fbpx
ತಂತ್ರಜ್ಞಾನ

ವಾಟ್ಸಪ್’ನಲ್ಲಿ ಬಂತು ಎಲ್ಲರಿಗೂ ಅನುಕೂಲವಾಗುವಂತಹ ಒಂದು ಅದ್ಭುತ ಹೊಸ ಆಪ್ಷನ್!

ವಾಟ್ಸ್ ಅಪ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ . ಇದಕ್ಕೂ ಮುನ್ನ ಪ್ರತ್ಯೇಕ ವ್ಯಕ್ತಿಗೆ ಅಥವಾ ಗ್ರೂಪ್’ನಲ್ಲಿ ಕಳಿಸಿದ ಮೆಸೇಜ್’ಅನ್ನು ಡೆಲಿಟ್ ಫಾರ್ ಎವರಿಒನ್ ಮಾಡಲು 7 ನಿಮಿಷದ ಒಳಗಾಗಿ ಮಾತ್ರ ಮಾಡಲು ಅವಕಾಶವಿತ್ತು. ಅಷ್ಟರೊಳಗೆ ಮೆಸೇಜ್ ಡಿಲೀಟ್ ಮಾಡಿದರೆ ಕಳಿಸಿದ ಸಂದೇಶ ಶಾಶ್ವತವಾಗಿ ಅಳಿಸಿಹೋಗುತ್ತಿತ್ತು.. ಒಂದು ವೇಳೆ 7 ನಿಮಿಷ ಮೀರಿದರೆ ಸಂದೇಶವನ್ನು ಡಿಲೀಟ್ ಮಾಡುವುದು ಅಸಾಧ್ಯವಾಗಿತ್ತು..

 

 

ಬಳಕೆದಾರರ ಈ ಸಮಸ್ಯೆಯನ್ನು ಪರಿಗಣಿಸಿರುವ ಶೀಘ್ರದಲ್ಲೇ ಮೆಸೇಜ್ ಹೆಚ್ಚು ಅವಧಿಯ ಬಳಿಕವೂ ನೀವು ರವಾನಿಸಿದ ಮೆಸೇಜ್ ಅನ್ನು ಡೆಲೀಟ್ ಮಾಡುವ ಸೌಲಭ್ಯವನ್ನು ವಾಟ್ಸಪ್ ಪರಿಚಯಿಸುತ್ತಿದೆ. ಪರಿಚಯಿಸುತ್ತಿರುವ ಹೊಸ ಸೌಲಭ್ಯದ ಪ್ರಕಾರ 68 ನಿಮಿಷ ಅಂದರೆ ಒಟ್ಟು 4096 ಸೆಕೆಂಡ್’ಗಳ ಕಾಲದೊಳಗೆ ನೀವು ಪ್ರತ್ಯೇಕ ವ್ಯಕ್ತಿಗೆ ಅಥವಾ ಗ್ರೂಪಿನಲ್ಲಿ ಕಳಿಸಿದ ಎಲ್ಲಾ ರೀತಿಯ ಮೆಸೇಜುಗಳನ್ನು ನಿಮಗೂ ಮತ್ತು ಮೆಸೇಜ್ ಸ್ವೀಕರಿಸಿದವರಿಗೂ ಇಬ್ಬರಿಗೂ ಡಿಲೀಟ್ ಮಾಡಬಹುದು.

 

 

ಕಳೆದ ನವೆಂಬರ್’ನಲ್ಲಿ 7 ನಿಮಿಷದ ಒಳಗೆ ಮೆಸೇಜ್’ಅನ್ನು ಅಳಿಸಿ ಹಾಕುವ ಆಯ್ಕೆಯನ್ನು ಪರಿಚಯಿಸಲಾಗಿತ್ತು. ಈಗ 68 ನಿಮಿಷ ನಿಮಿಷದವರೆಗೆ ವಿಸ್ತರಿಸಲಾಗಿದೆ. ಈ ಹೊಸ ಸೌಲಭ್ಯ ವಾಟ್ಸಪ್’ನ 2.18.69 ಬೀಟಾ ವರ್ಷನ್’ನಲ್ಲಿ ಲಭ್ಯವಿರಲಿದೆ. ನೀವು ಕಳಿಸಿದ ಮೆಸೇಜ್’ಅನ್ನು ಒತ್ತಿ ಹಿಡಿದು ವಾಟ್ಸ’ಪ್’ನಲ್ಲಿರುವ ಡೆಲೀಟ್ ಆಫ್ಷನ್ ಒತ್ತಿದರೆ ‘ಡೆಲೀಟ್ ಫಾರ್ ಮಿ, ಕ್ಯಾನ್ಸ್’ಲ್ ಹಾಗೂ ಡೆಲಿಟ್ ಫಾರ್ ಎವರಿಒನ್’ ಆಯ್ಕೆಗಳು ಬರುತ್ತವೆ. ಆಗ ನೀವು ಡೆಲಿಟ್ ಫಾರ್ ಎವರಿಒನ್ ಒತ್ತಿದರೆ ಆ ಮೆಸೇಜು ನಿಮಗೂ ಮತ್ತು ಮೆಸೇಜ್ ಸ್ವೀಕರಿಸಿದವರಿಗೂ ಶಾಶ್ವತವಾಗಿ ಡಿಲೀಟ್ ಆಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top