗಳಲ್ಲೊಂದು. ಲೆಬೆನಾನಿನ ಪರ್ವತ ಪ್ರದೇಶದಲ್ಲಿರುವ ಈ ಅದ್ಭುತ ಜಲಪಾತದಲ್ಲಿ ನೀರು ಗುಹೆಯೊಂದಕ್ಕೆ ಬೀಳುವ ಮನಮೋಹಕ ದೃಶ್ಯ ನೋಡಲು ಚೆನ್ನ. ಜೊತೆಗೆ ಹೀಗೆ ನೀರು ಬೀಳುವ ಹಾದಿಯಲ್ಲಿ ನೈಸರ್ಗಿಕ ಸೇತುವೆಯೊಂದು ನಿರ್ಮಾಣವಾಗಿದ್ದು, ಜಲಪಾತ ಹಾಗೂ ಗುಹೆಯ ನಡುವೆ ನಿರ್ಮಾಣವಾಗಿರುವ ಸೇತುವೆಯ ಮೇಲೆ ನಿಲ್ಲಬಹುದಾಗಿದೆ. ವಸಂತಕಾಲದಲ್ಲಿ ಹಿಮ ಕರಗಿ 100 ಮೀಟರ್‍ನ ಕಿರುಜಲಪಾತದ ನೀರು ಕಮರಿಗೆ ಬೀಳುವ ಅಪೂರ್ವ ದೃಶ್ಯ ನೋಡುಗರಿಗೆ ದೊರೆಯುತ್ತದೆ.

5.ಬ್ಲಾಂಚೆ ಕಾಸ್‍ಕೇಡ್
ರಿಯೂನಿಯನ್ ದ್ವೀಪಗಳಲ್ಲಿರುವ ಸುಪ್ರಸಿದ್ದ ಜಲಪಾ ಬ್ಲಾಂಚೆ ಕಾಸ್‍ಕೇಡ್ 2100 ಮೀಟರ್ ಎತ್ತರವಿದೆ ಎಂಬುದನ್ನು ಅಲ್ಲಗಳೆಯುವ ಕೆಲವರು ಇದರ ಎತ್ತರ 800 ಮೀಟರ್ ಎಂದು ವಾದಿಸುತ್ತಾರೆ. ಮಡಗಾಸ್ಕರ್ ತೀರ ಪ್ರದೇಶದಲ್ಲಿರುವ ರಿಯುನಿಯನ್ ಐಲ್ಯಾಂಡ್‍ನಲ್ಲಿ ಇಂತಹ ಅತಿಸುಂದರವಾದ ಹಲವಾರು ಜಲಪಾತಗಳಿವೆ. ಅಂತಹ ಸುಂದರಾತಿಸುಂದರ ಜಲಪಾತಗಳಲ್ಲಿ ಇದೂ ಒಂದು.

6.ಬ್ಲೂ ನೈಲ್ ಫಾಲ್ಸ್
ಈ ಜಲಪಾತವು ಇಥಿಯೋಪಿಯಾದ ಬ್ಲೂ ನೈಲ್ ನದಿಗೆ ಸೇರಿದೆ. ಅಮ್‍ಹ್ಯಾರಿಕ್‍ನಲ್ಲಿ ಬ್ಲೂನೈಲ್ಸ್ ಎಂದರೆ `ಸ್ಮೋಕಿಂಗ್ ವಾಟರ್.’ ಈ ಜಲಪಾತವು ಇಥಿಯೋಪಿಯಾದ ಸುಂದರ ಜಲಪಾತವೆನಿಸಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

7. ಕ್ಯಾಸ್‍ಕಾಟಾ ಡೆಲ್ಲೆ ಮರ್‍ಮೋರೆ
ಇಟಲಿಯಲ್ಲಿರುವ ಈ ಜಲಪಾತವು ನೋಡಲು ಅದ್ಭುತವಾಗಿದೆ. ವಿಶೇಷವೆಂದರೆ ಇದು ಮಾನವನಿರ್ಮಿತ ಜಲಪಾತವಾಗಿದ್ದು ರೋಮನ್ನರು ಇದರ ಸೃಷ್ಟಿಕರ್ತರು. ಅದಕ್ಕಿಂತ ಮಿಗಿಲಾಗಿ ಯುರೋಪಿನ ಅತ್ಯಂತ ಎತ್ತರದ ಜಲಪಾತಗಳಲ್ಲಿ ಇದೂ ಒಂದು ಎಂದು ಹೆಸರಾಗಿದ್ದು, ಜೊತೆಗೆ ಮಾನವನಿರ್ಮಿತ ಜಲಪಾತಗಳಲ್ಲಿ ಅತ್ಯಂತ ಎತ್ತರದ್ದೆಂದು ಪ್ರಖ್ಯಾತವಾಗಿದೆ.

8.ಕ್ಯುಮಿನ್ ಫಾಲ್ಸ್
ಜಾಕ್ಸನ್ ದೇಶದ ಟೆನ್ನಾಸಿಯ ಬ್ಲಾಕ್‍ಫೋಕ್ ಕ್ರೀಕ್‍ನಲ್ಲಿ ಈ ಜಲಪಾತವಿದೆ. ಇದು ಟೆನ್ನಾಸಿಯಲ್ಲಿ ಖಾಸಗಿ ಒಡೆತನದಲ್ಲಿರುವ ಅತ್ಯಂತ ದೊಡ್ಡ ಜಲಪಾತ ಹಾಗೂ ಹಾಗೂ ಇಲ್ಲಿನ ಎಂಟು ದೊಡ್ಡ ಜಲಪಾತಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ.

9.ಡೆಲ್ಲಾ ಜಲಪಾತ
ಇದು ವ್ಯಾನ್‍ಕೋವರ್ ದ್ವೀಪದ ಅತ್ಯಂತ ದೊಡ್ಡ ಜಲಪಾತ. 1443 ಎತ್ತರವಿರುವ ಈ ಜಲಪಾತ ಕೆನಡಾದ ಅತ್ಯಂತ ಉದ್ದದ ಜಲಪಾತ ಎನಿಸಿದೆ. ಜೊತೆಗೆ ಇದು ಅತ್ಯಂತ ಸುಂದರ ಹಾಗೂ ಆಕರ್ಷಕ ಜಲಪಾತವೆನಿಸಿದೆ.

10.ಡೆಟಿಯನ್ ಬೇಯು ಜಲಪಾತ
ಚೀನಾದ ಒಯೆ ಕ್ಸುವಾನ್ ನದಿಯ ಎರಡು ಜಲಪಾತಗಳಿಂದ ಈ ಜಲಪಾತವು ನಿರ್ಮಾಣವಾಗಿದೆ. ಇದರ ಜೊತೆಗೆ ಈ ಜಲಪಾತವು ಚೀನಾ ಹಾಗೂ ವಿಯೆಟ್ನಾಂ ದೇಶಗಳಲ್ಲೂ ವಿಸ್ತಾರವಾಗಿ ಹರಡಿದೆ. ವಿಶೇಷವೆಂದರೆ ನೀರು ಧುಮ್ಮಿಕ್ಕುವ, ಭೊರ್ಗರೆವೆ ಶಬ್ದ ಬಹು ದೂರಕ್ಕೂ ಕೇಳಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top