fbpx
ಕನ್ನಡ

ಕನ್ನಡಿಗನಲ್ಲದ ರಾಜೀವ್ ಗೆ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಬೇಕಾ?

ಕಳೆದ 12 ವರ್ಷಗಳಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯದಿಂದ ಮತ್ತೂಂದು ಅವಧಿಗೆ ಆಯ್ಕೆ ಮಾಡುವುದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ರಚಿಸಿಕೊಂಡಿರುವ ಸಾಮಾನ್ಯ ಕನ್ನಡಿಗ ಬಳಗವು “#RajeevBeda’ ಎಂಬ ಟ್ಯಾಗ್‌ ಲೈನ್’ನೊಂದಿಗೆ ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಅಭಿಯಾನ ಆರಂಭಿಸಲಾಗುತ್ತಿದೆ..

 

 

ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುತ್ತಿರುವುದನ್ನು ವಿರೋಧಿಸಿ #RajeevBeda ಹ್ಯಾಷ್‌ಟ್ಯಾಗ್‌ನೊಂದಿಗೆ (# ಚಿಹ್ನೆ ಬಳಸಿ ನಿರ್ದಿಷ್ಟ ವಿಷಯವನ್ನು ಉಲ್ಲೇಖೀಸುವ ತಂತ್ರಜ್ಞಾನ) ಟ್ವೀಟರ್‌ ಅಭಿಯಾನ ಆರಂಭಿಸಲಾಗುತ್ತಿದ್ದು ಕರ್ನಾಟಕವೂ ಸೇರಿ ದೇಶ-ವಿದೇಶಗಳ ಕನ್ನಡಿಗರಿಂದ ಒಮ್ಮತದ ಬೆಂಬಲ ಲಭ್ಯವಾಗುತ್ತಿದೆ.

ರಾಜೀವ್ ಬೇಡ: 12 ವರ್ಷಗಳಿಂದ ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಶೇಖರ್ ಅವರು ರಾಜ್ಯದಿಂದ ಎರಡು ಬಾರಿ ಆಯ್ಕೆಯಾಗಿದ್ದರೂ ಕನಿಷ್ಠ ಎರಡು ಕನ್ನಡ ಪದವನ್ನೂ ಅವರು ಕಲಿತಿಲ್ಲ. ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯವೆಂಬುದು ಸಾಮಾನ್ಯ ಕನ್ನಡಿಗ ಬಳಗದ ದೂರು.

 

 

ಉಂಡು ಹೋದ, ಕೊಂಡೂ ಹೋದ ಎಂಬ ಗಾದೆಯಂತೆ ರಾಜ್ಯಸಭೆ ಚುನಾವಣೆಗೆ ಮಾತ್ರ ಹಾಜರಾಗಿ, ಗೆದ್ದ ನಂತರ ಕರ್ನಾಟಕದ ಉಸಾಬರಿಗೆ ಬರದ ಮಲೆಯಾಳಿ ಅಸಾಮಿಯ ವರ್ತನೆಯಿಂದ ಕನ್ನಡಿಗರು ಬೇಸತ್ತಿರುವ ಕನ್ನಡಿಗರು ಈ ಭಾರಿ ನಮ್ಮ ನೆಲದ ವ್ಯಕ್ತಿಗಳನ್ನ ಆಯ್ಕೆ ಮಾಡುವ ಇರಾದೆ ಇಟ್ಟುಕೊಂಡಿದ್ದು ರಾಜೀವ್ ಚಂದ್ರಶೇಖರ್ ರಂತಹ ಉಂಡೆ ನಾಮದ ಗಿರಾಕಿಯಿಂದ ತೊಡೆತಟ್ಟಿ ನಿಂತಿದ್ದಾರೆ..

 

ಈ ಹಿಂದೆ ಕನ್ನಡ ಎಂದರೆ ಮೂರು ಮೈಲಿ ದೂರ ಹೊಡಿ ಹೋಗುವಂತ ಬುದ್ದಿ ಹೊಂದಿದ್ದ ವೆಂಕಯ್ಯ ನಾಯ್ಡು ವಿಷಯದಲ್ಲೂ ಕೂಡ ಇದೇ ರೀತಿಯ #ವೆಂಕಯ್ಯ_ಸಾಕಯ್ಯ ಎಂಬ ಟ್ವಿಟರ್ ಅಭಿಯಾನವನ್ನು ಕೈಗೊಂಡು ಅವರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪುವಂತೆ ಮಾಡಲಾಗಿತ್ತು.#ವೆಂಕಯ್ಯ_ಸಾಕಯ್ಯ ಎಂಬ ಹ್ಯಾಷ್‌ಟ್ಯಾಗ್‌ ಟ್ವೀಟರ್‌ನಲ್ಲಿ ಅಖೀಲ ಭಾರತ ಮಟ್ಟದಲ್ಲಿ ನಂ.1 ಟ್ರೆಂಡ್‌ (ವಿದ್ಯಮಾನ) ಅನಿಸಿಕೊಂಡಿತು. ಬೆಂಗಳೂರು ಟ್ರೆಂಡಿಂಗ್‌ ಪಟ್ಟಿಯಲ್ಲೂ ಪ್ರಥಮ ಸ್ಥಾನಕ್ಕೇರಿತು. ನಂತರವೂ ಟ್ವೀಟರ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೆಂಕಯ್ಯ ಅವರ ಮರು ಆಯ್ಕೆ ವಿರೋಧಿಸಿ ತೀವ್ರ ಚರ್ಚೆಗಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top